ಅಪ್ಪ ಅರ್ಜುನ್ ಸರ್ಜಾರ ಕನಸು ನನಸಾಗಿಸುತ್ತಿರುವ ಐಶ್ವರ್ಯ
ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರುವ ಆಕ್ಷನ್-ಕಿಂಗ್ ಅರ್ಜುನ್ ಸರ್ಜಾ ಅವರು ಬಹಳ ಆಸೆಯಿಂದ ತಮ್ಮ ಮಗಳು ಐಶ್ವರ್ಯ ಅರ್ಜುನ್ ಅವರನ್ನು ತಮ್ಮದೇ ನಿರ್ದೇಶನದಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ.
ಅಪ್ಪನ ಆಸೆಯಂತೆ ಮಗಳು ಕೂಡ ಬಹಳ ಉತ್ಸಾಹದಿಂದ ಕನ್ನಡ ಚಿತ್ರದಲ್ಲಿ ಮಿಂಚಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಇದರಿಂದ ಅರ್ಜುನ್ ಸರ್ಜಾ ಅವರು ಸುಮಾರು 2-3 ವರ್ಷಗಳಿಂದ ಕಂಡಿದ್ದ ಕನಸು ನನಸಾಗುತ್ತಿದೆ.[ಅರ್ಜುನ್ ಸರ್ಜಾರ 'ಪ್ರೇಮ ಬರಹದಲ್ಲಿ' ಪುನೀತ್ ಇದ್ದಾರಾ?]

ಅಂದಹಾಗೆ ಅರ್ಜುನ್ ಸರ್ಜಾ ಅವರಿಗೆ ತಮ್ಮ ಮಗಳನ್ನು ಈ ಮೊದಲೇ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯ ಮಾಡಬೇಕೆಂದು ಅಂದುಕೊಂಡಿದ್ದರಂತೆ, ಹೀಗಂತ ಖುದ್ದು ಸರ್ಜಾ ಅವರ ಮಗಳು ಐಶ್ವರ್ಯ ಅವರು ಬಾಯಿ ಬಿಟ್ಟಿದ್ದಾರೆ.
'ನಾನು ಚಿಕ್ಕವಳಿರುವಾಗಲೇ ನನ್ನನ್ನು ಹೀರೋಯಿನ್ ಮಾಡಬೇಕೆಂಬುದು ನನ್ನ ಅಪ್ಪ ಕನಸು ಕಂಡಿದ್ದರು. ನಾನು ಚಿಕ್ಕವಳಿದ್ದಾಗ ಅಪ್ಪ ಫ್ರೀಯಾಗಿದ್ದರೆ ನನ್ನನ್ನು ಕನ್ನಡಿ ಮುಂದೆ ನಿಲ್ಲಿಸಿ, ಬೇರೆ ಬೇರೆ ತರದಲ್ಲಿ ಪೋಸ್ ಕೊಡಲು ಹೇಳಿ ಅವರೇ ಆಡಿಷನ್ ಮಾಡುತ್ತಿದ್ದರು' ಎಂದು ನಟಿ ಐಶ್ವರ್ಯ ಅವರು ಭಾನುವಾರ ನಡೆದ 'ಪ್ರೇಮ ಬರಹ' ಚಿತ್ರದ ಮುಹೂರ್ತ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.[ಚಿತ್ರಗಳು: ಅದ್ದೂರಿಯಾಗಿ 'ಪ್ರೇಮ ಬರಹ' ಆರಂಭಿಸಿದ ಅರ್ಜುನ್ ಸರ್ಜಾ]
'ನನಗೂ ನಟಿಯಾಗಬೇಕೆಂಬ ಆಸೆ ಚಿಕ್ಕವಳಿರುವಾಗಲೇ ಇತ್ತು. ನಮ್ಮದು ಸಿನಿಮಾ ಕುಟುಂಬ ಆದ್ದರಿಂದ ಸಣ್ಣವಳಿರುವಾಗಿನಿಂದಲೇ ಚಿತ್ರರಂಗವನ್ನು ಹತ್ತಿರದಿಂದ ನೋಡುತ್ತಾ ಬೆಳೆದಿದ್ದೇನೆ. ನನ್ನ ಶಿಕ್ಷಣ ಪೂರ್ತಿಯಾದ ತಕ್ಷಣ ಮುಂದೇನು? ಎಂದು ಆಲೋಚನೆ ಮಾಡುವಾಗ ನನಗೆ ಹೊಳೆದಿದ್ದು ನಟನೆ. ಇದಕ್ಕೆ ಅಪ್ಪ ಕೂಡ ತುಂಬಾ ಪ್ರೋತ್ಸಾಹಿಸಿದರು. ಅವರಿಗೂ ನಾನು ನಟಿಯಾಗಬೇಕು ಎಂಬ ಕನಸು ಇತ್ತಲ್ವಾ' ಎಂದಿದ್ದಾರೆ ನಟಿ ಐಶ್ವರ್ಯ ಅವರು.[ಮಗಳಿಗಾಗಿ ಸುಂದರ 'ಪ್ರೇಮ ಬರಹ' ಬರೆಯುತ್ತಿರುವ ಅರ್ಜುನ್ ಸರ್ಜಾ]
ನಟಿ ಐಶ್ವರ್ಯ ಅರ್ಜುನ್ ಅವರು ಮೊದಲು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ನಟ ವಿಶಾಲ್ ಅವರ ಜೊತೆ 'ಪಟ್ಟತ್ತಿಯಾನೈ' ಎಂಬ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಆದರೆ ಆ ಸಿನಿಮಾ ಅಷ್ಟಾಗಿ ಕ್ಲಿಕ್ ಆಗದ ಕಾರಣ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಮೂಲಕ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. (ಮುಹೂರ್ತ ಸಮಾರಂಭದ ಚಿತ್ರಗಳು ಕೆಳಗಿನ ಗ್ಯಾಲರಿಯಲ್ಲಿ..)
-ನಟಿ ಐಶ್ವರ್ಯ ಅರ್ಜುನ್
-ಕನ್ನಡ ನಟ ರೆಬೆಲ್ ಸ್ಟಾರ್ ಅಂಬರೀಶ್
-ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾ
-ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾ
-ಅರ್ಜುನ್ ಸರ್ಜಾ, ಚಂದನ್, ಐಶ್ವರ್ಯ ಅರ್ಜುನ್
-ಅರ್ಜುನ್ ಸರ್ಜಾರ ಪತ್ನಿ ಆಶಾ ರಾಣಿ
-ಅಪ್ಪ-ಮಗಳು (ಅರ್ಜುನ್ ಸರ್ಜಾ, ಐಶ್ವರ್ಯ ಅರ್ಜುನ್)
-ಅಂಬಿ, ಶಿವಣ್ಣ ಮತ್ತು ಸರ್ಜಾರ ಉಭಯ ಕುಶಲೋಪರಿ
-ಅಪ್ಪ-ಮಗಳು (ಅರ್ಜುನ್ ಸರ್ಜಾ, ಐಶ್ವರ್ಯ ಅರ್ಜುನ್)
-ಕನ್ನಡ ನಟ ಚಂದನ್, ನಟಿ ಐಶ್ವರ್ಯ ಅರ್ಜುನ್
-ಕನ್ನಡ ನಟ ಚಂದನ್, ನಟಿ ಐಶ್ವರ್ಯ ಅರ್ಜುನ್
-ಕನ್ನಡ ನಟ ಚಂದನ್, ನಟಿ ಐಶ್ವರ್ಯ ಅರ್ಜುನ್
-ಕನ್ನಡ ನಟ ಚಂದನ್, ನಟಿ ಐಶ್ವರ್ಯ ಅರ್ಜುನ್
-ತೆಲುಗು ನಟ ಜಗಪತಿ ಬಾಬು
-ವೇದಿಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್, ಬಿ.ಸರೋಜಾ ದೇವಿ, ಡಿ.ರಾಜೇಂದ್ರ ಸಿಂಗ್ ಬಾಬು, ಭಾರತಿ ವಿಷ್ಣುವರ್ಧನ್
-'ಪ್ರೇಮ ಬರಹ' ಚಿತ್ರದ ಮುಹೂರ್ತ ಸಮಾರಂಭ
-ಶಿವಣ್ಣ ಜೊತೆ ನಾಯಕ-ನಾಯಕಿ ಮತ್ತು ಸರ್ಜಾ
-ಬಿ.ಸರೋಜಾ ದೇವಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತ
-ಹ್ಯಾಟ್ರಿಕ್ ಹೀರೋ ಶಿವಣ್ಣನ ಮುತ್ತಿನಂತಹ ಮಾತುಗಳು


Click it and Unblock the Notifications











