ಡಬ್ಬಿಂಗ್ ಪರ ಧ್ವನಿಯೆತ್ತಿದ ಅನಂತ್ ನಾಗ್

ಇತ್ತೀಚಿಗೆ ಡಬ್ಬಿಂಗ್ ವಿರೋಧಿ ಹೇಳಿಕೆಯನ್ನು ವಿರೋಧಿಸುವವರು ತುಂಬಾ ಕಡಿಮೆಯಾಗಿದ್ದರು. ಅದಕ್ಕೆ ಕಾರಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಣ್ಣಾವ್ರ ಹುಟ್ಟುಹಬ್ಬದಂದು ಡಬ್ಬಿಂಗ್ ವಿರುದ್ಧ ಜೋರಾಗಿ 'ಆವಾಜ್' ಹಾಕಿರುವುದೋ ಏನೋ!

ಆದರೆ ಯಾರ ಹೇಳಿಕೆಗೂ ತಮ್ಮ ಅನಿಸಿಕೆಯನ್ನು ಮಾರಿಕೊಳ್ಳದ ಹಿರಿಯ ನಟ ಅನಂತ್ ನಾಗ್ ಮನಬಿಚ್ಚಿ ಮಾತನಾಡಿದ್ದಾರೆ. "ಡಬ್ಬಿಂಗ್ ಯಾಕೆ ಬೇಡ? ಬೇರೆ ಭಾಷೆಗಳಲ್ಲಿ ಅದು ಇರುವಾಗ ಕನ್ನಡಕ್ಕೆ ಯಾಕೆ ಬೇಡ?" ಎಂದವರು ಪ್ರಶ್ನಿಸಿದ್ದಾರೆ.

ಡಬ್ಬಿಂಗ್ ಎಲ್ಲೂ ಇಲ್ಲದಿದ್ದರೆ ಅದು ಬೇರೆ ವಿಷಯ. ಬೇರೆ ಬಹಳಷ್ಟು ಭಾಷೆಗಳ ಚಿತ್ರರಂಗದಲ್ಲಿ ಅದಕ್ಕೆ ಅವಕಾಶವಿರುವಾಗ ಕನ್ನಡಕ್ಕೂ ಉತ್ತಮ ಚಿತ್ರಗಳು ಬರಲಿ ಎನ್ನುತ್ತಾರೆ ಹಿರಿಯ ಕಲಾವಿದ ಅನಂತ್ ನಾಗ್.

ಅವರು ಡಬ್ಬಿಂಗ್ ವಿರೋಧಿಗಳ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೆ ಕನ್ನಡ ಚಿತ್ರರಂಗದ ಕೆಲವು ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ರಿಮೇಕ್ ಹಕ್ಕುಗಳಿಂದ ಹಿಡಿದು ಎಲ್ಲವನ್ನೂ ಪರಭಾಷಾ ನೆಲದಿಂದ ತರುತ್ತಿರುವ ನಮಗೆ ಡಬ್ಬಿಂಗ್ ಮಾತ್ರ ಯಾಕೆ ಬೇಡ?

ಡಬ್ಬಿಂಗ್ ವಿರೋಧ ಸರಿಯಲ್ಲ. ಇನ್ನಾದರೂ ಕನ್ನಡ ಚಿತ್ರರಂಗ ಎಚ್ಚೆತ್ತುಕೊಳ್ಳಬೇಕು. ನಾವೂ ಬದಲಾಗಬೇಕು. ಸ್ವಂತಿಕೆಯೇ ಇಲ್ಲದ ಕನ್ನಡ ಸಿನಿಮಾಗಳಿಂದಾಗಿ ಜನ ಕನ್ನಡಸಿನಿಮಾ ನೋಡಲು ಬರುತ್ತಿಲ್ಲ.

ಕನ್ನಡ ಚಿತ್ರರಂಗ ಮಾತ್ರ ಸಂಕಷ್ಟದಲ್ಲಿಲ್ಲ. ಹಲವು ಚಿತ್ರರಂಗಗಳು ಇದೇ ಹಾದಿಯಲ್ಲಿವೆ. ಹಾಗೆಂದು ಒಳ್ಳೆಯ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ನೋಡದಂತೆ ಮಾಡುವುದು ಸರಿಯಲ್ಲ. ಇದು ಪ್ರೇಕ್ಷಕರ ಹಕ್ಕು ಕಸಿದುಕೊಂಡಂತಾಗುತ್ತದೆ.

ಯಾವುದೋ ಪರಭಾಷೆ ಚಿತ್ರದ ಸಿಡಿ ತಂದು, ಇದರಲ್ಲಿರುವಂತೆ ನಟಿಸಿ ಎನ್ನುವ ನಿರ್ಮಾಪಕ-ನಿರ್ದೇಶಕರ ಮನಸ್ಥಿತಿ ಬದಲಾಗಬೇಕು. ಶೈಕ್ಷಣಿಕ, ಸಾಂಸ್ಕೃತಿಕ ಹೊಣೆಗಾರಿಕೆ ಎಲ್ಲರಲ್ಲೂ ಇರಬೇಕು" ಎಂದು ವಿಷಾದದಿಂದ ಹೇಳಿದ್ದಾರೆ.

ಅನಂತ್ ನಾಗ್ ಯಾವುದೇ ವಿವಾದವನ್ನು ಸೃಷ್ಟಿಸುವವರಲ್ಲ, ನುಸುಳುವವರೂ ಅಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದುಬಿಡುವವರು. ತಮ್ಮದೇ ಪಾತ್ರದ ಬಗ್ಗೆಯೂ ಅಷ್ಟೇ, ಅತಿಯಾದ ನಿರೀಕ್ಷೆಯಿಲ್ಲದ ನಿರ್ಲಿಪ್ತ ಭಾವ ಅವರದ್ದು. ಹೀಗಿದ್ದೂ ಡಬ್ಬಿಂಗ್ ಬಗ್ಗೆ ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Ananth Nag told that Dubbing is OK for Kannada Industry. For this Dubbing Issue, Ananth Nag asked that hence many other languages film industries accepted this, why Kannada industry is against for this? Ananth Nag Supports Dubbing for Kannada Film Industry. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X