For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್ ದೊಡ್ಡ ಹಿಟ್': ಸ್ನೇಹಿತರ ಜೊತೆ ಸಿನಿಮಾ ವೀಕ್ಷಿಸಿದ ಅಮೂಲ್ಯ ದಂಪತಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಎಲ್ಲೆಡೆ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ದರ್ಶನ್ ಅವರ ಈ ಹಿಂದಿನ ಸಿನಿಮಾಗಳಿಂದ ಇದು ಬಹಳ ವಿಶೇಷ ಮತ್ತು ವಿಭಿನ್ನವಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ಅಭಿಪ್ರಾಯ ಇದೆ.

  ಇದೀಗ, ರಾಬರ್ಟ್ ಚಿತ್ರವನ್ನು ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸುಮಾರು 18 ಜನ ಸ್ನೇಹಿತರ ಜೊತೆ ಡಿ ಬಾಸ್ ಸಿನಿಮಾ ನೋಡಿ ಚಿತ್ರದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

   Roberrt Movie Review: ಹಗ್ಗದ ಮೇಲಿನ ನಡಿಗೆಯಲ್ಲಿ ಗೆದ್ದ ದರ್ಶನ್-ತರುಣ್ ಸುಧೀರ್ Roberrt Movie Review: ಹಗ್ಗದ ಮೇಲಿನ ನಡಿಗೆಯಲ್ಲಿ ಗೆದ್ದ ದರ್ಶನ್-ತರುಣ್ ಸುಧೀರ್

  ''ರಾಬರ್ಟ್ ಸಿನಿಮಾ ಅದ್ಭುತವಾಗಿದೆ. ಎಲ್ಲ ಫೈಟ್ ಮತ್ತು ಭಾವನಾತ್ಮಕ ದೃಶ್ಯಗಳಲ್ಲಿ ದರ್ಶನ್ ಅವರನ್ನು ನೋಡಿದ್ರೆ ಮೈ ಜುಂ ಎನ್ನುತ್ತದೆ. ತರುಣ್ ಸುಧೀರ್ ನಿರ್ದೇಶನ ಸೂಪರ್. ಪ್ರತಿ ದೃಶ್ಯದಲ್ಲೂ ನಿಮ್ಮ ಶ್ರಮ ಕಾಣುತ್ತದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅದ್ಭುತ ಅನುಭವ ನೀಡುತ್ತದೆ. ಪ್ರೊಡಕ್ಷನ್ ಮುಂದಿನ ಹಂತಕ್ಕಿದೆ'' ಎಂದು ಹೊಗಳಿದ್ದಾರೆ.

  ದರ್ಶನ್ ಅವರಂದ್ರೆ ಅಪಾರ ಅಭಿಮಾನ ಹೊಂದಿರುವ ನಟಿ ಅಮೂಲ್ಯ ಮೊದಲ ದಿನವೇ ಸಿನಿಮಾ ನೋಡಿರುವುದಕ್ಕೆ ಡಿ ಅಭಿಮಾನಿಗಳು ಸಹ ಥ್ರಿಲ್ ಆಗಿದ್ದಾರೆ. ಅಮೂಲ್ಯ ಅವರಿಗೆ ದರ್ಶನ್ ಅವರ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದಾರೆ.

  ಇನ್ನುಳಿದಂತೆ ರಾಬರ್ಟ್ ಸಿನಿಮಾ ಮೊದಲ ದಿನ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸೇರಿ ಮೊದಲ ದಿನ 3723 ಶೋ ಕಾಣುತ್ತಿದೆ.

  ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್, ಆಶಾ ಭಟ್, ದೇವರಾಜ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ.

  Recommended Video

  ಡಿ ಬಾಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸೀಕ್ರೆಟ್ ಬಿಚ್ಚಿಟ್ಟ ರಕ್ಷಿತಾ | Filmibeat Kannada
  English summary
  Kannada actress Amulya watched roberrt and Praises Darshan's and team.
  Thursday, March 11, 2021, 20:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X