ಶೋ ಮ್ಯಾನ್ ಪ್ರೇಮ್ ಹುಟ್ಟುಹಬ್ಬಕ್ಕೆ ಅಪ್ಸರೆ ಆಮಿ ಜಾಕ್ಸನ್ ಮಾಡಿದ ವಿಶ್ ಹೀಗಿತ್ತು
ನಿರ್ದೇಶಕ ಜೋಗಿ ಪ್ರೇಮ್ ಇಂದು ತಮ್ಮ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ರಾತ್ರಿಯೇ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಪ್ರೇಮ್ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಬರ್ತಡೇ ಖುಷಿಯಲ್ಲಿರುವ ಪ್ರೇಮ್ ಅವರಿಗೆ ಚಿತ್ರರಂಗದ ಅನೇಕರು ಶುಭಾಶಯ ಕೋರಿದ್ದಾರೆ.
'ದಿ ವಿಲನ್' ಚಿತ್ರದ ನಾಯಕಿ ಆಮಿ ಜಾಕ್ಸನ್ ಸೆಲ್ಫಿ ವಿಡಿಯೋ ಮೂಲಕ ಪ್ರೇಮ್ ಅವರಿಗೆ ವಿಶ್ ಮಾಡಿದ್ದಾರೆ. ''ಹ್ಯಾಪಿ ಬರ್ತಡೇ ಟು ಯು ಪ್ರೇಮ್ ಜಿ. ನಾನು ಈಗ ಚೆನ್ನೈ ವಿಮಾನ ನಿಲ್ದಾಣದಿಂದ ನಿಮಗೆ ಶುಭಾಶಯವನ್ನು ಕೋರುತ್ತಿದ್ದೇನೆ. ತುಂಬ ಚೆನ್ನಾಗಿ ಬರ್ತಡೇಯನ್ನು ಆಚರಿಸಿ. ನಿಮ್ಮ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಾಯಕ್ಕೆ ಧನ್ಯವಾದಗಳು. ನೀವು ಗ್ರೇಟ್ ವ್ಯಕ್ತಿ... ಹಾಗೂ ಗ್ರೇಟ್ ಡೈರೆಕ್ಟರ್.. ನಿಮ್ಮ ಸಿನಿಮಾದಲ್ಲಿ ಭಾಗಿಯಾಗಿದ್ದು, ನನಗೆ ತುಂಬ ಖುಷಿ ಕೊಟ್ಟಿದೆ'' ಎಂದು ಹೇಳಿ ಪ್ರೇಮ್ ಅವರಿಗೆ ಆಮಿ ವಿಶ್ ಮಾಡಿದ್ದಾರೆ.

ಅಂದ್ಹಾಗೆ, ಆಮಿ ಜಾಕ್ಸನ್ 'ದಿ ವಿಲನ್' ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ.
English summary
Actress Amy Jackson wishes to Director prem on his 41st birthday.


Click it and Unblock the Notifications