"ಇಂದೇ ನನಗೆ ವ್ಯಾಲೆಂಟೈನ್ಸ್​ ಡೇ" ಗೋಲ್ಡನ್​ ಕ್ವೀನ್​ಗೆ ಪತಿಯಿಂದ ಸ್ಪೆಷಲ್​ ವಿಶ್​​

ಚಂದನವನದ ಚಂದದ ನಟಿ ಅಮೂಲ್ಯ ಇಂದು (ಸೆಪ್ಟೆಂಬರ್ 14) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅಮೂಲ್ಯ ಚೆಲುವಿನ ಚಿತ್ತಾರದ ಐಶು ಪಾತ್ರದ ಮೂಲಕ ಕರ್ನಾಟಕದ ಮನೆ ಮಾತಾದರು.

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗೋಲ್ಡನ್​ ಕ್ವೀನ್​​ ಅಮೂಲ್ಯ ಅವರಿಗೆ ಅಪಾರ ಅಭಿಮಾನಿಗಳು ಶುಭಾಷಯ ಕೋರಿದ್ದು, ಅಮೂಲ್ಯ ಅವರ ಪತಿ ಜಗದೀಶ್​ ಕೂಡ ವಿಶೇಷವಾಗಿ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ. ಪ್ರೀತಿಯ ಮಡದಿ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್​ ನಲ್ಲಿ ಬರೆದುಕೊಂಡಿರುವ ಜಗದೀಶ್​, ಸಪ್ಟೆಂಬರ್​ 14 ವ್ಯಾಲೆಂಟೈನ್ಸ್​ ಡೇ. ನೀನು ಯಾವಾಗಲೂ ಮಿನುಗುವ ತಾರೆಯಾಗಿರಬೇಕು ಎಂದು ಅಮೂಲ್ಯ ಅವರೊಂದಿಗೆ ಕಳೆದ ವಿಶೇಷ ಕ್ಷಣಗಳ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಮಾರ್ಚ್​1 ರಂದು ಅವಳಿ ಮಕ್ಕಳ ತಾಯಾಗಿರುವ ಅಮೂಲ್ಯ ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ತಮ್ಮ ಮುದ್ದು ಮಕ್ಕಳ ಫೋಟೋ ರಿವೀಲ್​ ಮಾಡಿದ್ದ ಅಮೂಲ್ಯ ಗಣೇಶ ಹಬ್ಬದ ದಿನದಂದು ಕೂಡ ತಮ್ಮ ಅವಳಿ ಮಕ್ಕಳ ಕ್ಯೂಟ್​ ಫೋಟೋಗಳನ್ನು ಹಂಚಿಕೊಂಡು ಹಬ್ಬದ ಶುಭಾಷಯ ಕೋರಿದ್ದರು.

Amulya Husband Jagadish Wishes Actress on Her Birthday

ಬಾಲ ನಟಿಯಾಗಿ ಚಂದನವನಕ್ಕೆ ಕಾಲಿಟ್ಟ ಅಮೂಲ್ಯ, 2007ರಲ್ಲಿ ರಿಲೀಸ್​ ಆದ ಗೋಲ್ಡನ್​ ಸ್ಟಾರ್​ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ನಾಯಕಿ ನಟಿಯಾಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡರು. ಬಳಿಕ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದ ಅಮೂಲ್ಯ ಕರ್ನಾಟಕದ ಗೋಲ್ಡನ್​ ಕ್ವೀನ್​ ಎಂದೇ ಖ್ಯಾತಿ ಪಡೆದಿದ್ದರು. ಚಿತ್ರರಂಗದಲ್ಲಿ 15 ವರ್ಷ ಪೂರೈಸಿರುವ ಅಮೂಲ್ಯ, ಗಜಕೇಸರಿ, ಶ್ರಾವಣಿ ಸುಬ್ರಮಣ್ಯ, ಮಾಸ್ತಿ ಗುಡಿ, ಕೃಷ್ಣ-ರುಕ್ಕು, ನಾನು ನನ್ನ ಕನಸು, ಮದುವೆಯ ಮಮತೆಯ ಕರೆಯೋಲೆ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ನಾಯಕಿ ನಟಿಯಾಗಿ ನಟಿಸಿದ್ದರು. ಬಳಿಕ 2017ರಲ್ಲಿ ತೆರೆ ಕಂಡ 'ಮುಳುಗು ನಗೆ' ಚಿತ್ರದಲ್ಲಿ ನಟಿಸಿದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನ ಗೋಲ್ಡನ್​ ಕ್ಷೀನ್​ ಅಮೂಲ್ಯ ಅವರನ್ನು ಮತ್ತೆ ಬೆಳ್ಳಿ ತೆರೆ ಮೇಲೆ ನೋಡಲು ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದು, ಇಂದು ಅವರ ಹುಟ್ಟುಹಬ್ಬ ಶುಭಾಶಯ ತಿಳಿಸಿ ಮತ್ತೆ ಚಿತ್ರರಂಗಕ್ಕೆ ಕಮ್​ ಬ್ಯಾಕ್​ ಮಾಡುವಂತೆ ಮನವಿ ಮಾಡಿದ್ದಾರೆ.

English summary
Sandalwood actress Amulya husband Jagadish shares special video on her birthday. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X