»   » ಬೆತ್ತಲೆ ಬೆನ್ನು ಪ್ರದರ್ಶಿಸಿದ 'ದಿ ವಿಲನ್' ಬೆಡಗಿ ಆಮಿ ಜಾಕ್ಸನ್

ಬೆತ್ತಲೆ ಬೆನ್ನು ಪ್ರದರ್ಶಿಸಿದ 'ದಿ ವಿಲನ್' ಬೆಡಗಿ ಆಮಿ ಜಾಕ್ಸನ್

Posted By:
Subscribe to Filmibeat Kannada

ಕಾಲಿವುಡ್, ಟಾಲಿವುಡ್, ಬಾಲಿವುಡ್... ಹೀಗೆ ಎಲ್ಲ ಕಡೆ ತಮ್ಮದೇ ಆದ ಛಾಪು ಮೂಡಿಸಿ ಬಹು ಬೇಡಿಕೆ ಕಂಡುಕೊಂಡಿರುವ ನಟಿ ಆಮಿ ಜಾಕ್ಸನ್ ಇದೀಗ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಈಗಾಗಲೇ, 'ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡು, ಸುದೀಪ್ ಜೊತೆ ಸಾಹಸಮಯ ದೃಶ್ಯಗಳಲ್ಲಿ ಅಭಿನಯಿಸಿರುವ ನಟಿ ಆಮಿ ಜಾಕ್ಸನ್ ಇದೀಗ ಬೇರೊಂದು ವಿಷಯಕ್ಕೆ ಸದ್ದು ಮಾಡಿದ್ದಾರೆ.

ಆ ವಿಷಯ ಏನು ಅಂತ ಹೇಳುವ ಮುನ್ನ ಮೊದಲು ಈ ಫೋಟೋ ನೋಡಿ...

amy-jackson-goes-backless-in-a-photo-shoot

ಇತ್ತೀಚೆಗಷ್ಟೇ ಫೋಟೋಶೂಟ್ ಒಂದರಲ್ಲಿ ಪಾಲ್ಗೊಂಡಿದ್ದ ನಟಿ ಆಮಿ ಜಾಕ್ಸನ್ ಕ್ಲಿಕ್ ಮಾಡಿಸಿಕೊಂಡಿರುವ ಹಾಟ್ ಫೋಟೋ ಇದು.

ಫೋಟೋದಲ್ಲಿ ಬೆತ್ತಲೆ ಬೆನ್ನು ಪ್ರದರ್ಶಿಸಿರುವ ನಟಿ ಆಮಿ ಜಾಕ್ಸನ್ ಪಡ್ಡೆಗಳ ಕಣ್ಣು ಕುಕ್ಕಿದ್ದಾರೆ. ಸಾಲದಕ್ಕೆ ತಮ್ಮ ಇನ್ಸ್ಟಾಗ್ರಾಮ್ ನಲ್ಲೂ ಈ ಫೋಟೋ ಶೇರ್ ಮಾಡಿ ಹರೆಯದ ಹುಡುಗರ ನಿದ್ದೆ ಕೆಡಿಸಿದ್ದಾರೆ ನಟಿ ಆಮಿ ಜಾಕ್ಸನ್.

ಮೊನ್ನೆಯಷ್ಟೇ, ಈ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಆಗಿದ್ದು ಒಂದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ. ಅಷ್ಟರಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಫೋಟೋ ಮೂಲಕ 'ದಿ ವಿಲನ್' ಬ್ಯೂಟಿ ಆಮಿ ಜಾಕ್ಸನ್ ಸದ್ದು ಮಾಡಿದ್ದಾರೆ.

ಅಂದ್ಹಾಗೆ, 'ದಿ ವಿಲನ್' ಸಿನಿಮಾ ಸೇರಿದಂತೆ ರಜನಿಕಾಂತ್ ರವರ '2.0' ಸಿನಿಮಾದಲ್ಲೂ ಆಮಿ ಜಾಕ್ಸನ್ ನಟಿಸಿದ್ದಾರೆ.

English summary
Actress Amy Jackson goes backless in a Photo shoot. Take a loot at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada