ಧನಂಜಯ್ ಮದ್ವೆ ನಿಶ್ಚಯ; ಎಲ್ಲೋ ಸುಟ್ಟ ವಾಸನೆ ಬರ್ತಿದೆ ಎಂದವರಿಗೆ ಅಮೃತಾ ಉತ್ತರ ಏನು?

ನಟ ಡಾಲಿ ಧನಂಜಯ್ ಮದುವೆ ನಿಶ್ಚಯವಾಗಿದೆ. ಮುಂದಿನ ವರ್ಷವೇ ಪ್ರೀತಿಸಿದ ಹುಡುಗಿಯ ಕೈ ಹಿಡಿಯಲಿದ್ದಾರೆ. ಈಗಾಗಲೇ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿ ತನ್ನ ಹುಡುಗಿಯನ್ನು ಧನಂಜಯ್ ಪರಿಚಯಿಸಿದ್ದಾರೆ. ಗೆಳತಿ ಧನ್ಯತಾ ಜೊತೆ ಧನು ಹಸೆಮಣೆ ಏರಲಿದ್ದಾರೆ.

ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಅವರೊಟ್ಟಿಗೆ ಡಾಲಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ನಟ ಧನಂಜಯ್ ಹಾಗೂ ನಟಿ ಅಮೃತಾ ಅಯ್ಯಂಗಾರ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಇಬ್ಬರೂ ಹೇಳಿಕೊಂಡಿದ್ದರು. ಒಟ್ಟೊಟ್ಟಿಗೆ ಮೂರು ಚಿತ್ರಗಳಲ್ಲಿ ಧನು- ಅಮೃತಾ ನಟಿಸಿದ್ದರು. ಇಬ್ಬರ ಕೆಮೆಸ್ಟ್ರಿ ಚೆನ್ನಾಗಿತ್ತು. ಅದನ್ನು ನೋಡಿ ಇಬ್ಬರೂ ನಿಜ ಜೀವನದಲ್ಲಿ ಕೂಡ ಜೊತೆಯಾಗುತ್ತಾರೆ ಎಂದು ಕೆಲವರು ಭಾವಿಸಿದ್ದರು.

Amrutha Iyengar responds to netizen s sarcastic comment after Dhananjay marriage fixed

ಸದ್ಯ ಧನಂಜಯ್ ಮದುವೆ ಡಾ. ಧನ್ಯತಾ ಜೊತೆ ನಿಶ್ಚಯವಾಗಿದ್ದು ಎಲ್ಲಾ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. ಇದೆಲ್ಲದರ ನಡುವೆ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಮೇಡಂ ಎಂದು ಅಮೃತಾ ಅವರನ್ನು ಕೇಳಿದ್ದಾರೆ. ಆಗೋಣ ಸಮಯ ಬರುತ್ತದೆ ಎಂದು ಆಕೆ ಉತ್ತರಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಸಂಭ್ರಮದಲ್ಲಿ ಆಕೆ ಮಾಡಿರುವ ಪೋಸ್ಟ್‌ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಕೆಲವರು ಮದುವೆ ಬಗ್ಗೆಯೇ ಕೇಳಿದ್ದಾರೆ.

ಧನಂಜಯ್ ಮದುವೆ ಫಿಕ್ಸ್ ಆಯಿತು. ನಿಮ್ಮ ಮದುವೆ ಯಾವಾಗ ಮೇಡಂ? ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅಮೃತಾ, ಹೌದು ಎಂದು ಉತ್ತರಿಸಿದ್ದಾರೆ. ಬಳಿಕ ನಿಮ್ಮ ಕಥೆ ಏನು ಈವಾಗ? ಎಂದು ಕೇಳಿದ್ದಕ್ಕೆ ಯಾಕೆ ಅಷ್ಟು ಟೆನ್ಷನ್ ನಿಮ್ಗೆ, ಚಿಲ್ ಮಾಡಿ, ಸ್ವಲ್ಪ ಹಬ್ಬದ ಊಟ ಮಾಡಿ ಮಲ್ಕೊಳಿ ಎಂದು ರಿಪ್ಲೇ ಮಾಡಿದ್ದಾರೆ. ಮದುವೆ ಬನ್ನಿ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಕಣ್ರೀ ಕರೆದಿದ್ದಕ್ಕೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮೇಡಂ ಎಲ್ಲೋ ಸುಟ್ಟು ಹೋಗಿರುವ ವಾಸನ್ ಬರ್ತಿದೆ ಎಂದು ಮತ್ತೊಬ್ಬರು ಕುಹಕವಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಟಿ ಅಮೃತಾ ಅಯ್ಯಂಗಾರ್, "ಹೌದಾ? ನಿಮ್ ಮನೆ ಸ್ಟೌವ್ ಇರಬೇಕು, ಆಫ್ ಮಾಡಿ ಬನ್ನಿ ಹೋಗಿ" ಎಂದು ತಿರುಗೇಟು ನೀಡಿದ್ದಾರೆ.

Amrutha Iyengar responds to netizen s sarcastic comment after Dhananjay marriage fixed

'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಮೊದಲಿಗೆ ಧನಂಜಯ್ ಹಾಗೂ ಧನಂಜಯ್ ನಟಿಸಿದ್ದರು. ಬಳಿಕ 'ಬಡವ ರಾಸ್ಕಲ್' ಚಿತ್ರದಲ್ಲಿ ಜೋಡಿ ಜೊತೆಯಾಗಿತ್ತು. ನಂತರ 'ಗುರುದೇವ್ ಹೊಯ್ಸಳ' ಚಿತ್ರದಲ್ಲಿ ಮೂರನೇ ಬಾಗಿ ಜೊತೆಯಾಗಿದ್ದರು. ಹಿಂದೆ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಅಮೃತಾಗೆ ಧನಂಜಯ್ ಪ್ರಪೋಸ್ ಮಾಡುವಂತಹ ವೀಡಿಯೋ ಸಹ ವೈರಲ್ ಆಗಿತ್ತು.

ಅಂದಹಾಗೆ ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡದ ಹುಡುಗಿ. ಓದಿದ್ದು ಮೈಸೂರಿನಲ್ಲಿ. ಅರಸಿಕೆರೆ ಮೂಲದ ನಟ ಧನಂಜಯ ಸಹ ಓದಿದ್ದು ಮೈಸೂರಿನಲ್ಲಿ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಹಸೆಮಣೆ ಏರಲಿದ್ದಾರೆ. ಧನು- ಧನ್ಯತಾ ಇಬ್ಬರದ್ದು ಹಳೆಯ ಪರಿಚಯ. ಅದು ಮುಂದೆ ಸ್ನೇಹಕ್ಕೆ ತಿರುಗಿ ಪ್ರೀತಿಯಾಗು ಬದಲಾಗಿತ್ತು.

More from Filmibeat

English summary
After Dhananjay and dhanyatha marriage news actress Amrutha Iyengar reacts About her marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X