twitter
    For Quick Alerts
    ALLOW NOTIFICATIONS  
    For Daily Alerts

    ಬೋಸ್ಟನ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡದ 'ಅಮೃತಮತಿ' ಆಯ್ಕೆ

    |

    ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿ, ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಅಮೃತಮತಿ' ಸಿನಿಮಾ ಅಮೆರಿಕದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

    ಹದಿಮೂರನೇ ಶತಮಾನದ ಜನ್ನಕವಿ ಬರೆದಿರುವ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿ ಈ ಚಿತ್ರವನ್ನ ಮಾಡಲಾಗಿದ್ದು, ಇದೀಗ, ಅಮೆರಿಕದ ಬೋಸ್ಟನ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ವಿವಿಧ ದಶಗಳ ಚಿತ್ರಗಳ ಜೊತೆಗೆ ಹೊಸ ಭಾರತೀಯ ಚಿತ್ರಗಳಿಗೆ ಹೆಚ್ಚು ಅವಕಾಶ ಕೊಡುವ ಕಾರಣದಿಂದ ಈ ಚಿತ್ರೋತ್ಸವವನ್ನು 'ಇಂಡಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವ' ಹೆಸರಿನಲ್ಲಿ ನಡೆಸಲಾಗುತ್ತಿರುವುದು ವಿಶೇಷ.

    ಎರಡೇ ತಿಂಗಳಲ್ಲಿ ಶೂಟಿಂಗ್ ಮುಗೀತು, ಒಂದೇ ದಿನದಲ್ಲಿ ಡಬ್ಬಿಂಗ್ ಆಯ್ತುಎರಡೇ ತಿಂಗಳಲ್ಲಿ ಶೂಟಿಂಗ್ ಮುಗೀತು, ಒಂದೇ ದಿನದಲ್ಲಿ ಡಬ್ಬಿಂಗ್ ಆಯ್ತು

    ಅಮೃತಮತಿ ಸಿನಿಮಾ ಈಗಾಗಲೇ ನೋಯ್ಡಾ, ಆಸ್ಟ್ರಿಯಾ ಮತ್ತು ಅಟ್ಲಾಂಟ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಅವಕಾಶ ಪಡೆದಿದ್ದು, ಇದು ನಾಲ್ಕನೇ ಚಿತ್ರೋತ್ಸವ. ನೋಯ್ಡಾ ಚಿತ್ರೋತ್ಸವದಲ್ಲಿ ಅಮೃತಮತಿ ಪಾತ್ರ ನಿರ್ವಹಿಸಿರುವ ಹರಿಪ್ರಿಯಾ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದರು.

    Amruthamathi movie selected for India International Film Festival Boston

    ಈ ಚಿತ್ರದಲ್ಲಿ ಹರಿಪ್ರಿಯಾ ಅವರಲ್ಲದೇ ಬಹುಭಾಷಾ ನಟ ಕಿಶೋರ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ವತ್ಸಲಾ ಮೋಹನ್, ಸುಪ್ರಿಯಾ ರಾವ್, ಅಂಬರೀಶ್ ಸಾರಾಗಿ ಮುಂತಾದವರು ಅಭಿನಯಿಸಿದ್ದಾರೆ.

    ನಿರ್ದೇಶನದ ಜೊತೆಗೆ ಬರಗೂರರು ಚಿತ್ರಕಥೆ, ಸಂಭಾಷಣೆ ಮತ್ತು ಮೂರು ಹಾಡುಗಳನ್ನು ಬರೆದಿದ್ದು, ಎರಡು ಜನಪದ ಗೀತೆಗಳನ್ನು ಬಳಸಲಾಗಿದೆ.

    Amruthamathi movie selected for India International Film Festival Boston

    ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಮೂಲಕ ಪುಟ್ಟಣ್ಣನವರು ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಶ್ ಅಸರು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಅಜ್ ಶಿವು ಮತ್ತು ಪ್ರವೀಣ್ ಸಹ ನಿರ್ದೇಶನವಿದೆ.

    English summary
    Amruthamathi movie selected for India International Film Festival Boston (September 18 to 20). HariPrriya plays the lead role in film directed by Baraguru Ramachandrappa.
    Monday, September 14, 2020, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X