ನಟಿ ಆಮಿ ಜಾಕ್ಸನ್ ಮುದ್ದು ಮಗನನ್ನು ನೋಡಿದ್ದೀರಾ.?
ಕನ್ನಡದ 'ದಿ ವಿಲನ್', ತಮಿಳಿನ 'ಮದ್ರಾಸಪಟ್ಟಿನಂ', '2.0', ಹಿಂದಿಯ 'ಸಿಂಗ್ ಈಸ್ ಬ್ಲಿಂಗ್' ಸೇರಿದಂತೆ ಹಲವು ಭಾರತೀಯ ಸಿನಿಮಾಗಳಲ್ಲಿ ನಟಿಸಿದ ಆಂಗ್ಲ ನಟಿ ಆಮಿ ಜಾಕ್ಸನ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಹೋಟೆಲ್ ಉದ್ಯಮಿ ಜಾರ್ಜ್ ಎಂಬುವರ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇರುವ ಆಮಿ ಜಾಕ್ಸನ್ ಕಳೆದ ಸೆಪ್ಟೆಂಬರ್ ನಲ್ಲಿ ಗಂಡು ಮಗುವಿಗೆ ತಾಯಿ ಆಗಿದ್ದರು. ತಮ್ಮ ಮಗನಿಗೆ ಆಂಡ್ರಿಯಾಸ್ ಅಂತ ಆಮಿ ಜಾಕ್ಸನ್-ಜಾರ್ಜ್ ದಂಪತಿ ನಾಮಕರಣ ಮಾಡಿದ್ದರು.
ಎರಡು ತಿಂಗಳ ಮುದ್ದು ಕಂದಮ್ಮ ಆಂಡ್ರಿಯಾಸ್ ಫೋಟೋನ ಆಮಿ ಜಾಕ್ಸನ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪುಟಾಣಿಯ ಫೋಟೋ ಜೊತೆಗೆ ''ನನ್ನ ಬಾಳಿನ ಬೆಳಕು'' ಅಂತ ಆಮಿ ಜಾಕ್ಸನ್ ಬರೆದುಕೊಂಡಿದ್ದಾರೆ.

ಮಗನಿಗೆ ಎದೆಹಾಲುಣಿಸುತ್ತಿರುವ ಫೋಟೋಗಳನ್ನೂ ಯಾವುದೇ ಮುಜುಗರ ಇಲ್ಲದೆ ಆಮಿ ಜಾಕ್ಸನ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡು, ಎದೆಹಾಲಿನ ಮಹತ್ವದ ಕುರಿತು ಜಾಗೃತಿ ಮೂಡಿಸಿದ್ದಾರೆ. ಸದ್ಯಕ್ಕೆ ಮಗನ ಲಾಲನೆ-ಪಾಲನೆಗಾಗಿ ತಮ್ಮ ಸಂಪೂರ್ಣ ಸಮಯ ಮೀಸಲಿಟ್ಟಿರುವ ಆಮಿ ಜಾಕ್ಸನ್ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ.


Click it and Unblock the Notifications











