For Quick Alerts
  ALLOW NOTIFICATIONS  
  For Daily Alerts

  'ಪುನೀತ್, ದರ್ಶನ್ ಬರಿ ಸಿನಿಮಾದಲ್ಲಿ ಹೀರೋ ಆಗ್ಬೇಡಿ': ಸ್ಟಾರ್ ನಟರನ್ನು ಟೀಕಿಸಿದ್ದ ಅಮೂಲ್ಯ

  |

  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ಮುಸ್ಲಿಂ ಸಿಖ್ ಇಸಾಯಿ ಫೌಂಡೇಶನ್ ಆಯೋಜಿಸಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿ ಪೊಲೀಸರ ವಶದಲ್ಲಿರುವ ಅಮೂಲ್ಯ ಲಿಯೋನಾ ಸ್ಯಾಂಡಲ್ ವುಡ್ ಸ್ಟಾರ್ ನಟರನ್ನು ಟೀಕಿಸಿದ್ದರು ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ.

  ಅಷ್ಟಕ್ಕೂ ಅಮೂಲ್ಯ 'ಪಾಕಿಸ್ತಾನ್ ಜಿಂದಾಬಾದ್' ಎಂದಿದ್ದೇಕೆ?

  Amulya Leona commented on kannada actor Darshan and Puneeth rajkumar.

  ಸದ್ಯ ಅಮೂಲ್ಯ ವಿರುದ್ಧ ದೇಶ ವಿರೋಧಿ ಚಟುವಟಿಕೆ ಅಡಿ ಕೇಸ್ ದಾಖಲಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದೇ ಅಮೂಲ್ಯ ಲಿಯೋನಾ ಕಳೆದ ಒಂದು ತಿಂಗಳ ಹಿಂದೆ ನಡೆದಿದ್ದ ಸಿಎಎ ವಿರೋಧಿ ಭಾಷಣವೊಂದರಲ್ಲಿ ಕನ್ನಡ ಚಲನಚಿತ್ರ ನಟರಾದ ದರ್ಶನ್, ಪುನೀತ್ ರಾಜ್ ಕುಮಾರ್ ಅವರನ್ನು ಟೀಕಿಸಿದ್ದರು. ಮುಂದೆ ಓದಿ....

  ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಚಿತ್ರನಟರ ವಿರುದ್ಧ ಟೀಕೆ

  ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಚಿತ್ರನಟರ ವಿರುದ್ಧ ಟೀಕೆ

  ಸಿಎಎ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕದಲ್ಲೂ ಅನೇಕ ಕಡೆ ಪ್ರತಿಭಟನೆ, ಸಮಾವೇಶಗಳು ನಡೆದಿದ್ದವು. ಜನವರಿ 18 ರಂದು ಶಿವಾಜಿ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಕನ್ನಡ ಚಿತ್ರನಟರ ವಿರುದ್ಧ ಅಮೂಲ್ಯ ಲಿಯೋನಾ ಟೀಕಿಸಿದ್ದರು.

  'ಇದ್ದರೂ, ಸತ್ತರೂ ಹಿಂದೂಸ್ತಾನದಲ್ಲಿ': ಬೀದಿಗಿಳಿದ ಮುಸ್ಲಿಂ ಮಹಿಳೆಯರು

  ನಿಜ ಜೀವನದಲ್ಲಿ ಹೀರೋ ಆಗಿ

  ನಿಜ ಜೀವನದಲ್ಲಿ ಹೀರೋ ಆಗಿ

  ವೇದಿಕೆ ಮೇಲೆ ಮಾತನಾಡುತ್ತಿದ್ದ ಅಮೂಲ್ಯ ಲಿಯೋನಾ ''ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಎಂಎಲ್ ಎ, ಎಂಪಿಗಳು ಬೀದಿಗೆ ಬಂದು ಪ್ರತಿಭಟನೆ ಮಾಡ್ಬೇಕು. ಯಾಕೆ ಫಿಲಂ ಸ್ಟಾರ್ ಗಳಿಗೆ ಗೊತ್ತಿಲ್ವಾ? ಸಿನಿಮಾಗಳಲ್ಲಿ ಹೀರೋ ಆಗ್ಬೇಡಿ ಕಣ್ರೀ,,,ನಿಜ ಜೀವನದಲ್ಲಿ ಹೀರೋಗಳಾಗಿ, ಬನ್ನಿ ಪ್ರತಿಭಟನೆ ಮಾಡಿ'' ಎಂದು ಟೀಕಿಸಿದ್ದರು.

  ಸ್ಯಾಂಡಲ್ ವುಡ್ ಸ್ಟಾರ್ ಮೌನ

  ಸಿಎಎ ವಿರೋಧಿ ಕುರಿತು ಕನ್ನಡದ ಸ್ಟಾರ್ ನಟರು ಯಾರೂ ಮಾತನಾಡಿಲ್ಲ. ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಯಶ್, ಶಿವರಾಜ್ ಕುಮಾರ್ ಸೇರಿದಂತೆ ಸ್ಟಾರ್ ಕಲಾವಿದರು ಈ ಬಗ್ಗೆ ಮೌನವಾಗಿ ಇದ್ದಾರೆ.

  ಯಾರು ಈ ಅಮೂಲ್ಯ ಲಿಯೋನಾ?

  ಯಾರು ಈ ಅಮೂಲ್ಯ ಲಿಯೋನಾ?

  ಮೂಲತಃ ಚಿಕ್ಕಮಗಳೂರಿನ ಅಮೂಲ್ಯ ಸದ್ಯ ಬೆಂಗಳೂರಿನ ಜಯನಗರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲೆ ನೆಲೆಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯಾದಾಗ ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಸ್ವಯಂ ಪ್ರೇರಿತವಾಗಿ ಕಾಣಿಸಿಕೊಳ್ಳುತ್ತಿದ್ದಳು. ಕನ್ನಡ, ಹಿಂದಿ, ಇಂಗ್ಲೀಷ್ ಚೆನ್ನಾಗಿ ಮಾತನಾಡುತ್ತಾಳೆ.

  CAAಯಿಂದ ಮುಸ್ಲಿಮರಿಗೆ ತೊಂದರೆ ಆಗಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್CAAಯಿಂದ ಮುಸ್ಲಿಮರಿಗೆ ತೊಂದರೆ ಆಗಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್

  ಮುಸ್ಲಿಂರಿಗೆ ತೊಂದರೆಯಾಗಲ್ಲ: ರಜನಿಕಾಂತ್

  ಮುಸ್ಲಿಂರಿಗೆ ತೊಂದರೆಯಾಗಲ್ಲ: ರಜನಿಕಾಂತ್

  "ಒಂದು ವೇಳೆ ಮುಸ್ಲಿಂ ಸಮುದಾಯಕ್ಕೆ ತೊಂದರೆ ಆಗಿದ್ದೆ ಆದರೆ ಅವರ ಪರ ಧ್ವನಿ ಎತ್ತುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ. ವಿಭಜನೆ ನಂತರ ಮುಸ್ಲಿಮರು ಭಾರತದಲ್ಲಿ ಉಳಿಯಲು ನಿರ್ಧರಿಸಿದರು, ಅವರನ್ನು ಹೇಗೆ ದೇಶದಿಂದ ಕಳುಹಿಸಲಾಗುತ್ತೆ. ರಾಷ್ಟ್ರೀಯ ಜನಸಂಖ್ಯೆ ನೋಂದಣಿ(NPR) ಅಗತ್ಯವಿದೆ. ಸಿಎಎ ಸಂಬಂಧಿಸಿದಂತೆ ಭಾರತೀಯ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಿಎಎ ವಿರುದ್ಧ ಜನರನ್ನು ಪ್ರಚೋದಿಸುತ್ತಿವೆ" ಎಂದು ರಜನಿಕಾಂತ್ ಅಭಿಪ್ರಾಯಪಟ್ಟಿದ್ದರು.

  English summary
  CAA and NRC protester amulya leona commented on kannada actor Darshan and Puneeth rajkumar and other film industry personalities regarding CAA.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X