twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಜೊತೆಜೊತೆಗೆ ಪರಭಾಷೆಯಲ್ಲೂ ಸಾಗಿತ್ತು 'ಅನಂತ'ಯಾನ

    By Bharath Kumar
    |

    ಕನ್ನಡ ಚಿತ್ರರಂಗದ ನಿಜವಾದ ಸವ್ಯಸಾಚಿ ಅನಂತ್ ನಾಗ್. ಸುಮಾರು ನಾಲ್ಕು ದಶಕಗಳಿಂದ ಚಂದನವನದಲ್ಲಿ ತಮ್ಮ ನೈಜ ನಟನೆ, ಮೃದು ಸ್ವಭಾವದಿಂದ ವಿಶೇಷವಾಗಿ ನಿಂತಿರುವ ಧ್ರುವತಾರೆ.

    ಸಿನಿಮಾವೇ ಜೀವನ, ಸಿನಿಮಾಗಾಗಿ ಯಾವ ರೀತಿಯ ಚಾಲೆಂಜ್ ಬೇಕಾದರು ಎದುರಿಸುವ ಧೈರ್ಯ 70ರ ಹರೆಯದಲ್ಲೂ ಕಮ್ಮಿಯಾಗಿಲ್ಲ. ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂತಹ ಕಲಾವಿದರ ಸಮಕಾಲಿನದಿಂದಲೂ ಇಲ್ಲಿಯವರೆಗೂ ಅದೇ ಹುಮ್ಮಸ್ಸು, ಅದೇ ವಿಶ್ವಾಸ ಅನಂತ್ ಅವರ ನಟೆಯಲ್ಲಿ ಕಾಣುತ್ತೆ.

    ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.! ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.!

    ಇಂದು (ಸೆಪ್ಟಂಬರ್ 4) ಅವರ ಹುಟ್ಟುಹಬ್ಬ. 40 ವರ್ಷದ ತಮ್ಮ ಪ್ರಯಾಣದಲ್ಲಿ ಸುಮಾರು 220ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ಬಂದ 'ಸಂಕಲ್ಪ' ಚಿತ್ರದಿಂದ ಇತ್ತೀಚಿನ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದವರೆಗೂ ಅವರ ಜರ್ನಿ ನಿಜಕ್ಕೂ ಮೈಲಿಗಲ್ಲು. ಅಂದ್ಹಾಗೆ, ಅನಂತ್ ನಾಗ್ ಕೇವಲ ಕನ್ನಡದಲ್ಲಿ ಮಾತ್ರ ನಟಿಸಲ್ಲ, ಕನ್ನಡ ಬಿಟ್ಟು ಐದಾರು ಭಾಷೆಯಲ್ಲಿ ಬಣ್ಣ ಹಚ್ಚಿದ್ದಾರೆ. ಆ ಸಿನಿಮಾಗಳು ಯಾವುದು ಎಂಬುದರ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ.....ಮುಂದೆ ಓದಿ....

    ಅನಂತ್ ಅವರ 'ಅಂಕುರ್'

    ಅನಂತ್ ಅವರ 'ಅಂಕುರ್'

    1973ರಲ್ಲಿ ಕನ್ನಡದ 'ಸಂಕಲ್ಪ' ಚಿತ್ರದಲ್ಲಿ ನಟಿಸುವ ಮೂಲಕ ಅನಂತ್ ನಾಗ್ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ಅದಾದ ನಂತರ ದಖಿನಿ ಭಾಷೆಯಲ್ಲಿ 'ಅಂಕುರ್' ಸಿನಿಮಾ ಮಾಡಿದರು. ಇದು ಅನಂತ್ ನಾಗ್ ಅವರ ಮೊದಲ ಪರಭಾಷೆ ಸಿನಿಮಾ. ಈ ಸಿನಿಮಾ ಮೂರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು. ಈ ಚಿತ್ರವನ್ನ ಶ್ಯಾಂ ಬೆಂಗಾಲ್ ನಿರ್ದೇಶನ ಮಾಡಿದ್ದರು.

    ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ

    ಹಿಂದಿಯ 'ನಿಶಾಂತ್'

    ಹಿಂದಿಯ 'ನಿಶಾಂತ್'

    ಶ್ಯಾಂ ಬೆಂಗಾಲ್ ನಿರ್ದೇಶನ ಮಾಡಿದ್ದ ಹಿಂದಿ ಸಿನಿಮಾ 'ನಿಶಾಂತ್' ಚಿತ್ರದಲ್ಲಿ ಅನಂತ್ ನಾಗ್ ಅಭಿನಯಿಸಿದ್ದರು. ಗಿರೀಶ್ ಕಾರ್ನಡ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಅನಂತ್ ನಾಗ್ ಅವರ ಪ್ರಮುಖ ಪಾತ್ರ ನಿಭಾಯಿಸಿದ್ದರು. ಇದು ಇವರು ಮೊದಲ ಹಿಂದಿ ಸಿನಿಮಾ. ಈ ಸಿನಿಮಾ ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು.

    ಶಂಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ ಬಿಚ್ಚಿಟ್ಟ ಅನಂತ್ ನಾಗ್ ಶಂಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ ಬಿಚ್ಚಿಟ್ಟ ಅನಂತ್ ನಾಗ್

    ಮೊದಲ ತೆಲುಗು ಸಿನಿಮಾ

    ಮೊದಲ ತೆಲುಗು ಸಿನಿಮಾ

    1977 ರಲ್ಲಿ ಬಿಡುಗಡೆಯಾದ 'ಪ್ರೇಮಲೇಖಲು' ಚಿತ್ರದಲ್ಲಿ ಅಭಿನಯಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದರು. ಕೆ ರಾಘವೇಂದ್ರ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅನಂತ್ ನಾಗ್, ಜಯಸುಧಾ, ಮುರಳಿ ಮೋಹನ್ ಕಾಣಿಸಿಕೊಂಡಿದ್ದರು.

    ಮುಂಬೈನ ಮುಜುಗರದ ಶಾಲಾ ದಿನಗಳ ಬಗ್ಗೆ ಅನಂತ್ ಹೀಗಂದ್ರು?ಮುಂಬೈನ ಮುಜುಗರದ ಶಾಲಾ ದಿನಗಳ ಬಗ್ಗೆ ಅನಂತ್ ಹೀಗಂದ್ರು?

    ಹಿಂದಿಯಲ್ಲಿ ಹೆಚ್ಚು ನಟನೆ

    ಹಿಂದಿಯಲ್ಲಿ ಹೆಚ್ಚು ನಟನೆ

    ಕನ್ನಡ ಬಿಟ್ಟರೇ, ಅನಂತ್ ನಾಗ್ ಹಿಂದಿಯಲ್ಲಿ ಹೆಚ್ಚು ಸಿನಿಮಾ ಮಾಡಿದ್ದಾರೆ. ಕೊಂಡ್ರ, ಗೆಹ್ರಾಯಿ, ಮಂಗಳಸೂತ್ರು, ಕಲಿಯುಗ್, ರಾತ್, ಮಾಯಾ, ಯುವ ಅಂತಹ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

    ಮೊದಲ ಮಲಯಾಳಂ ಚಿತ್ರ

    ಮೊದಲ ಮಲಯಾಳಂ ಚಿತ್ರ

    ಲೆನಿನ್ ರಾಜೇಂದ್ರನ್ ನಿರ್ದೇಶನದ 'ಸ್ವಾತಿ ತಿರುನಾಲ್' ಮಲಯಾಳಂ ಚಿತ್ರದಲ್ಲಿ ಅನಂತ್ ಅಭಿನಯಿಸಿದ್ದರು. 1987ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಅನಂತ್ ನಾಗ್, ಶ್ರೀವಿದ್ಯಾ, ಅಂಬಿಕಾ, ರಂಜನಿ ಸೇರಿದಂತೆ ಹಲವರು ಅಭಿನಯಿಸಿದ್ದರು.

    ಮೊದಲ ತಮಿಳು ಸಿನಿಮಾ

    ಮೊದಲ ತಮಿಳು ಸಿನಿಮಾ

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಸಿನಿಮಾ ತಮಿಳಿನಲ್ಲಿ 'ನಾಟುಕ್ಕು ಒರು ನಲ್ಲವನ್' ಹೆಸರಿನಲ್ಲಿ ತಯಾರಾಗಿತ್ತು. ರಜನಿಕಾಂತ್ ನಾಯಕನಾಗಿದ್ದ ಈ ಚಿತ್ರದಲ್ಲಿ ಅನಂತ್ ನಾಗ್ ಕನ್ನಡದಲ್ಲಿ ಮಾಡಿದ್ದ ಮೂಲವನ್ನ ನಿರ್ವಹಿಸಿದ್ದರು. ಇದು ಇವರ ಮೊದಲ ತಮಿಳು ಸಿನಿಮಾ. ತಮಿಳಿನಲ್ಲೂ ರವಿಚಂದ್ರನ್ ಅವರೇ ನಿರ್ದೇಶನ ಮಾಡಿದ್ದರು.

    'ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ'ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ

    ಮೊದಲ ಮರಾಠಿ ಚಿತ್ರ

    ಮೊದಲ ಮರಾಠಿ ಚಿತ್ರ

    2003ರಲ್ಲಿ 'ಅಹನಾತ್' ಎಂಬ ಮರಾಠಿ ಸಿನಿಮಾದಲ್ಲಿ ಅನಂತ್ ನಾಗ್ ಅಭಿನಯಿಸಿದ್ದರು. ಸೋನಾಲಿ ಬೇಂದ್ರೆ ನಾಯಕಿಯಾಗಿದ್ದ ಚಿತ್ರದಲ್ಲಿ ಅನಂತ್ ನಾಗ್ ರಾಜನಾಗಿ ಕಾಣಿಸಿಕೊಂಡಿದ್ದರು.

    English summary
    There's no denying the fact that Anant Nag is one of the biggest and most respected names in the Kannada film industry. Today (September 4, 2018), as he turns a year older, we take a look at some of his best films and celebrate his contribution to the film world.
    Tuesday, September 4, 2018, 20:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X