ಅಟ್ಟಹಾಸ ಚಿತ್ರದ ಬಗ್ಗೆ ಒಂದಷ್ಟು ಒಳನೋಟಗಳು

By Rajendra

ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಗಳಿಗೆ ಕಾರಣವಾದ ಚಿತ್ರ 'ಅಟ್ಟಹಾಸ'. ಈ ಚಿತ್ರವನ್ನು ತೆರೆಗೆ ತರಲು ಸುದೀರ್ಘ ಸಮಯವನ್ನೇ ತೆಗೆದುಕೊಂಡಿದ್ದಾರೆ ನಿರ್ದೇಶಕ ಎಎಂಆರ್ ರಮೇಶ್. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಪ್ರೇಮಿಗಳ ದಿನಾಚರಣೆ (ಫೆ.14) ಸಂದರ್ಭದಲ್ಲಿ ಚಿತ್ರ ತೆರೆಗೆ ಬರುತ್ತಿರುವುದು ಇನ್ನೊಂದು ವಿಶೇಷ. ದಂತಚೋರ, ಕಾಡುಗಳ್ಳ, ನರಹಂತಕ ವೀರಪ್ಪನ್ ಜೀವನ ಕತೆಯಾಧಾರಿತ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

ಕನ್ನಡದ ಪ್ರತಿಭಾನ್ವಿತ ನಟ ಕಿಶೋರ್ ಅವರು ವೀರಪ್ಪನ್ ಪಾತ್ರವನ್ನು ಪೋಷಿಸಿದ್ದಾರೆ. ವೀರಪ್ಪನ್ ಪತ್ನಿ ಪಾತ್ರದಲ್ಲಿ ವಿಜಯಲಕ್ಷ್ಮಿ ಇದ್ದಾರೆ. ವೀರಪ್ಪನ್ ಪಾತ್ರವನ್ನು ಪೋಷಿಸುವುದು ಯಾವುದೇ ಕಲಾವಿದನಿಗೆ ಒಂದು ಸವಾಲು. ನಿರ್ದೇಶಕರ ಜೊತೆ ಸಾಕಷ್ಟು ಸಮಯ ಕಳೆದ ಕಾರಣ ವೀರಪ್ಪನ್ ಪಾತ್ರದೊಳಗೆ ಪ್ರವೇಶಿಸಲು ಸಾಧ್ಯವಾಯಿತು ಎನ್ನುತ್ತಾರೆ ಕಿಶೋರ್.

ಕಾಡಿನಲ್ಲೇ ಚಿತ್ರೀಕರಿಸಿರುವ ಚಿತ್ರ

ಕಾಡಿನಲ್ಲೇ ಚಿತ್ರೀಕರಿಸಿರುವ ಚಿತ್ರ

ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ವೀರಪ್ಪನ್ ವಾಸಿಸುತ್ತಿದ್ದಂತಹ ಸ್ಥಳಗಳಲ್ಲೇ ಚಿತ್ರೀಕರಿಸಿರುವುದು. ಇಡೀ ಚಿತ್ರವನ್ನು ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಸಂದೀಪ್ ಚೌಟ ಅವರ ಸಂಗೀತ ಚಿತ್ರಕ್ಕೆ ಇನ್ನೊಂದು ಆಯಾಮವನ್ನು ಒದಗಿಸಿದೆ.

ರಾಜ್ ಪಾತ್ರದಲ್ಲಿ ಸುರೇಶ್ ಒಬೆರಾಯ್

ರಾಜ್ ಪಾತ್ರದಲ್ಲಿ ಸುರೇಶ್ ಒಬೆರಾಯ್

ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ವರನಟ ಡಾ.ರಾಜ್ ಕುಮಾರ್ ಅವರ ಪಾತ್ರದಲ್ಲಿ ಸುರೇಶ್ ಒಬೆರಾಯ್, ಪಾರ್ವತಮ್ಮ ಪಾತ್ರದಲ್ಲಿ ಸುಲಕ್ಷಣಾ, ಸೇತುಕುಳಿ ಗೋವಿಂದನ್ ಪಾತ್ರದಲ್ಲಿ ಸಂಪತ್ ರಾಮ್ ಅಭಿನಯಿಸಿದ್ದಾರೆ.

ರಮೇಶ್ ಹೋಂವರ್ಕ್, ಸಂಶೋಧನೆ

ರಮೇಶ್ ಹೋಂವರ್ಕ್, ಸಂಶೋಧನೆ

'ಅಟ್ಟಹಾಸ' ಚಿತ್ರ ಕಳೆದುಹೋದಂತಹ ಒಂದು ಕಾಲಘಟ್ಟಕ್ಕೆ ಪ್ರೇಕ್ಷಕರನ್ನು ಕರೆದೊಯ್ಯಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕಾಗಿ ಚಿತ್ರದ ನಿರ್ದೇಶಕ ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ. 2006ರಿಂದ ವೀರಪ್ಪನ್ ಬಗ್ಗೆ ಸಂಶೋಧನೆ ಮಾಡಿದ್ದಾರೆ.

ಚಿತ್ರ ವಿಳಂಬಕ್ಕೆ ಕಾರಣಗಳೇನು?

ಚಿತ್ರ ವಿಳಂಬಕ್ಕೆ ಕಾರಣಗಳೇನು?

ಚಿತ್ರಕ್ಕಾಗಿ ಒಂದು ವರ್ಷ ಕಾಲ ಶ್ರಮಿಸಿದ್ದಾರೆ ನಿರ್ದೇಶಕರು. ಇದಕ್ಕಾಗಿ ಸಾಕಷ್ಟು ಸಮಯ, ಹಣ ಎರಡನ್ನೂ ಬಂಡವಾಳವಾಗಿ ಹೂಡಿದ್ದೇನೆ. ಇಷ್ಟೋತ್ತಿಗೆ ಚಿತ್ರ ತೆರೆಕಾಣಬೇಕಾಗಿತ್ತು. ಆದರೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಹಾಗೂ ನಕ್ಕೀರನ್ ಗೋಪಾಲ್ ಕೋರ್ಟ್ ನಲ್ಲಿ ಕೇಸ್ ಹಾಕಿದ ಕಾರಣ ಮತ್ತೊಂದು ವರ್ಷ ವಿಳಂಬವಾಯಿತು ಎನ್ನುತ್ತಾರೆ ರಮೇಶ್.

ಮುಖ್ಯಪಾತ್ರದಲ್ಲಿ ಸುಚೇಂದ್ರ ಪ್ರಸಾದ್

ಮುಖ್ಯಪಾತ್ರದಲ್ಲಿ ಸುಚೇಂದ್ರ ಪ್ರಸಾದ್

ಇಷ್ಟಕ್ಕೂ ಚಿತ್ರದಲ್ಲಿ ಏನಿದೆ ಎಂದರೆ...ಆ ಗುಟ್ಟನ್ನು ಬಿಟ್ಟುಕೊಡಲು ರಮೇಶ್ ಸುತಾರಾಂ ಒಪ್ಪಲ್ಲ. ಚಿತ್ರ ನೋಡಿ ನೀವೇ ಹೇಳಿ ಎನ್ನುತ್ತಾರೆ. ಒಟ್ಟು 2 ಗಂಟೆ 15 ನಿಮಿಷಗಳ ಕಾಲವಧಿಯ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಅವರು ಮುಖ್ಯ ಪಾತ್ರವೊಂದನ್ನು ಪೋಷಿಸಿದ್ದಾರೆ.

ನಕ್ಕೀರನ್ ಗೋಪಾಲ್ ಕೂಡ ಸುಸ್ತು

ನಕ್ಕೀರನ್ ಗೋಪಾಲ್ ಕೂಡ ಸುಸ್ತು

ಆರಂಭದಲ್ಲಿ ಚಿತ್ರದ ಬಗ್ಗೆ ಕ್ಯಾತೆ ತೆಗೆದ ನಕ್ಕೀರನ್ ಗೋಪಾಲ್ ಬಳಿಕ ಚಿತ್ರವನ್ನು ನೋಡಿ ತಮ್ಮ ನಿರ್ಧಾರವನ್ನು ಬದಲಿಸಿಕೊಂಡರಂತೆ. ಇದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿ ಅವರಿಗೇ ಗೊತ್ತಿಲ್ಲದ ಬಹಳಷ್ಟು ಸಂಗತಿಗಳಿರುವುದು.

ಕ್ಯಾತೆ ತೆಗೆದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ

ಕ್ಯಾತೆ ತೆಗೆದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ

ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಮಾತ್ರ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. "ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ವೈಭವೀಕರಿಸಲಾಗಿದೆ" ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಆರೋಪಿಸಿದ್ದರು.

ಎರಡೇ ಕಡೆ ಕತ್ತರಿ ಹಾಕಿರುವುದು

ಎರಡೇ ಕಡೆ ಕತ್ತರಿ ಹಾಕಿರುವುದು

ಚಿತ್ರವನ್ನು ವೀಕ್ಷಿಸಿದ ಮುತ್ತುಲಕ್ಷ್ಮಿ 32 ಕಡೆ ಕತ್ತರಿ ಹಾಕಿದರೆ ಮಾತ್ರ ಬಿಡುಗಡೆಗೆ ಅನುಮತಿ ನೀಡುತ್ತೇನೆ ಎಂದಿದ್ದರಂತೆ. ಕಡೆಗೆ ಕೋರ್ಟ್ ನಲ್ಲಿ ವಾದ ವಿವಾದಗಳು ನಡೆದು ಎರಡು ಕಡೆ ಕತ್ತರಿ ಹಾಕಲು ಸೂಚಿಸಲಾಗಿದೆ. ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಈಗ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ ರಮೇಶ್.

ಕಥೆ ಹೇಳ್ತೇನೆ ನಾಲ್ಕು ಕೋಟಿ ಕೊಡಿ

ಕಥೆ ಹೇಳ್ತೇನೆ ನಾಲ್ಕು ಕೋಟಿ ಕೊಡಿ

ಈ ಸಿನಿಮಾ ಮಾಡಲು ರಮೇಶ್ ಅವರು ಮುತ್ತುಲಕ್ಷ್ಮಿ ಅವರನ್ನು ಸಂಪರ್ಕಿಸಿದ್ದರಂತೆ. ವೀರಪ್ಪನ್ ಬಗ್ಗೆ ಪತ್ನಿಯಿಂದಲೇ ಸ್ವಲ್ಪ ಮಾಹಿತಿ ಪಡೆಯಲು ಪ್ರಯತ್ನಿಸಿದ್ದರು. ಎಲ್ಲಾ ಮಾಹಿತಿ ಕೊಡ್ತೀನಿ ಬುಕ್ ಆದ್ರು ಬರ್ಕೊಳ್ಳಿ, ಸಿನಿಮಾನಾದ್ರು ಮಾಡಿ. ಆದರೆ ನನಗೆ ನಾಲ್ಕು ಕೋಟಿ ಕೊಡಿ ಎಂದಿದ್ದರಂತೆ.

ಫಲಿತಾಂಶಕ್ಕಾಗಿ ಕಾಯುತ್ತಿರುವ ರಮೇಶ್

ಫಲಿತಾಂಶಕ್ಕಾಗಿ ಕಾಯುತ್ತಿರುವ ರಮೇಶ್

ಸೈನೆಡ್ ಹಾಗೂ ಪೊಲೀಸ್ ಕ್ವಾಟ್ರಸ್ ಚಿತ್ರಗಳ ಮೂಲಕ ಎಎಂಆರ್ ರಮೇಶ್ ಚಿತ್ರೋದ್ಯಮದ ಗಮನಸೆಳೆದಿದ್ದರು. ಈಗ ಅಟ್ಟಹಾಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವರ ಮೇಲೆ ಬಹಳಷ್ಟು ನಿರೀಕ್ಷೆಗಳೂ ಇವೆ. ಚಿತ್ರ ವಿಮರ್ಶೆಗಾಗಿ ನಿರೀಕ್ಷಿಸಿ.

More from Filmibeat

English summary
AMR Ramesh's Kannada biopic Attahasa slated for release on 14th February. The story is based on the notorious forest brigand Veerappan. Kishore plays the role of Veerappan in the film. Read the insighsts of the film. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X