'ಅದೊಂದು ವಿಚಾರವನ್ನು ಧನಂಜಯ್ ನನ್ನಿಂದ ಮುಚ್ಚಿಟ್ಟಿದ್ದರು'- ಅಮೃತಾ ಅಯ್ಯಂಗಾರ್....!
ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ ಅನೇಕರಲ್ಲಿತ್ತು. ಈ ಅನುಮಾನವನ್ನು ಖುದ್ದು ಡಾಲಿ ಮೊನ್ನೆ ಮೊನ್ನೆ ಡಾ.ಧನ್ಯತಾ ಜೊತೆ ತಾವು ಮದುವೆಯಾಗುತ್ತಿರುವ ವಿಚಾರವನ್ನು ಹೇಳುವ ಮೂಲಕ ದೂರ ಮಾಡಿದ್ದರು.
ಆದರೆ.. ಅನೇಕರು ಈ ವಿಚಾರದಲ್ಲಿ ಸುಖಾ ಸುಮ್ಮನೆ ಅಮೃತಾ ಅಯ್ಯಂಗಾರ್ ಅವರನ್ನು ಇನ್ನೂ ನೋಯಿಸಲು ಶುರು ಮಾಡಿದರು. ಕೆಲವರು ಅಣ್ಣಂದು ಮದುವೆ ಫಿಕ್ಸ್ ಆಯ್ತು ನೀವು ಬೇಗ ಮದುವೆಯಾಗಿ ಎನ್ನುವ ಪುಕ್ಸಟ್ಟೆ ಸಲಹೆಯನ್ನು ನೀಡಿದರು. ಇನ್ನೂ ಕೆಲವರು ಕಾಲೆಳೆದರು. ಇವೆಲ್ಲವನ್ನೂ ನೋಡಿದ ಅನೇಕರು ಡಾಲಿ ಧನಂಜಯ್ ಮದುವೆ ಸುದ್ದಿಯನ್ನು ಕೇಳಿ ನಿಜಕ್ಕೂ ಅಮೃತಾ ಅಯ್ಯಂಗಾರ್ ಹೃದಯ ನುಚ್ಚು ನೂರಾಗಿದೆ ಎಂದೇ ಅಂದುಕೊಂಡಿದ್ದರು. ಆದರೆ, ವಾಸ್ತವದಲ್ಲಿ ಅಮೃತಾ ಅಯ್ಯಂಗಾರ್ ಮತ್ತು ಡಾಲಿ ಧನಂಜಯ್ ನಡುವೆ ಇದ್ದಿದ್ದು ಸ್ನೇಹ ಮಾತ್ರ. ಪ್ರೇಮ ಅಲ್ಲ. ಇನ್ನೂ ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಬಗ್ಗೆ ಜಗತ್ತಿಗೆ ಹೇಳುವ ಮೊದಲೇ ಅಮೃತಾ ಅಯ್ಯಂಗಾರ್ ಅವರಿಗೆ ಇವರ ಪ್ರೀತಿಯ ವಿಚಾರ ಗೊತ್ತಿತ್ತು. ಖುದ್ದು ಅಮೃತಾ ಅಯ್ಯಂಗಾರ್ ಈ ಮಾತನ್ನು ಈಗ ಹೇಳಿದ್ದಾರೆ.

ಹೌದು, ಅಸಲಿಗೆ ಡಾಲಿ ಧನಂಜಯ್ ಜೊತೆ ಮೂರು ಬಾರಿ ತೆರೆ ಹಂಚಿಕೊಂಡಿರುವ ಅಮೃತಾ ಈಗ ಇನ್ನೊಮ್ಮೆ ಧನು ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಹೆಸರು ಜಿಬ್ರಾ. ತೆಲುಗಿನಲ್ಲಿ ಸಿದ್ಧವಾಗಿರುವ ಈ ಚಿತ್ರ ಇನ್ನೇನು ಈ ಶುಕ್ರವಾರ ತೆರೆಗೆ ಬರಲಿದೆ. ಈ ಕಾರಣಕ್ಕೆ ಚಿತ್ರದ ಪ್ರಚಾರವನ್ನು ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಮಾಡುತ್ತಿದ್ದಾರೆ. ಸಹಜವಾಗಿ ಇಬ್ಬರು ಹೋದಲ್ಲಿ ಬಂದಲ್ಲಿ ಚಿತ್ರಕ್ಕಿಂತ ಹೆಚ್ಚು ಡಾಲಿ ಧನಂಜಯ್ ಅವರಿಗೆ ಮದುವೆ ವಿಚಾರದ ಕುರಿತು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಡಾಲಿ ಮದ್ವೆಯಾಗುತ್ತಿದ್ದಾರೆ ನಿಮಗೆ ಹೇಗೆ ಅನ್ಸುತ್ತಿದೆ ಎಂದು ಅಮೃತಾ ಅಯ್ಯಂಗಾರ್ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ. ಈ ಪ್ರಶ್ನೆಗಳಿಗೆ ಸಾಧ್ಯವಾದಷ್ಟು ನಗುಮುಖದೊಂದಿಗೆ ಉತ್ತರವನ್ನು ಕೊಡುತ್ತಿರುವ ಅಮೃತಾ ಅಯ್ಯಂಗಾರ್ ನನಗೆ ಧನಂಜಯ್ ಮದುವೆಯಾಗುತ್ತಿರುವ ವಿಚಾರ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ. ಈಗಲೂ ಹೇಳುತ್ತಿದ್ದಾರೆ.
ಹೌದು, ಅನೇಕ ಸಂದರ್ಶನಗಳಲ್ಲಿ ಈ ಕುರಿತು ಮಾತನಾಡಿರುವ ಅಮೃತಾ ಅಯ್ಯಂಗಾರ್,ಡಾಲಿ ಧನಂಜಯ್ ಮದುವೆ ನನಗೇನೂ ಸಪ್ರೈಸಿಂಗ್ ಆಗಿರಲಿಲ್ಲ. ನನಗೆ ಗೊತ್ತಿತ್ತು. ನನಗೆ ತುಂಬಾ ಹಿಂದೆನೇ ಹೇಳಿದ್ದರು. ನಾನು ತುಂಬಾ ಕಾಯುತ್ತಿದೆ. ಯಾವ ತರ ಎಲ್ಲರಿಗೂ ವಿಶೇಷವಾಗಿ ಹೇಳುತ್ತಾನೆ ಎನ್ನುವ ಕುತೂಹಲ ಇತ್ತು. ಅದೊಂದು ಮಾತ್ರ ನಮ್ಮಿಂದ ಸಿಕ್ರೇಟ್ ಆಗಿ ಇಟ್ಟಿದ್ದರು. ನಾನು ಒಂದು ಕಾನ್ಸೆಪ್ಟ್ ರೆಡಿ ಮಾಡಿದ್ದೇನೆ ಎಂದು ಧನಂಜಯ್ ಹೇಳುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ಇನ್ನೂ ಧನಂಜಯ್ ಅವರು ಮೊದಲಿಂದ ತುಂಬಾ ಚೆನ್ನಾಗಿ ಬರೆಯುತ್ತಾರೆ ಅದು ಎಲ್ಲರಿಗೂ ಗೊತ್ತಿರುವ ವಿಚಾರ ಅಂದಿರುವ ಅಮೃತಾ, ಧನು ಹುಡುಗಿ, ಪ್ರಕೃತಿ ಬಗ್ಗೆ ತುಂಬಾ ಚೆನ್ನಾಗಿ ಬರೆಯುತ್ತಾರೆ. ಹೀಗಾಗಿ ಯಾವ ರೀತಿ ಎಲ್ಲರಿಗೂ ಹೇಳುತ್ತಾರೆ ಎನ್ನುವ ಕುತೂಹಲ ತುಂಬಾ ಜಾಸ್ತಿ ಇತ್ತು. ವಿಷಯ ಮೊದಲೇ ಗೊತ್ತಿದ್ದರು ಅದನ್ನು ನೋಡಿದಾಗ ತುಂಬಾ ಖುಷಿ ಆಯ್ತು. ಯಾಕೆಂದರೆ ಆ ರೀತಿ ಒಂದು ಪ್ರೀತಿ ವ್ಯಕ್ತಪಡಿಸಿಕೊಳ್ಳುವುದು ಇದೆಯಲ್ಲಾ ಎಲ್ಲಾ ಹುಡುಗಿಯರದು ಡ್ರೀಮ್ ಅದು. ಅದನ್ನು ಧನಂಜಯ್ ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು ಧನಂಜಯ್ ಇದೇ ರೀತಿ ಕ್ರಿಯೇಟಿವ್ ಆಗಿ ಈ ವಿಚಾರವನ್ನು ಹೇಳಬಹುದು ಎಂದು ನಾನು ಅಂದುಕೊಂಡಿದ್ದೆ ಎಂದಿರುವ ಅಮೃತಾ, ಆ ವಿಡಿಯೋ ಕೊನೆಯಲ್ಲಿ 'ನಾನು ಧನ್ಯ' ಅಂತಾ ಹಾಕಿದ್ದರಲ್ಲಾ, ಆ ಕ್ಷಣ ನಂಗೆನೇ ರೋಮಾಂಚನ ಆಯ್ತು. ಎಷ್ಟು ಚೆನ್ನಾಗಿ ಯೋಚನೆ ಮಾಡಿ ಮಾಡಿದ್ದಾರೆ ಅಂತಾ ಎಂದಿದ್ದಾರೆ. ಧನಂಜಯ್ ಅವರ ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುವ ಹಾಗೇ ಇಲ್ಲ. ನಮ್ಮ ಅಮ್ಮ ಕೂಡ ಹೇಳುತ್ತಿದ್ದರು ಎಷ್ಟು ಚೆನ್ನಾಗಿ ಬರೆಯುತ್ತಾರೆ ಅಂತಾ. ನನಗೆ ಧನಂಜಯ್ ಜೊತೆ ಕೆಲಸ ಮಾಡಲು ತುಂಬಾ ಖುಷಿ ಇದೆ' ಎಂದು ನಟಿ ಅಮೃತ ಅಯ್ಯಂಗಾರ್ ಹೇಳಿದ್ದಾರೆ.
ಇನ್ನೂ ಡಾಲಿ ಧನಂಜಯ್ ಮದ್ವೆ ವಿಚಾರ ಹೊರ ಬಂದ ನಂತರ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಮತ್ತು ಟ್ರೋಲ್‌ಗಳನ್ನು ಕೂಡ ನೋಡಿದ್ದಾರೆ ಎಂದಿರುವ ಅಮೃತಾ, ನನ್ನ ಅಮ್ಮ ಈ ವಿಚಾರದ ಕುರಿತು ನನ್ನ ಬಳಿ ಮಾತನಾಡಿದ್ದರು. ನಿಮ್ಮ ಇಬ್ಬರ ಬಗ್ಗೆ ಜನ ಎಷ್ಟೆಲ್ಲ ಮಾತನಾಡುತ್ತಿದ್ದಾರಲ್ಲ ಎಂದು ಆಶ್ಚರ್ಯಗೊಂಡಿದ್ದರು. ಆಗ ನಾನು ಹೆಚ್ಚೇನು ತಲೆ ಕೆಡಿಸಿಕೊಳ್ಳಬೇಡಿ ಸಾರ್ವಜನಿಕ ಕ್ಷೇತ್ರದಲ್ಲಿದ್ದಾಗ ಇದೆಲ್ಲ ಮಾಮೂಲು, ಟ್ರೋಲ್‌ಗಳನ್ನು ನೋಡಿ ನೀವು ಖುಷಿ ಪಡಿ ಎಂದು ಹೇಳಿದ್ದೇ ಎಂದು ಕೂಡ ಅಮೃತಾ ಅಯ್ಯಂಗಾರ್ ಇದೇ ಸಮಯದಲ್ಲಿ ಹೇಳಿದ್ದಾರೆ.


Click it and Unblock the Notifications











