ಅಭಿಮಾನಿಗಳಿಗೆ 'ಅಮೂಲ್ಯ'ವಾದ ಉಡುಗೊರೆ ; ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಐಸೂ...!

ತೀರ ಚಿಕ್ಕ ವಯಸ್ಸಿನಲ್ಲಿಯೇ ಹಿರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಅಮೂಲ್ಯ. ಆರಂಭದಲ್ಲಿಯೇ ದೊಡ್ಡ ದೊಡ್ಡ ನಟರ ಜೊತೆ ತೆರೆ ಹಂಚಿಕೊಂಡು, ಬಹುತೇಕ ಹಿಟ್ ಸಿನಿಮಾಗಳಲ್ಲಿಯೇ ನಟಿಸಿ ಸೈ ಎನ್ನಿಸಿಕೊಂಡ ಅಮೂಲ್ಯ, ಬೇಡಿಕೆಯಲ್ಲಿದ್ದಾಗಲೇ, ಬಣ್ಣದ ಬದುಕಿಗೆ ಅಲ್ಪವಿರಾಮ ಹಾಕಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2017ರಿಂದ ಬೆಳ್ಳಿ ಪರದೆಯಿಂದ ಅಂತರವನ್ನ ಕಾಪಾಡಿಕೊಂಡರು. ಗಂಡ..ಮನೆ..ಮಕ್ಕಳು.. ಸಂಸಾರ ಎಂದು ಗ್ರಹಸ್ಥಾಶ್ರಮದಲ್ಲಿ ಕಾಲ ಕಳೆದರು.

ಆದರೆ ಅಭಿಮಾನಿಗಳು ಮಾತ್ರ ಅಮೂಲ್ಯ ಅವರನ್ನ ಮರೆತಿಲ್ಲ. ಇವತ್ತು ಕೂಡ ಅನೇಕರು ಅಮೂಲ್ಯ ಅವರಿಗೆ ಮೊದಲು ಕೇಳುವ ಪ್ರಶ್ನೆ ಮುಂದಿನ ಸಿನಿಮಾ ಬಗ್ಗೆಯೇ. ಆದರೆ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಗುವುದು ಯಾವತ್ತು ಅನ್ನುವುದಕ್ಕೆ ಉತ್ತರ ಈ ಕ್ಷಣದವರೆಗೆ ಇಲ್ಲವಾದರೂ, ಸದ್ಯಕ್ಕೆ ಅಮೂಲ್ಯ ತಮ್ಮ ಪತಿ ಹಾಗೂ ಅವಳಿ ಮಕ್ಕಳ ಜೊತೆ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯಕ್ಕೆ ಈ ಫೋಟೋಗಳದ್ದೇ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳ ಹೃದಯವನ್ನೂ ಕೂಡ ಈ ಫೋಟೋಗಳೂ ಗೆಲ್ತಿವೆ.

Amulya Shared Photo With Her Twin Boys And Husband

ಅವಳಿ ರಾಜಕುಮಾರರ ಜೊತೆ ಫೋಟೋಗೆ ಫೋಸ್ ಕೊಟ್ಟಿರುವ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಥೇಟ್ ರಾಜ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಒಂದೇ ಬಗೆಯ ಉಡುಗೆ ತೊಡುಗೆಯಲ್ಲಿ ಅಮೂಲ್ಯ ಮಕ್ಕಳು ಹಾಗೂ ಪತಿ ಜಗದೀಶ್ ಮಿಂಚುತ್ತಿದ್ದರೆ, ಕೆಂಪು ಬಣ್ಣದ ಸೀರೆಯಲ್ಲಿರುವ ಅಮೂಲ್ಯ ಅನೇಕರ ಕಣ್ಣಿಗೆ ಮಹಾರಾಣಿಯಂತೆ ಕಾಣ್ತಿದ್ದಾರೆ.

ಚಿತ್ರರಂಗಕ್ಕೆ ಮರಳಿ ಬರುತ್ತಾರಾ ಅಮೂಲ್ಯ..?

ಅತ್ಯಧಿಕ ಬೇಡಿಕೆ ಇರುವಾಗಲೇ ಸಿನಿಮಾ ಇಂಡಸ್ಟ್ರಿಗೆ ಬ್ರೇಕ್ ಕೊಟ್ಟು, ಮದುವೆ ಆಗಿ ದಾಂಪತ್ಯ ಜೀವನದಲ್ಲಿ ನೆಮ್ಮದಿಯನ್ನ ಕಂಡುಕೊಂಡ ಅಮೂಲ್ಯ, ಮತ್ತೆ ಇಂಡಸ್ಟ್ರಿಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ ಅನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಚಿತ್ರಕ್ಕೆ ಅಮೂಲ್ಯ ನಾಯಕಿಯಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ ಅನ್ನುವ ಮಾತು ಕೂಡ ಬೆಂಗಳೂರಿನ ನಾಗರಭಾವಿಯಿಂದ ರಾಜರಾಜೇಶ್ವರಿ ನಗರದವರೆಗೆ ಕೇಳಿ ಬರುತ್ತಿದೆ.

ಇನ್ನೂ ಸಿನಿಮಾ ರೀ ಎಂಟ್ರಿಗಾಗಿಯೇ ಅಮೂಲ್ಯ ದೇಹ ದಂಡಿಸುತ್ತಿದ್ದಾರೆ, ಕಸರತ್ತು ಮಾಡ್ತಿದ್ದಾರೆ ಅನ್ನುವ ಮಾತು ಇದೆ. ಗೊತ್ತಿಲ್ಲ ಯಾವ ಕ್ಷಣದಲ್ಲಾದರೂ ಅಮೂಲ್ಯ ಅವರ ಹೊಸ ಚಿತ್ರದ ಘೋಷಣೆ ಆದರೂ ಆಗಬಹುದು. ಚಿತ್ರರಂಗವೆಂಬ ಮನೆಗೆ ಚೆಲುವಿನ ಚಿತ್ತಾರದ ಐಸೂ ಮರಳಿ ಬಂದರು ಬರಬಹುದು.

Amulya Shared Photo With Her Twin Boys And Husband

ಒಟ್ಟಿನಲ್ಲಿ ಸದ್ಯಕ್ಕೆ ಅಮೂಲ್ಯ ತಮ್ಮ ಮನೆಯವರ ಜೊತೆ ತೆಗೆಸಿಕೊಂಡ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಅಭಿಮಾನಿಗಳ ಖುಷಿಯನ್ನೂ ಇಮ್ಮಡಿಗೊಳಿಸಿವೆ.

More from Filmibeat

English summary
With Husband Jagadish Sandalwood Actress Amulya Strikes Pose With Her Twins Atharv And Adhaav
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X