ಆನಂದ್ ಆಡಿಯೊಗೆ ಬಂತು ಯುಟ್ಯೂಬ್ ಡೈಮಂಡ್ ಪ್ಲೇ ಬಟನ್; ಯಾವ ಸಾಧನೆ ಮಾಡಿದ್ರೆ ಸಿಗುತ್ತೆ ಈ ಪುರಸ್ಕಾರ?

ಯುಟ್ಯೂಬ್ ಸದ್ಯ ಜನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಕೇವಲ ಮನರಂಜನೆಗಾಗಿ ಮಾತ್ರವಲ್ಲದೇ ದಿನನಿತ್ಯದ ಸುದ್ದಿಗಳು, ವಿಷಯವೊಂದರ ಮಾಹಿತಿಗಳೂ ಸಹ ಸ್ಪಷ್ಟವಾಗಿ ಸಿಗುವಂತಹ ಕಲಿಕಾ ಕೇಂದ್ರವಾಗಿ ಯುಟ್ಯೂಬ್ ಗುರುತಿಸಿಕೊಳ್ಳತೊಡಗಿದೆ.

ಹೀಗೆ ದಿನದಿಂದ ದಿನಕ್ಕೆ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಿರುವ ಯುಟ್ಯೂಬ್ ಬಳಕೆದಾರರ ಜತೆಗೆ ಹೆಚ್ಚೆಚ್ಚು ಕಂಟೆಂಡ್ ಕ್ರಿಯೇಟರ್‌ಗಳನ್ನೂ ಸಹ ಹೊಂದುತ್ತಿದೆ. ಹೌದು, ವಿಡಿಯೊಗಳನ್ನು ತಯಾರಿಸಿ ಅಪ್‌ಲೋಡ್ ಮಾಡುವವರನ್ನು ಕಂಟೆಂಟ್ ಕ್ರಿಯೇಟರ್ಸ್ ಎಂದು ಕರೆಯಲ್ಪಡಲಿದ್ದು, ಇವರುಗಳು ತಮ್ಮದೇ ಚಾನೆಲ್ ಮೂಲಕ ವಿಡಿಯೊಗಳನ್ನು ಅಪ್‌ಲೋಡ್ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Anand Audio got diamond play button for completing 10 million subscribers on YouTube

ಕೆಲವರು ತಮ್ಮದೇ ಸ್ವಂತ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾದ ವಿಡಿಯೊಗಳನ್ನು ಹಂಚಿಕೊಂಡರೆ, ಇನ್ನೂ ಕೆಲ ಸಂಸ್ಥೆಗಳು ಚಲನಚಿತ್ರಗಳ ಹಾಡುಗಳು, ಟ್ರೈಲರ್, ಟೀಸರ್ ಹಾಗೂ ಸೀನ್‌ಗಳನ್ನು ಹಂಚಿಕೊಂಡು ಯುಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿವೆ.

ಹೀಗೆ ಸಿನಿಮಾಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುವ ದೊಡ್ಡ ದೊಡ್ಡ ಯುಟ್ಯೂಬ್ ಚಾನೆಲ್‌ಗಳ ಪೈಕಿ ಹೆಚ್ಚಿನವು ಈ ಹಿಂದೆ ಆಡಿಯೊ ಕಂಪನಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಗಳೇ. ಹೌದು, ಈ ಹಿಂದೆ ಚಿತ್ರಗಳ ಹಾಡುಗಳ ಹಕ್ಕನ್ನು ಖರೀದಿಸಿ ಕ್ಯಾಸೆಟ್‌ಗಳ ಮೂಲಕ ಮಾರುಕಟ್ಟೆಗೆ ತಲುಪಿಸುತ್ತಿದ್ದ ಸಂಸ್ಥೆಗಳು ಇದೀಗ ಡಿಜಿಟಲ್ ಯುಗದಲ್ಲಿ ಯುಟ್ಯೂಬ್ ಮಾರುಕಟ್ಟೆಗೆ ಧುಮುಕಿವೆ.

ಈ ರೀತಿ ಡಿಜಿಟಲ್ ಯುಗದಲ್ಲಿಯೂ ಸದ್ದು ಮಾಡುತ್ತಿರುವ ಚಾನೆಲ್‌ಗಳು ವಿವಿಧ ಮೈಲಿಗಲ್ಲುಗಳನ್ನು ಮುಟ್ಟಿದಾಗ ಅವುಗಳಿಗೆ ಯುಟ್ಯೂಬ್ ಸಂಸ್ಥೆ ವಿಭಿನ್ನ ಪ್ರಶಸ್ತಿಗಳನ್ನು ನೀಡಿ ಸಾಧನೆಯನ್ನು ಶ್ಲಾಘಿಸುವ ಕೆಲಸವನ್ನು ಮಾಡುತ್ತದೆ. ಸಿಲ್ವರ್ ಕ್ರಿಯೇಟರ್ ಅವಾರ್ಡ್, ಗೋಲ್ಡ್ ಕ್ರಿಯೇಟರ್ ಅವಾರ್ಡ್, ಡೈಮಂಡ್ ಕ್ರಿಯೇಟರ್ ಅವಾರ್ಡ್, ಕಸ್ಟಮ್ ಕ್ರಿಯೇಟರ್ ಅವಾರ್ಡ್ ಹಾಗೂ ರೆಡ್ ಡೈಮಂಡ್ ಕ್ರಿಯೇಟರ್ ಅವಾರ್ಡ್ ಈ ರೀತಿಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಸದ್ಯ ಈ ಪ್ರಶಸ್ತಿಗಳ ಪೈಕಿ ಡೈಮಂಡ್ ಕ್ರಿಯೇಟರ್ ಅವಾರ್ಡ್ ಅನ್ನು ಕನ್ನಡದ ಯುಟ್ಯೂಬ್ ಚಾನೆಲ್ ಆನಂದ್ ಆಡಿಯೊಗೆ ಯುಟ್ಯೂಬ್ ನೀಡಿ ಪ್ರಶಂಸಿಸಿದೆ. ಹತ್ತು ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿರುವ ಕಾರಣಕ್ಕಾಗಿ ಈ ಪ್ರಶಸ್ತಿಯನ್ನು ಯುಟ್ಯೂಬ್ ನೀಡಿದೆ. ಬೆಳ್ಳಿ ಲೇಪಿತ ಲೋಹದಿಂದ ಈ ಬಟನ್ ಅನ್ನು ತಯಾರಿಸಲಾಗಿದ್ದು ಮಧ್ಯದಲ್ಲಿ ಬಣ್ಣರಹಿತ ಸ್ಪಟಿಕ ಲೋಹದ ತ್ರಿಕೋನಾಕರಾದ ಬಟನ್ ಇರಿಸಲಾಗಿದೆ. ಸದ್ಯ ಈ ಬಟನ್ ಪಡೆದ ಖುಷಿಯನ್ನು ಆನಂದ್ ಅಡಿಯೊ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ..

ಇನ್ನು ಸಿಲ್ವರ್ ಪ್ಲೇ ಬಟನ್ ಪ್ರಶಸ್ತಿಯನ್ನು ಒಂದು ಲಕ್ಷ ಚಂದಾದಾರರನ್ನು ಪೂರೈಸಿದ ಯುಟ್ಯೂಬ್ ಚಾನೆಲ್‌ಗೆ ನೀಡಲಾಗಲಿದ್ದು, ಇದು ನಿಕಲ್‌ನಿಂದ ಮಾಡಲ್ಪಟ್ಟಿರುತ್ತದೆ. ಗೋಲ್ಡನ್ ಪ್ಲೇ ಬಟನ್ ಅನ್ನು ಒಂದು ಮಿಲಿಯನ್ ಚಂದಾದಾರರನ್ನು ಪೂರೈಸುವ ಚಾನೆಲ್‌ಗಳಿಗೆ ನೀಡಲಾಗಲಿದ್ದು, ಇದು ಚಿನ್ನ ಲೇಪಿತ ಹಿತ್ತಾಳೆಯಿಂದ ಮಾಡಲ್ಪಟ್ಟಿರುತ್ತದೆ. ಇನ್ನು ಡೈಮಂಡ್ ಪ್ಲೇ ಬಟನ್ ಅನ್ನು ಹತ್ತು ಮಿಲಿಯನ್ ಚಂದಾದಾರರನ್ನು ಪೂರೈಸುವ ಚಾನೆಲ್‌ಗಳಿಗೆ ನೀಡಲಾಗಲಿದ್ದು, ಇದು ಬೆಳ್ಳಿ ಲೇಪಿತ ಲೋಹದಿಂದ ಮಾಡಲ್ಪಟ್ಟಿರುತ್ತದೆ.

50 ಮಿಲಿಯನ್ ಚಂದಾದಾರರನ್ನು ಪೂರೈಸುವ ಯುಟ್ಯೂಬ್ ಚಾನೆಲ್‌ಗಳಿಗೆ ಕಸ್ಟಮ್ ಕ್ರಿಯೇಟರ್ ಪ್ರಶಸ್ತಿಯನ್ನು ನೀಡಲಾಗಲಿದ್ದು, ನೂರು ಮಿಲಿಯನ್ ಚಂದಾದಾರರನ್ನು ಹೊಂದಿದ ಚಾನೆಲ್‌ಗಳಿಗೆ ರೆಡ್ ಡೈಮಂಡ್ ಬಟನ್ ಅನ್ನು ನೀಡಲಾಗುತ್ತದೆ.

More from Filmibeat

English summary
Anand Audio got diamond play button for completing 10 million subscribers on YouTube. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X