ದ್ವಾರಕೀಶ್ ಬ್ಯಾನರ್ ನಲ್ಲಿ ಅನಂತ್ ನಾಗ್ : ಮತ್ತೆ ಒಂದಾದ ಹಳೆ ಜೋಡಿಗಳು

ನಟ ಅನಂತ್ ನಾಗ್ ಸದಾ ತಮ್ಮ ವಿಶೇಷ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚಿಗಷ್ಟೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ ಅವರು ಈಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ನಟ ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಅನಂತ್ ನಾಗ್ ಸಿನಿಮಾ ಮಾಡುತ್ತಿದ್ದಾರೆ. ಇಂದಿನ ಸ್ಟಾರ್ ನಟನ ಮಟ್ಟಿಗೆ ಬ್ಯುಸಿ ಇರುವ ಅವರು ಈಗ ಮತ್ತೊಂದು ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಹಿಂದೆ ದ್ವಾರಕೀಶ್ ಬ್ಯಾನರ್ ನಲ್ಲಿ ಬಂದ 49ನೇ ಸಿನಿಮಾ 'ಆಟಗಾರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನಂತ್ ಈಗ ಮತ್ತೆ ಅದೇ ಬ್ಯಾನರ್ ನಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರೆ.

ಅಂದಹಾಗೆ, ದ್ವಾರಕೀಶ್ ಬ್ಯಾನರ್ ನಲ್ಲಿ ಅನಂತ್ ನಾಗ್ ನಟನೆಯಲ್ಲಿ ಬರುತ್ತಿರುವ ಆ ಹೊಸ ಸಿನಿಮಾದ ವಿವರ ಮುಂದಿದೆ ಓದಿ..

ದ್ವಾರಕೀಶ್ ಬ್ಯಾನರ್ ನ 52ನೇ ಚಿತ್ರ

ದ್ವಾರಕೀಶ್ ಬ್ಯಾನರ್ ನ 52ನೇ ಚಿತ್ರ

'ಚೌಕ' ಚಿತ್ರದ ಮೂಲಕ ಹಾಫ್ ಸೆಂಚುರಿ ಬಾರಿಸಿದ್ದ ದ್ವಾರಕೀಶ್ ಬ್ಯಾನರ್, 51 ಸಿನಿಮಾವಾಗಿ 'ಅಮ್ಮ ಐ ಲವ್ ಯೂ' ಸಿನಿಮಾವನ್ನು ನಿರ್ಮಾಣ ಮಾಡಿತು. ಅದರ ನಂತರ ಇತ್ತೀಚಿಗಷ್ಟೆ ಅವರ 52ನೇ ಚಿತ್ರ ಅನೌನ್ಸ್ ಆಗಿತ್ತು. ಈ ಸಿನಿಮಾದಲ್ಲಿ ಈಗ ಅನಂತ್ ನಾಗ್ ಕೂಡ ನಟಿಸುತ್ತಿದ್ದಾರೆ.

ಮತ್ತೆ ಶಿವಣ್ಣ - ಅನಂತ್ ನಾಗ್

ಮತ್ತೆ ಶಿವಣ್ಣ - ಅನಂತ್ ನಾಗ್

ವಿಶೇಷ ಅಂದರೆ, ಈ ಸಿನಿಮಾದಲ್ಲಿ ಅನಂತ್ ನಾಗ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಹಿಂದೆ 'ಚಿಗುರಿದ ಕನಸು', 'ಸಂತೆಯಲಿ ನಿಂತ ಕಬೀರ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದು, ಈಗ ಮತ್ತೆ ಒಂದೇ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ.

ಪಾತ್ರ ಏನು?

ಪಾತ್ರ ಏನು?

ಅನಂತ್ ನಾಗ್ ಈ ಸಿನಿಮಾದಲ್ಲಿ ತಾತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದರು ಅವರ ಅಜ್ಜನಾಗಿ ಅನಂತ್ ನಾಗ್ ನಟಿಲಿದ್ದಾರೆ. ಪಿ ವಾಸು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪಿ ವಾಸು ನಿರ್ದೇಶಕದಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ.

ಮತ್ತೆ ಹಳೆ ಜೋಡಿಗಳು

ಮತ್ತೆ ಹಳೆ ಜೋಡಿಗಳು

ಈ ಹಿಂದೆ ಪಿ.ವಾಸು ನಿರ್ದೇಶನ ಮಾಡಿದ್ದ 'ಆಪ್ತಮಿತ್ರ' ಸಿನಿಮಾವನ್ನು ದ್ವಾರಕೀಶ್ ಚಿತ್ರ ಸಂಸ್ಥೆ ನಿರ್ಮಾಣ ಮಾಡಿತ್ತು. ಈ ಚಿತ್ರದ ಬಳಿಕ ಈಗ ಮತ್ತೆ ದ್ವಾರಕೀಶ್ ಬ್ಯಾನರ್ ನಲ್ಲಿ ಪಿ.ವಾಸು ಸಿನಿಮಾ ಮಾಡುತ್ತಿದ್ದಾರೆ. ಇತ್ತ ಶಿವರಾಜ್ ಕುಮಾರ್ ಅವರಿಗೆ 'ಶಿವಲಿಂಗ' ಸಿನಿಮಾ ಮಾಡಿದ್ದ ಪಿ.ವಾಸು ಆ ಹಿಟ್ ಚಿತ್ರದ ನಂತರ ಮತ್ತೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Kannada actor Ananth Nag playing important role in Dwarakish banner 52nd movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X