»   » 'ಅಮೂಲ್ಯ-ಜಗದೀಶ್' ಆರತಕ್ಷತೆ: ಅಭಿಮಾನಿಗಳಿಗೆ 'ಫೇಸ್ ಬುಕ್' ಆಹ್ವಾನ

'ಅಮೂಲ್ಯ-ಜಗದೀಶ್' ಆರತಕ್ಷತೆ: ಅಭಿಮಾನಿಗಳಿಗೆ 'ಫೇಸ್ ಬುಕ್' ಆಹ್ವಾನ

Posted By:
Subscribe to Filmibeat Kannada

ಚಂದನವನದ ನಟಿ ಅಮೂಲ್ಯ ಮತ್ತು ಜಗದೀಶ್ ಅವರು ಕಳೆದ ಶುಕ್ರವಾರ (ಮೇ 12) ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ, ಕುಟುಂಬಸ್ಥರು, ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಂತರ ಮೇ 14 ರಂದು ಬೆಂಗಳೂರಿನ ಪಂಚತಾರ ಹೋಟೆಲ್ ನಲ್ಲಿ ಕನ್ನಡ ಚಿತ್ರರಂಗದ ತಾರೆಯರಿಗೆ ವಿಶೇಷವಾದ ಪಾರ್ಟಿ ಏರ್ಪಡಿಸಿದ್ದರು. ಈಗ ಅಮೂಲ್ಯ ಮತ್ತು ಜಗದೀಶ್ ಅವರ ಮದುವೆಯ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದಿಂದ ಅಮೂಲ್ಯ ಹಾಗೂ ಜಗದೀಶ್ ಆಹ್ವಾನ ನೀಡಿದ್ದಾರೆ.

Amulya and jagadish Invites to Fans For Wedding Reception

ಮದುವೆಯ ಬಳಿಕ ಮೊದಲ ಬಾರಿಗೆ ಫೇಸ್‌ ಬುಕ್‌ನಲ್ಲಿ ಲೈವ್‌ ನಲ್ಲಿ ಕಾಣಿಸಿಕೊಂಡ ಹೊಸ ಜೋಡಿ, ಮಂಗಳವಾರ (ಮೇ 16) ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ನಮ್ಮನ್ನ ಆಶೀರ್ವಾದಿಸಿ ಎಂದು ಅಭಿಮಾನಿಗಳಿಗೆ ಆಮಂತ್ರಣ ನೀಡಿದ್ದಾರೆ.

'ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ಸಮುದಾಯ ಭವನದಲ್ಲಿ ಆರತಕ್ಷತೆ ನಡೆಯಲಿದೆ. ದಯವಿಟ್ಟು ಉಡುಗೊರೆ ಏನೂ ತರಬೇಡಿ. ಖುಷಿಯಾಗಿ ಬಂದು ನಮಗೆ ಆಶೀರ್ವಾದ ಮಾಡಿದರೇ ಸಾಕು'' ಎಂದು ನವದಂಪತಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

English summary
Kannada Actress Amulya and jagadish Invites to Fans For Wedding Reception on Today (May 16) at RajaRajeshwari Nagara Convention Hall.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X