For Quick Alerts
  ALLOW NOTIFICATIONS  
  For Daily Alerts

  15 ವರ್ಷದ ನಂತ್ರ ಮತ್ತೆ ಡಿ ಬಾಸ್ ಜೊತೆ ಅಮೂಲ್ಯ

  By Pavithra
  |

  ನಟಿ ಅಮೂಲ್ಯ ಮದುವೆ ಆದ ನಂತರ ಸಿನಿಮಾದಲ್ಲಿ ಅಭಿನಯ ಮಾಡುತ್ತಾರಾ ಇಲ್ಲವಾ, ಎನ್ನುವ ಸ್ಪಷ್ಟತೆ ಯಾರಿಗೂ ಸಿಕ್ಕಿರಲಿಲ್ಲ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅಮೂಲ್ಯ ತಮ್ಮನ್ನು ತೊಡಗಿಸಿಕೊಂಡರು.

  ಸಿನಿಮಾರಂಗದಲ್ಲಿ ಆದಷ್ಟು ಬೇಗ ಬ್ಯುಸಿ ಆಗುತ್ತೇನೆ ಎನ್ನುವ ಸೂಚನೆ ಕೊಟ್ಟಿದ್ದ ಅಮೂಲ್ಯ ಅಭಿನಯದ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಮದುವೆ, ಫ್ಯಾಮಿಲಿ, ರಾಜಕೀಯ ಎಲ್ಲದಕ್ಕೂ ಸಮಯ ನೀಡಿರುವ ಅಮ್ಮು ಲೈಫ್ ನಲ್ಲಿ ಸದ್ಯ ತನಗಾಗಿ ತನ್ನ ಪ್ರೀತಿಯ ಕ್ಷೇತ್ರಕ್ಕೆ ಟೈಂ ನೀಡುವ ಸಂದರ್ಭ ಬಂದಿದೆ.

  ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟ ಯಾರಾಗಬಹುದು.?ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟ ಯಾರಾಗಬಹುದು.?

  ಹೌದು ಸಣ್ಣ ಬ್ರೇಕ್ ನಂತರ ಅಮೂಲ್ಯ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಎಂದರೆ ಅಮೂಲ್ಯ ಮತ್ತೆ ದರ್ಶನ್ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಹಾಗಾದರೆ ಅಮೂಲ್ಯ ಅಭಿನಯಿಸುತ್ತಿರುವ ಚಿತ್ರ ಯಾವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

  ದರ್ಶನ್ ಸಿನಿಮಾದಲ್ಲಿ ಅಮೂಲ್ಯ

  ದರ್ಶನ್ ಸಿನಿಮಾದಲ್ಲಿ ಅಮೂಲ್ಯ

  ನಟಿ ಅಮೂಲ್ಯ ದರ್ಶನ್ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಆಗಲಿದ್ದಾರೆ. ತಮಿಳಿನ ವೇದಾಳಂ ಚಿತ್ರವನ್ನ ಕನ್ನಡಕ್ಕೆ ರೀಮೆಕ್ ಮಾಡಲು ಮುಂದಾಗಿದ್ದು ಸಿನಿಮಾದಲ್ಲಿಯ ತಂಗಿ ಪಾತ್ರವನ್ನು ಅಮೂಲ್ಯ ನಿರ್ವಹಿಸಲಿದ್ದಾರಂತೆ.

  ದರ್ಶನ್ -ಅಮೂಲ್ಯ ಒಟ್ಟಿಗೆ ಸಿನಿಮಾ

  ದರ್ಶನ್ -ಅಮೂಲ್ಯ ಒಟ್ಟಿಗೆ ಸಿನಿಮಾ

  15 ವರ್ಷದ ಹಿಂದೆ ದರ್ಶನ್ ಅಭಿನಯದ ಲಾಲಿ ಹಾಡು ಚಿತ್ರದಲ್ಲಿ ಅಮೂಲ್ಯ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ಆದಾದ ನಂತರ ಒಟ್ಟಿಗೆ ಇಬ್ಬರೂ ಯಾವುದೇ ಸಿನಿಮಾದಲ್ಲಿ ಅಭಿನಯ ಮಾಡಿಲ್ಲ.

  ತೂಗುದೀಪ ಪ್ರೊಡಕ್ಷನ್ಸ್ ನಲ್ಲಿ ಅಭಿನಯ

  ತೂಗುದೀಪ ಪ್ರೊಡಕ್ಷನ್ಸ್ ನಲ್ಲಿ ಅಭಿನಯ

  ಅಮೂಲ್ಯ ಚಿಕ್ಕದಿನಿಂದಲೂ ದರ್ಶನ್ ಕುಟುಂಬದ ಜೊತೆಯಲ್ಲಿ ಉತ್ತಮ ಬಾಂದವ್ಯವನ್ನು ಇಟ್ಟುಕೊಂಡಿದ್ದಾರೆ. ಅಮೂಲ್ಯ ಅವರ ಸಾಕಷ್ಟು ಸಿನಿಮಾಗಳನ್ನ ನೀಡು ದರ್ಶನ್ ಬೆನ್ನು ತಟ್ಟಿದ್ದಾರೆ. ಅಷ್ಟೇ ಅಲ್ಲದೆ ತೂಗುದೀಪ ನಿರ್ಮಾಣ ಮದುವೆಯ ಮಮತೆಯ ಕರೆಯೋಲೆ ಸಿನಿಮಾದಲ್ಲಿ ಅಮೂಲ್ಯ ನಾಯಕಿಯಾಗಿ ಅಭಿನಯ ಮಾಡಿದ್ದರು.

  ಚಿತ್ರರಂಗಕ್ಕೆ ಬೇಕಿದೆ ಮುದ್ದಾದ ನಾಯಕಿ

  ಚಿತ್ರರಂಗಕ್ಕೆ ಬೇಕಿದೆ ಮುದ್ದಾದ ನಾಯಕಿ

  ಅಮೂಲ್ಯ ಮದುವೆಯ ದಿನವೇ ಬಿಡುಗಡೆಯಾದ ಮಾಸ್ತಿಗುಡಿ ಸಿನಿಮಾವನ್ನ ನೋಡಿದ ಪ್ರೇಕ್ಷಕರು ಅಮೂಲ್ಯ ಅಭಿನಯ ಹಾಗೂ ಸೌಂದರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಸದ್ಯ ಕನ್ನಡ ಸಿನಿಮಾರಂಗಕ್ಕೂ ನಾಯಕಿ ಅವಶ್ಯಕತೆ ಇದ್ದು ಅಮೈಲ್ಯ ಮತ್ತೆ ಚಿತ್ರರಂಗದಲ್ಲಿ ಬ್ಯೂಸಿ ಆಗುವುದರಿಂದ ಕನ್ನಡವರಿಗೆ ಅವಕಾಶ ಸಿಗುವುದು ಹೆಚ್ಚಾಗುತ್ತದೆ.

  English summary
  Kannada actress Amulya comeback with Darshan movie. Amulya will be acting in the role of Darshan sister in Tamil remake of Vedalam

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X