ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿಯ 45 ಚಿತ್ರಕ್ಕೆ ಫುಲ್ ಡಿಮ್ಯಾಂಡ್, ಭಾರಿ ಮೊತ್ತಕ್ಕೆ ಮಾರಾಟವಾಯ್ತು ಆಡಿಯೋ ರೈಟ್ಸ್..!

ಸಿನಿಮಾ ಮಾಡುವುದು ಸುಲಭ ಅಲ್ಲ. ಅದರಲ್ಲಿಯೂ ಮಲ್ಟಿ ಸ್ಟಾರ್ ಚಿತ್ರ ಮಾಡಲು ಗಟ್ಟಿ ಗುಂಡಿಗೆ ಬೇಕು. ಯಾಕೆಂದರೆ ಚಿತ್ರರಂಗದ ಮೂರು ಸ್ಟಾರ್‌ಗಳು ಒಂದೇ ಚಿತ್ರದಲ್ಲಿದ್ದಾರೆ ಎಂದರೆ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿರುತ್ತವೆ. ಇನ್ನೂ ನಿರ್ದೇಶಕರ ಮೇಲಿನ ಒತ್ತಡ ಕೂಡ ಅಷ್ಟೇ ಹೆಚ್ಚಿರುತ್ತೆ. ಚೂರೇ ಚೂರು ಯಾಮಾರಿದರೂ ಕೂಡ ಮೂರು ಸ್ಟಾರ್‌ಗಳ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುತ್ತೆ.

ಈ ಕಾರಣಕ್ಕೆ ಮಲ್ಟಿ ಸ್ಟಾರ್ ಚಿತ್ರಕ್ಕೆ ಕೈ ಹಾಕುವವರ ಸಂಖ್ಯೆ ತುಂಬಾ ಕಡಿಮೆ. ಅಲ್ಲೊಬ್ಬರು ಇಲ್ಲೊಬ್ಬರು ಈ ಧೈರ್ಯವನ್ನು ಮಾಡುತ್ತಾರೆ. ಆ ಪೈಕಿ ಅರ್ಜುನ್ ಜನ್ಯ ಕೂಡ ಒಬ್ಬರು. ಹೌದು, ನಿಮಗೆ ಗೊತ್ತಿರುವಂತೆ.. ಡಾ.ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರನ್ನು ನಿರ್ದೇಶಕನಾಗಿ ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಅರ್ಜುನ್ ಜನ್ಯ ಒಂದೇ ಚಿತ್ರಕ್ಕೆ ಕರೆತಂದಿದ್ದಾರೆ. ತಮ್ಮ ಕನಸಿನ ಚಿತ್ರ '45'ದ ತಾರಾಬಲವನ್ನು ಈ ಮೂಲಕ ಹೆಚ್ಚಿಸಿದ್ದಾರೆ.

Anand Audio has bagged the audio rights for 45 starring Dr Shivaraj Kumar Upendra Raj B Shetty

ಇನ್ನೂ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ. ಇನ್ನೂ ಹಿಂದೆ ಶಿವಣ್ಣ ಹೇಳಿದಂತೆ ಇಲ್ಲಿ ಅವರು ಮುಂದು. ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ. ಎಲ್ಲರಿಗೆ ಸಮಾನವಾದ ಪ್ರಾಮುಖ್ಯತೆಯನ್ನು ಚಿತ್ರದಲ್ಲಿ ನೀಡಲಾಗಿದೆ. ಈ ಹಿನ್ನೆಲೆ ಚಿತ್ರದ ಮೇಲಿನ ಕುತೂಹಲ ಇನ್ನೂ ಹೆಚ್ಚಾಗಿದೆ. ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರ 45" ಇಡೀ ಭಾರತೀಯರೆ ಮೆಚ್ಚುವಂತಹ ಆಕ್ಷನ್ ಚಿತ್ರವಾಗಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಈಗ ಚಿತ್ರದ ಆಡಿಯೋ ಹಕ್ಕು ಖರೀದಿಯಾಗಿರುವ ಸುದ್ದಿ ಹೊರ ಬಿದ್ದಿದೆ.

ಹೌದು, ಅರ್ಜುನ್ ಜನ್ಯ ನಿರ್ದೇಶನದ ತ್ರಿಮೂರ್ತಿಗಳ ಅಪರೂಪದ ಸಂಗಮಕ್ಕೆ ಸಾಕ್ಷಿಯಾದ 45 ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಚಿತ್ರದ ಹಾಡುಗಳನ್ನು ಮೆಚ್ಚಿಕೊಂಡು ಹಾಡುಗಳ ಹಕ್ಕುಗಳನ್ನು ಭಾರೀ ಮೊತ್ತವನ್ನು ನೀಡಿ ಖರೀದಿಸಿದೆ. ಸದ್ಯದಲ್ಲಿಯೇ ಹಾಡುಗಳನ್ನು ಕೂಡ ಬಿಡುಗಡೆ ಮಾಡುವ ಯೋಜನೆಯನ್ನು ಸಿದ್ದ ಮಾಡುತ್ತಿದೆ. ಉಳಿದಂತೆ ಚಿತ್ರದ ಫೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ.

ಅಂದ್ಹಾಗೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ' ಆ ನಂತರ ಸ್ಟಾರ್ ಸುವರ್ಣದಲ್ಲಿನ 'ಗೌರಿ ಶಂಕರ' ಧಾರಾವಾಹಿಗಳಲ್ಲಿ ನಟಿಸಿದ್ದ ಕೌಸ್ತುಭ ಮಣಿ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ಧಾರೆ. ಇನ್ನು ನಿರ್ದೇಶನದ ಜೊತೆ ಕಥೆ ಚಿತ್ರಕಥೆಯನ್ನು ತಾವೇ ಬರೆದಿರುವ ಅರ್ಜುನ್ ಜನ್ಯ ಚಿತ್ರದ ಸಂಗೀತ ನಿರ್ದೇಶನದ ಜವಾಬ್ಧಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ. ಸತ್ಯ ಹೆಗ್ಡೆ ಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X