twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ನಿರ್ಮಾಪಕರ ಹೋರಾಟ: ಒಟಿಟಿಯಲ್ಲಿ ಅನಧಿಕೃತ ಸಿನಿಮಾ ಪ್ರಸಾರಕ್ಕೆ ತಡೆಯಾಜ್ಞೆ

    By ಫಿಲ್ಮ್ ಡೆಸ್ಕ್
    |

    ಟಿವಿ ಮತ್ತು ವಿವಿದ ಸಾಮಾಜಿಕ ಜಾಲತಾಣದಲ್ಲಿ ಕಾನೂರು ಬಾಹಿರವಾಗಿ ಸಿನಿಮಾ ಪ್ರದರ್ಶನಕ್ಕೆ ಕಡಿವಾಣ ಹಾಕಲು ನಿರ್ಮಾಪಕರು ಮುಂದಾಗಿದ್ದಾರೆ. ಅನಧಿಕೃತವಾಗಿ ಸಿನಿಮಾ ಪ್ರಸಾರ ಮಾಡದಂತೆ ಕೋರ್ಟ್ ನಿಂದ ಸ್ಟೇ ತರಲಾಗಿದೆ ಎಂದು ಹಿರಿಯ ನಿರ್ಮಾಪಕ ಮತ್ತು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ. ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಮಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

    Recommended Video

    ಅಭಿಮಾನಿಗೆ ಧೈರ್ಯ ತುಂಬಿದ Kiccha Sudeep | Filmibeat Kannada

    ಕೊರೊನಾ ವೈರಸ್ ಸಮಸ್ಯೆಯಿಂದ ಚಿತ್ರರಂಗ ಕೂಡ ಸಂಕಷ್ಟದಲ್ಲಿದೆ. ಸಿನಿಮಾ ನಿರ್ಮಾಣ, ಪ್ರದರ್ಶನ ಯಾವುದೂ ನಡೆಯುತ್ತಿಲ್ಲ. ಈ ಸಮಯದಲ್ಲಿ ಸಿನಿಮಾಗಳು, ನಿರ್ಮಾಪಕರ ಅರಿವಿಲ್ಲದೆ ವಿವಿದ ಮಾಧ್ಯಮಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಪ್ರದರ್ಶಕರು ಅದರ ಲಾಭಪಡೆಯುತ್ತಿದ್ದಾರೆ. ವಾಹಿನಿಯಲ್ಲಿ ಪ್ರಸಾರಕ್ಕೆ ಮಾತ್ರ ಹಕ್ಕು ಬರೆದುಕೊಟ್ಟಿರುತ್ತೇವೆ. ಆದರೆ ವಿವಿದ ಕಡೆ ಪ್ರಸಾರ ಮಾಡಿ ಅವರು ಲಾಭಪಡೆಯುತ್ತಿದ್ದಾರೆ. ಇದರಿಂದ ನಿರ್ಮಾಪಕರಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ.

    ಕೆಲವು ಟಿವಿ ವಾಹಿನಿಗೆ ಸಿನಿಮಾ ಪ್ರದರ್ಶನದ ಸ್ಯಾಟಲೈಟ್ ರೈಟ್ ಮಾತ್ರ ಕೊಟ್ಟಿರುತ್ತೇವೆ. ಆದರೆ ಅವರು ಸ್ಯಾಟಲೈಟ್ ಮಾತ್ರವಲ್ಲದೆ ತಮ್ಮ ಅಧೀನದಲ್ಲಿರುವ ಸಾಮಾಜಿಕ ಜಾಲತಾಣ, ಒಟಿಟಿ ಸೇರಿದ್ದಂತೆ ವಿವಿದ ವಿಭಾಗಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡಿದ ಘಟನೆ ಕೂಡ ನಡೆದಿದೆ. ಹಾಗೆ ಮಾಡುವುದಾದರೆ ನಿರ್ಮಾಪಕರಿಗೆ ಕೂಡ ಲಾಭದ ಪಾಲು ಸಂದಾಯವಾಗಬೇಕಿದೆ. ಇದನ್ನು ಕೋರ್ಟ್ ಎತ್ತಿ ಹಿಡಿದಿದೆ. ಎಂದು ನಿರ್ಮಾಪಕ ಎನ್ ಎಂ ಸುರೇಶ್ ಹೇಳಿದ್ದಾರೆ.

    An Injunction For Unauthorized Cinema Broadcasting In Kannada Film Industry

    ಬಹುತೇಕ ಹಳೆಯ ಸಿನಿಮಾಗಳಿಗೆ ಸಮಸ್ಯೆಯಾಗುತ್ತಿವೆ. ಹಳೆಯ ಸಿನಿಮಾಗಳ ರೈಟ್ಸ್ ನೀಡುವ ಸಂದರ್ಭದಲ್ಲಿ ಒಟಿಟಿ ಫ್ಲಾಟ್ ಫಾರ್ಮ್ ಗಳೆ ಇರಲಿಲ್ಲ. ಆದರೀಗ ಅವುಗಳ ನೇರ ಲಾಭವನ್ನು ಪಡೆಯುತ್ತಿದ್ದಾರೆ. ಲಾಭದ ಸ್ವಲ್ಪ ಭಾಗ ನಿರ್ಮಾಪಕರಿಗೂ ಸೇರಬೇಕು. ಇನ್ಮುಂದೆ ನೀಡಿಲ್ಲವೆಂದರೆ ಕಂಟೆಟ್ ಆಫ್ ಕೋರ್ಟ್ ಆಗುತ್ತೆ, ಸೈಬರ್ ಕ್ರೈಮ್ ವಿಭಾಗದಲ್ಲಿ ದೂರು ನೀಡಲಾಗುತ್ತೆ" ಎಂದು ವಕೀಲ ಧನಂಜಯ್ ಹೇಳಿದ್ದಾರೆ.

    ಈ ಸಮಯದಲ್ಲಿ ನಿರ್ಮಾಪಕರಾದ ಜೆಜೆ ಕೃಷ್ಣ, ಕೆ. ಮಂಜು, ಕರಿಸುಬ್ಬು, ಉಮೇಶ್ ಬಣಕರ್, ರಾಜೇಂದ್ರ ಸಿಂಗ್ ಬಾಬು ಸೇರಿದ್ದಂತೆ ನಿರ್ಮಾಪಕರು ಉಪಸ್ಥಿತರಿದ್ದರು. ದೇಶದ ಚಿತ್ರೋದ್ಯಮದಲ್ಲಿಯೆ ನಿರ್ಮಾಪಕರು ಎತ್ತಿರುವ ಮೊದಲ ಕೂಗಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಷೆಯ ನಿರ್ಮಾಪಕರು ತಮ್ಮ ಮಾದರಿಯನ್ನು ಅನುಸಿರುವ ಭರವಸೆ ಸ್ಯಾಂಡಲ್ ವುಡ್ ನಿರ್ಮಾಪಕರಲ್ಲಿದೆ.

    English summary
    Kannada Producers speak about Satellite rights issue in Film Industry.
    Saturday, July 11, 2020, 12:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X