For Quick Alerts
  ALLOW NOTIFICATIONS  
  For Daily Alerts

  ಹೊಸ ತಿರುವು ಪಡೆದ ಹೇಮಶ್ರೀ ಸಾವಿನ ಪ್ರಕರಣ

  By ಅನಂತರಾಮು, ಹೈದರಾಬಾದ್
  |
  ಕಿರುತೆರೆ ನಟಿ ಹೇಮಶ್ರೀ ಸಂಶಯಾಸ್ಪದ ಸಾವಿನ ಪ್ರಕರಣ ಪೊಲೀಸರಿಗೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಏತನ್ಮಧ್ಯೆ ಆಕೆಯ ಸಾವಿನ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಈಕೆಯ ಸಂಶಯಾಸ್ಪದ ಸಾವಿನ ಹಿಂದೆ ಅನಂತಪುರಂ ಜಿಲ್ಲೆಗೆ ಸೇರಿರುವ ಆಂಧ್ರ ಸಚಿವನೊಬ್ಬನ ಕೈವಾಡ ಇದೆ ಎಂಬ ಆರೋಪಗಳು ಕೇಳಿಬಂದಿವೆ.

  ಈ ಆರೋಪಗಳನ್ನು ಮಾಡುತ್ತಿರುವವರು ತೆಲುಗು ದೇಶಂ ಪಕ್ಷದ ಹಿರಿಯ ಮುಖಂಡ ವರ್ಲಾ ರಾಮಯ್ಯ. ಅವರು ವಿಜಯವಾಡದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಹೇಮಶ್ರೀ ಪತಿ ಸುರೇಂದ್ರ ಬಾಬು ಹಾಗೂ ನಗಪಾಲಿಕೆಯ ಮಾಜಿ ಸದಸ್ಯರಿಬ್ಬರು ಆಂಧ್ರ ಸಚಿವರೊಬ್ಬರನ್ನು ಬುಟ್ಟಿಗೆ ಹಾಕಿಕೊಳ್ಳಲು ಹೇಮಶ್ರೀಯನ್ನು ಬಳಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

  ಈ ಪ್ರಕರಣವನ್ನು ಮುಚ್ಚಿ ಹಾಕಲು ಆಂಧ್ರ ಸರ್ಕಾರ ಯತ್ನಿಸುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಹೆಸರು ಪೊಲೀಸರಿಗೆ ಗೊತ್ತಿದೆ. ಆದರೂ ಸರ್ಕಾರ ಕಣ್ಣು ಬಾಯಿ ಮುಚ್ಚಿಕೊಂಡು ಕುಳಿತಿದೆ. ನೈತಿಕ ಹೊಣೆ ಹೊತ್ತು ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  ಇಲ್ಲಾ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಹೆಸರು ಹೇಳಲಿ. ಅದು ಆಗದಿದ್ದರೆ ಸಬಿತಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರಾಮಯ್ಯ ಆಗ್ರಹಿಸಿದ್ದಾರೆ. ಆದರೆ ಈ ಆರೋಪಗಳನ್ನು ಆಂಧ್ರ ಪೊಲೀಸರು ತಳ್ಳಿ ಹಾಕಿದ್ದಾರೆ.

  ಹೇಮಶ್ರೀ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಮುಚ್ಚಿಹಾಕಲು ಯಾವುದೇ ರಾಜಕೀಯ ಒತ್ತಡ ಬರುತ್ತಿಲ್ಲ. ಆರೋಪಿಗಳನ್ನು ಬಂಧಿಸಲು ಕರ್ನಾಟಕ ಪೊಲೀಸರ ಜೊತೆ ಕೈಜೋಡಿಸುತ್ತಿದ್ದೇವೆ ಎಂದು ರಾಯಲಸೀಮಾ ಐಜಿ ಗೋವಿಂದ ಸಿಂಗ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

  English summary
  Telugu Desam Party(TDP) leader Varla Ramaiah alleges that Anantapur minister hand in popular Kannada small screen actress Hemashree's (32) mysterious death, who was mysteriously dead by her husband Surendra Babu to the Baptist hospital in Bangalore few days ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X