ಹರಿಪ್ರಿಯ ನಟನೆಯ ಸಿನಿಮಾ ಅಟ್ಲಾಂಟ ಸಿನಿಮೋತ್ಸವಕ್ಕೆ ಆಯ್ಕೆ
ಹರಿಪ್ರಿಯ ನಟಿಸಿ, ಬರಗೂರು ರಾಮಚಂದ್ರ ನಿರ್ದೇಶಿಸಿರುವ 'ಅಮೃತಮತಿ' ಸಿನಿಮಾವು ಪ್ರತಿಷ್ಠಿತ ಅಟ್ಲಾಂಟ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆ ಆಗಿದೆ.
Recommended Video
ಅಮೆರಿಕದ ಅಟ್ಲಾಂಟದಲ್ಲಿ ಈ ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜಿತವಾಗಿದ್ದು, ಕೋವಿಡ್ ನಡುವೆ ಜುಲೈ 22 ರಿಂದ ಆಗಸ್ಟ್ 5 ರ ವರೆಗೆ ಸಿನಿಮೋತ್ಸವ ನಡೆಯಲಿದೆ. ಆದರೆ ಈ ಸಿನಿಮೋತ್ಸವ ಆನ್‌ಲೈನ್ ಮೂಲಕ ನಡೆಯಲಿದೆ.
13ನೇ ಶತಮಾನದ ಕವಿ ಜನ್ನ ನ ಕೃತಿಯಾದ ಯಶೋಧರ ಚರಿತ ದಿಂದ ಪ್ರೇರಣೆಗೊಂಡು ಅಮೃತಮತಿ ಸಿನಿಮಾವನ್ನು ನಿರ್ಮಿಸಿದ್ದು, ಕೃತಿಯಲ್ಲಿ ಬರುವ ಅಮೃತಮತಿ ಪ್ರಸಂಗವನ್ನೇ ಸಿನಿಮಾ ಮಾಡಲಾಗಿದೆ.

ಸಿನಿಮಾದಲ್ಲಿ ಅಮೃತಮತಿಯಾಗಿ ಹರಿಪ್ರಿಯ ನಟಿಸಿದ್ದರೆ, ಯಶೋಧರನ ಪಾತ್ರದಲ್ಲಿ ಕಿಶೋರ್ ನಟಿಸಿದ್ದಾರೆ. ಅಷ್ಟಾವಂಕನ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ. ಸಿನಿಮಾದ ನಿರ್ದೇಶನದ ಜೊತೆಗೆ ಚಿತ್ರಕತೆ, ಸಂಭಾಷಣೆ ಬರಗೂರು ರಾಮಚಂದ್ರಪ್ಪ ಅವರದ್ದೇ.
ಅಮೃತಮತಿ ಸಿನಿಮಾವು ಆಸ್ಟ್ರಿಯಾ ಅಂತರರಾಷ್ಟ್ರೀಯ ಸಿನಿಮೋತ್ಸವ ಹಾಗೂ ನೋಯ್ಡದಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೂ ಆಯ್ಕೆ ಆಗಿತ್ತು.


Click it and Unblock the Notifications











