»   » 'ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?

'ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?

By: ಉದಯರವಿ
Subscribe to Filmibeat Kannada

ಆರಂಭದಿಂದಲೂ ಸ್ಯಾಂಡಲ್ ವುಡ್ ನ ಗಮನಸೆಳೆಯುತ್ತಿರುವ ಚಿತ್ರ 'ಆರಂಭ'. ಇತ್ತೀಚೆಗೆ ಈ ಚಿತ್ರದ ಆಡಿಯೋವನ್ನು ಗೋವಾದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದಾರೆ ಚಿತ್ರದ ನಿರ್ದೇಶಕ ಎಸ್ ಹಬಿ ಹನಕೆರೆ. ಇದೀಗ ಯೂಟ್ಯೂಬ್ ನಲ್ಲಿ ಈ ಚಿತ್ರದ ಟೀಸರ್ ಭಾರಿ ಸದ್ದು ಮಾಡುತ್ತಿದೆ.

"ವಯಸ್ಸಿಗೆ ಬಂದ ಹುಡುಗಿಗೆ ಯಾರಾದರೂ ಬಂದು ನನ್ನ ಎದೆ ಮುಟ್ಟಲಿ ಎಂಬ ಆಸೆ ಇರುತ್ತದೆ" ಎಂಬ ಟೇಸರ್ ನಲ್ಲಿನ ಒಂದೇ ಒಂದು ಡೈಲಾಗ್ ಪಡ್ಡೆಗಳನ್ನು ನಕಶಿಖಾಂತ ರೊಚ್ಚಿಗೆಬ್ಬಿಸುವಂತಿದೆ. ಅದಕ್ಕೆ ತಕ್ಕಂತೆ ಚಿತ್ರದ ಟೀಸರ್ ಸಹ ಇರುವುದು ವಿಶೇಷ. [ಲಾಸ್ಟ್ ಛಾನ್ಸ್: ಆರಂಭ ಟೈಟಲ್ ಡಿಜೈನ್ ಸ್ಪರ್ಧೆ]

A scene from movie Aarambha

ಈ ಚಿತ್ರದ ಟೀಸರ್ ನಲ್ಲಿ ನಾಯಕಿಯ ಎದೆಗೆ ಕೈಹಾಕುತ್ತಾನೆ ನಾಯಕ. ಬಹುಶಃ ಇದುವರೆಗೂ ಈ ರೀತಿಯ ಸಾಹಸ, ಧೈರ್ಯವನ್ನು ಸ್ಯಾಂಡಲ್ ವುಡ್ ನಲ್ಲಿ ಯಾವ ನಿರ್ದೇಶಕರು ಮಾಡಿಲ್ಲ. ಒಂದೇ ಆ ರೀತಿಯ ಸನ್ನಿವೇಶಗಳು ಬಂದಾಗ ಕೇವಲ ಧ್ವನಿ ಮಾತ್ರ ಕೇಳುತ್ತಿರುತ್ತದೆ ಇಲ್ಲಾ ಮಸುಕು ಮಸುಕಾಗಿ ತೋರಿಸಲಾಗುತ್ತದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

"ಅಹಂಕಾರದಿಂದಲ್ಲ ದುರಹಂಕಾರದಿಂದ ಹೇಳ್ತಿದ್ದೀನಿ...ಇಡೀ ಸಮಾಜದ ದಿಕ್ಕನ್ನೇ ಬದಲಾಯಿಸ್ತೀನಿ..."ಎಂಬ ಈ ಚಿತ್ರದ ಬಗೆಗಿನ ಇನ್ನೆರಡು ಸಾಲುಗಳು ಇದ್ಯಾವ ರೀತಿಯ ಚಿತ್ರ ಇರಬಹುದು ಎಂದು ಕುತೂಹಲ ಮೂಡಿವಂತೆ ಮಾಡಿದೆ. ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ ಎಸ್ ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಊರಾದ ಕಣಗಾಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ನದೆದಿರುವುದು ಇನ್ನೊಂದು ವಿಶೇಷ. ಕಣಗಾಲ್ ನಲ್ಲಿ ಚಿತ್ರೀಕರಿಸಿರುವ ಮೊದಲ ಚಿತ್ರ ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರದ ಪ್ರೀಮಿಯರ್ ಶೋ ಕಣಗಾಲ್ ನಲ್ಲಿ ಆಯೋಜಿಸಿ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದ್ದಾರೆ ಅಭಿ ಹನಕೆರೆ.

Aarambha teaser1

ಗೋವಾ, ಮುಂಬೈ, ದೆಹಲಿ, ಪುಣೆ, ಕೋಲ್ಕತ್ತಾ, ಚೆನ್ನೈ, ಕೊಯಮತ್ತೂರು, ಹೊಸೂರು, ಕಾಸರಗೋಡು ಮತ್ತಿತರ ಕಡೆ ಆರಂಭ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದ ಟ್ಯಾಗ್ ಲೈನ್ "Last Chance" ಎಂಬುದು.

ನಟ ಮಿಥುನ್ ಪ್ರಕಾಶ್, ಅಭಿರಾಮಿ ಸೇರಿದಂತೆ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ. ಗುರುಕಿರಣ್, ಗೋಟುರಿ, ಕವಿರಾಜ್, ಅಭಿ ಹನಕೆರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗರಾಜ್ ಛಾಯಾಗ್ರಹಣ, ಗಿರೀಶ್ ಸಂಕಲನ ಹಾಗೂ ಸಂದೀಪ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

English summary
Kannada movie 'Aarambha - Last Chance' movie teaser released recently. The teaser had an intimacy scene and it became a peg to hang in Sandalwood moviegoears. The movie directed by S Abhi Hanakere and produced by D Ganesh, V Nagenahalli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada