»   » ಕನ್ನಡದಲ್ಲಿ ಶುರುವಾಗಲಿದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸಿನಿಮಾ!

ಕನ್ನಡದಲ್ಲಿ ಶುರುವಾಗಲಿದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸಿನಿಮಾ!

Posted By:
Subscribe to Filmibeat Kannada
Gauri lankesh : AMR ramesh planning to do movie about gauri lankesh | Filmibeat Kannada

ಒಂದು ಕಡೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಯುತ್ತಿದೆ. ಇನ್ನೊಂದು ಕಡೆ ಈಗ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಕನ್ನಡದಲ್ಲಿ ಸಿನಿಮಾವೊಂದು ಶುರುವಾಗಲಿದೆ.

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಸಿನಿಮಾ ಮಾಡುವುದಕ್ಕೆ ಮುಂದಾಗಿರುವುದು ನಿರ್ದೇಶಕ ಎ.ಎಂ.ಆರ್.ರಮೇಶ್. ಈಗಾಗಲೇ ಅನೇಕ ರಿಯಲ್ ಸ್ಟೋರಿಗಳನ್ನು ಆಧರಿಸಿ ಸಿನಿಮಾ ಮಾಡಿರುವ ಎ.ಎಂ.ಆರ್.ರಮೇಶ್ ಈಗ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ.

ಗೌರಿ ಲಂಕೇಶ್ ನಿಧನಕ್ಕೆ ಸಂತಾಪ ಸೂಚಿಸಿದ 'ಕನಕ' ಚಿತ್ರತಂಡ

ಅಂದಹಾಗೆ, ನಿರ್ದೇಶಕ ಎ.ಎಂ.ಆರ್.ರಮೇಶ್ ಈ ಬಗ್ಗೆ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದಾರೆ. ಮುಂದೆ ಓದಿ..

ಸಿನಿಮಾ ಮಾಡುವುದು ಪಕ್ಕಾ

ಗೌರಿ ಲಂಕೇಶ್ ಬಗ್ಗೆ ಸಿನಿಮಾ ಮಾಡುತ್ತೀರಾ ಎಂಬ ನಮ್ಮ ಪ್ರಶ್ನೆಗೆ ''ಸಿನಿಮಾ ಮಾಡುವುದು ಪಕ್ಕಾ'' ಎಂದು ನಿರ್ದೇಶಕ ಎ.ಎಂ.ಆರ್ ರಮೇಶ್ ಉತ್ತರಿಸಿದ್ದಾರೆ.

ಹತ್ತಿರದಿಂದ ನೋಡಿದ್ದೇನೆ

''ಗೌರಿ ಲಂಕೇಶ್ ಸಿನಿಮಾ ಮಾಡುವ ಬಗ್ಗೆ ನನಗೆ ತುಂಬ ಆಸಕ್ತಿ ಇದೆ. ನಾನು ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಜೊತೆಗೆ ನಾನು ಇಂದ್ರಜಿತ್ ಲಂಕೇಶ್ ಅವರ ಜೊತೆ ಕೂಡ ಕೆಲಸ ಮಾಡಿದ್ದೇನೆ'' - ಎ.ಎಂ.ಆರ್ ರಮೇಶ್, ನಿರ್ದೇಶಕ.

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾತನಾಡಿದ ಟಾಲಿವುಡ್ ನಟ ಪವನ್ ಕಲ್ಯಾಣ್

ವಿವರಗಳನ್ನು ಕಲೆ ಹಾಕಿದ್ದೇನೆ

''ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆ ಒಂದೇ ರೀತಿಯಲ್ಲೇ ಆಗಿದೆ. ಸದ್ಯ ಈ ಬಗ್ಗೆ ರಿಸರ್ಚ್ ಮಾಡುತ್ತಾ ಇದ್ದೇನೆ. ಘಟನೆಯ ಬಗ್ಗೆ ಅನೇಕರನ್ನು ಸಂಪರ್ಕ ಮಾಡಿ, ಹತ್ಯೆಯ ಬಗ್ಗೆ ವಿವರಗಳನ್ನು ಕಲೆ ಹಾಕಿದ್ದೇನೆ'' - ಎ.ಎಂ.ಆರ್ ರಮೇಶ್, ನಿರ್ದೇಶಕ.

ಪೊಲೀಸ್ ತನಿಖೆ ಆಗಬೇಕು

''ಮೊದಲು ಪೊಲೀಸ್ ತನಿಖೆ ಆಗಬೇಕು. ಹತ್ಯೆ ಯಾರು ಮಾಡಿದ್ದು ಅವರಿಗೆ ಶಿಕ್ಷೆ ಆಗಬೇಕು. ನಂತರವೇ ನಾನು ಸಿನಿಮಾ ಮಾಡುವುದಕ್ಕೆ ಸಾಧ್ಯ. ಅಲ್ಲಿಯವರೆಗೂ ನಾನು ಕಾಯಬೇಕು. ಆದರೆ ಸದ್ಯಕ್ಕೆ ನಾನು ನನ್ನ ಮೂಲಗಳಲ್ಲಿ ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ'' - ಎ.ಎಂ.ಆರ್ ರಮೇಶ್, ನಿರ್ದೇಶಕ.

ಗೌರಿ ಲಂಕೇಶ್ ಹತ್ಯೆ ಬೆನ್ನಲ್ಲೆ ನಟ ಚೇತನ್ ಗೆ ಜೀವ ಬೆದರಿಕೆ

ಗೌರಿ ಅವರ ಪಾತ್ರದಲ್ಲಿ ಯಾರು ನಟಿಸುತ್ತಾರೆ

''ಗೌರಿ ಅವರ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ಇನ್ನು ಗೊತ್ತಿಲ್ಲ. ನಾನು ಕಥೆ ಸಿದ್ಧ ಮಾಡಿಕೊಂಡು ನಂತರ ಅದಕ್ಕೆ ಸರಿ ಹೊಂದುವ ಕಲಾವಿದರನ್ನು ಹುಡುಕುತ್ತೇನೆ'' - ಎ.ಎಂ.ಆರ್ ರಮೇಶ್, ನಿರ್ದೇಶಕ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸುದ್ದಿ ಕೇಳಿ ನಟಿ ರಕ್ಷಿತಾ ಹೃದಯ ಛಿದ್ರ

English summary
Director AMR Ramesh planning to do a movie based on senior journalist Gauri Lankesh murder.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada