ನಮ್ಮಿಬ್ಬರ ನಡುವೆ ಏನೂ ಇಲ್ಲ: ಡಾಲಿ, ಅಮೃತಾ ಪ್ರೇಮಿಗಳಲ್ವಂತೆ!

ಸಿನಿಮಾ ಲೋಕದಲ್ಲಿ ದಿನಕ್ಕೊಂದು ಕ್ಷಣಕ್ಕೊಂದು ಗಾಸಿಪ್‌ಗಳು ಜೀವ ಪಡೆದು ಕೊಳ್ಳುತ್ತವೆ. ಆದರೆ ಅದೆಲ್ಲವೂ ನಿಜ ಆಗಿರಬೇಕು ಎಂದೇನಿಲ್ಲ. ಆದರೆ ಹಲವು ಬಾರಿ ಗಾಸಿಪ್ ರೂಪದಲ್ಲಿ ಹುಟ್ಟಿದ ಸುದ್ದಿಗಳೇ ನಿಜವಾಗಿ ಬಿಡುತ್ತವೆ. ಈಗ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿರುವ ಹೊಸ ಗಾಸಿಪ್ ಎಂದರೆ ನಟಿ ಅಮೃತಾ ಅಯ್ಯಂಗಾರ್ ಮತ್ತು ಡಾಲಿ ಧನಂಜಯ್ ಪ್ರೇಮ್ ಕಹಾನಿ.

ಅಮೃತಾ ಮತ್ತು ಧನಂಜಯ್ ಹಲವು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರ್ತಿತ್ತು. ಈ ಸುದ್ದಿಗೆ ತುಪ್ಪ ಸುರಿದು ಮತ್ತಷ್ಟು ಹೆಚ್ಚು ಮಾಡಿದ್ದು, ನಟ ಧನಂಜಯ್ ಕಾರ್ಯಕ್ರಮದಲ್ಲಿ ಅಮೃತಾಗೆ ಪ್ರಪೋಸ್ ಮಾಡಿದ್ದು ಸನ್ನಿವೇಶ.

ನಿಮಗೂ ನೆನಪಿರ ಬಹುದು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮಕ್ಕೆ ಬಂದ ಈ ಜೋಡಿ ಹೆಚ್ಚು ಗಮನ ಸೆಳೆದಿತ್ತು. ಅದರಲ್ಲೂ ಧನಂಜಯ್ ಕಾರ್ಯಕ್ರಮದ ಭಾಗವಾಗಿ ಅಮೃತಾಗೆ ಪ್ರಪೋಸ್ ಮಾಡಿದ ರೀತಿ ಅಚ್ಚರಿ ಮೂಡಿಸಿತ್ತು.‌ಅಮೃತಾ ಮುಂದೆ ಮಂಡಿಯೂರಿ ಕುಳಿತು, ರೊಮ್ಯಾಂಟಿಕ್ ಆಗಿ ಕವಿತೆಯೊಂದನ್ನು ಬರೆದು ಹೇಳಿದ್ದರು.

"ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೆನು, ತೆಗೆದು ಬಚ್ಚಿಟ್ಟುಕೋ.. ಇಲ್ಲ ತುಳಿದು, ಕಾಲ್ ತೊಳೆದುಕೋ. ಬೇಡ ಈ ಮೌನ, ಮಾಡು ತೀರ್ಮಾನ" ಎಂದು ಕವಿತೆ ಹೇಳಿ ಬೆರಗು ಮೂಡಿಸಿದ್ದರು.

Amrutha Ayyangar Talk About Her Love Gossip With Daali Dhananjay

ಅದಾದ ಬಳಿಕ ಇವರ ನಡುವಿನ ಪ್ರೇಮ್ ಕಹಾನಿ‌ ನಿಜವೇ ಎಂದು ನಂಬಲಾಗಿತ್ತು.‌ ಆದರೆ ಈ ಬಗ್ಗೆ‌ ಕೇಳಿದರೆ ಅಮೃತಾ ಹೇಳುವುದೇ ಬೇರೆ. "ಇಬ್ಬರ ನಡುವೆ ಏನು ಇಲ್ಲ.‌ ನಾವು ಸ್ನೇಹಿತರಷ್ಟೇ" ಎಂದಿದ್ದಾರೆ‌. "ನಾನು ಧನಂಜಯ್ ಒಟ್ಟಿಗೆ ಹಲವು ಚಿತ್ರಗಳನ್ನು ಮಾಡಿದ್ದೇವೆ.‌ ಸಿನಿಮಾ ಪ್ರಚಾರಕ್ಕಾಗಿ ಇಬ್ಬರೂ ಒಟ್ಟಿಗೆ ಹೋಗಿದ್ದೇವೆ. ಪ್ರಪೋಸ್ ಮಾಡಿದ್ದು ಕೇವಲ ಕಾರ್ಯಕ್ರಮಕ್ಕಾಗಿ ಅಷ್ಟೆ. ಹಾಗಂತಾ ನಾವು ಪ್ರೇಮಿಗಳು ಎನ್ನುವುದು ಸರಿಯಲ್ಲ" ಎಂದು ಉತ್ತರ ಕಟ್ಟಿದ್ದಾರೆ.

ಅಮೃತಾ ಮತ್ತು ಧನಂಜಯ್ ಇಬ್ಬರೂ ‌'ಪಾಪ್ ಕಾರ್ನ್ ಮಂಕಿ ಟೈಗರ್', 'ಬಡವ ರಾಸ್ಕಲ್', ಚಿತ್ರದಲ್ಲಿ‌ ಒಟ್ಟಿಗೆ ನಟಿಸಿದ್ದಾರೆ. ಇನ್ನು 'ಬಡವ ರಾಸ್ಕಲ್' ಚಿತ್ರದಲ್ಲಿ ಅಮೃತಾಗಾಗಿ ಬರೆದ 'ಗಿಣಿಮರಿಯೇ' ಹಾಡು ಕೇಳಿದ ಮೇಲೆ ಇವರು ಪಕ್ಕಾ ಪ್ರೇಮಿಗಳು ಎನ್ನುವ ಹಾಗೆ ಮಾಡಿತ್ತು.

ಸದ್ಯ ಈ ಬಗ್ಗೆ ಪ್ರತಿಕ್ರಿಯೆ ‌ನೀಡಿರುವ ಅಮೃತಾ ಮಾತ್ರ ತಮ್ಮ ನಡುವೇ ಏನು ಇಲ್ಲ ಎಂದು, ಗಾಸಿಪ್ ಗೆ ತೆರೆ ಎಳೆದಿದ್ದಾರೆ. ಆದರೆ ಇದು ನಿಜವೋ ಅಥವಾ ಮುಂದೆ ನಾವು ಪ್ರೇಮಿಗಳೇ ಎನ್ನುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Amrutha Ayyangar Talk About Her Love Gossip With Daali Dhananjay, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X