ಗಂಡು ಮಗುವಿಗೆ ಜನ್ಮ ನೀಡಿದ 'ವಿಲನ್' ನಾಯಕಿ ಆಮಿ ಜಾಕ್ಸನ್
'ದಿ ವಿಲನ್' ಚಿತ್ರದ ನಾಯಕಿ ಆಮಿ ಜಾಕ್ಸನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನ ಸೋಮವಾರ ಸಂಜೆ ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ತನ್ನ ಬಾಯ್ ಫ್ರೆಂಡ್ ಜಾರ್ಜ್ ಜೊತೆ ಸಂಬಂಧ ಹೊಂದಿದ್ದ ಆಮಿ ಜಾಕ್ಸನ್ ಮದುವೆಯಾಗದೆ ಗರ್ಭಿಣಿಯಾಗಿದ್ದರು. ಇದೀಗ, ಜಾರ್ಜ್ ಮತ್ತು ಆಮಿ ಜಾಕ್ಸನ್ ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.
ಮಗುವಿಗೆ ಈಗಾಗಲೇ ಆಂಡ್ರಿಯಾಸ್ ಎಂದು ಹೆಸರು ಇಡಲಾಗಿದೆ. ಈ ಮುಂಚೆಯೇ ಗಂಡು ಮಗುವಿಗೆ ಜನ್ಮ ನೀಡಲು ಸಜ್ಜಾಗಿದ್ದೇನೆ ಎಂದು ಆಮಿ ಜಾಕ್ಸನ್ ಬಹಿರಂಗಪಡಿಸಿದ್ದರು.

ಅಂದ್ಹಾಗೆ, ಜಾರ್ಜ್ ಮತ್ತು ಆಮಿ ಜಾಕ್ಸನ್ ಜನವರಿ ತಿಂಗಳಲ್ಲಿ ಎಂಗೇಜ್ ಆಗಿದ್ದರು. ಮಾರ್ಚ್ ತಿಂಗಳಲ್ಲಿ ಗರ್ಭಿಣಿ ಎಂಬ ವಿಷಯವನ್ನ ಆಮಿ ಹೇಳಿಕೊಂಡಿದ್ದರು. ಇತ್ತೀಚಿಗಷ್ಟೆ ಬ್ರಿಟಿಷ್ ಚೆಲುವೆಯ ಸೀಮಂತ ಕಾರ್ಯಕ್ರಮವೂ ಜರುಗಿತ್ತು.
ಸುದೀಪ್ ಮತ್ತು ಶಿವರಾಜ್ ಕುಮಾರ್ ನಟನೆಯ ದಿ ವಿಲನ್ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೊನೆಯದಾಗಿ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.0 ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.


Click it and Unblock the Notifications











