ಮತ್ತೆ ಅನಂತ್ ನಾಗ್ - ರಿಷಭ್ ಶೆಟ್ಟಿ ಕಾಂಬಿನೇಷನ್ ಸಿನಿಮಾ

Recommended Video

ಮತ್ತೆ ಅನಂತ್ ನಾಗ್ - ರಿಷಭ್ ಶೆಟ್ಟಿ ಕಾಂಬಿನೇಷನ್ ಸಿನಿಮಾ | Rishab Shetty | Oneindia Kannada

ಕಳೆದ ನಟ ಅನಂತ್ ನಾಗ್ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು' ಚಿತ್ರದ ಅನಂತ ಪದ್ಮನಾಭ ಪಿ ಪಾತ್ರದಲ್ಲಿ ಕಾಣಿಸಿಕೊಂಡರು. ಈಗ ಮತ್ತೆ ಅದೇ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ರಿಷಭ್ ಶೆಟ್ಟಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಅನಂತ್ ನಾಗ್ ನಟಿಸುತ್ತಿದ್ದಾರೆ. ಅನಂತ್ ನಾಗ್ ಜೊತೆಗಿನ ಫೋಟೋ ಜೊತೆಗೆ ಚಿತ್ರದ ವಿಷಯವನ್ನು ರಿಷಭ್ ಶೆಟ್ಟಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

''ಈ ಮಹಾನಟನ ಬಗ್ಗೆ ಹೆಚ್ಚು ಹೇಳುವುದು ಬೇಕಿಲ್ಲ. ಇವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ನನಗೆ ಸ.ಹಿ.ಪ್ರಾ.ಶಾಲೆ ಕಾಸರಗೋಡಿನಲ್ಲಿ ಇವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅನಂತಪದ್ಮನಾಭ ಪಿ ಪಾತ್ರಕ್ಕೆ ಜೀವತುಂಬಿ ಮಕ್ಕಳೊಡನೆ ಮಕ್ಕಳಾಗಿ ಆ ಚಿತ್ರದ ನೆನಪುಗಳಿನ್ನು ಹಸಿರಾಗಿರುವಾಗಲೇ ನನ್ನ ಮುಂದಿನ ಸಿನಿಮಾ 'ರುದ್ರಪ್ರಯಾಗ'ದಲ್ಲೂ ಅನಂತ್ ಸರ್ ಗೆ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದೇನೆ.'' ಎಂದು ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Ananth Nag Will Be Playing Important Character In Rishab Shettys Rudraprayaag

ಈ ಸಿನಿಮಾದ ಸಿನಿಮಾದ ಕಥೆ ಮತ್ತು ನಿರ್ದೇಶನವನ್ನು ರಿಷಬ್ ಮಾಡುತ್ತಿದ್ದಾರೆ. ಇನ್ನು, ಜಯಣ್ಣ ಹಾಗೂ ಭೋಗೆಂದ್ರ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

Ananth Nag Will Be Playing Important Character In Rishab Shettys Rudraprayaag

'ರುದ್ರಪ್ರಯಾಗ' ಎಂಬ ಟೈಟಲ್ ಅನೇಕರಿಗೆ ವಿಶೇಷ ಅನಿಸುತ್ತದೆ. ಇದು ಭಾರತದ ಉತ್ತರಾಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಅಲಕನಂದಾ ಹಾಗೂ ಮಂದಾಕಿನಿ ನದಿಗಳ ಸಂಗಮಸ್ಥಾನ. ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ 5 ಸಂಗಮಕ್ಷೇತ್ರಗಳ ಪೈಕಿ ಒಂದು. ಈ ಹೆಸರನ್ನು ಸಿನಿಮಾ ಇಟ್ಟಿದ್ದು, ಕುತೂಹಲ ಉಂಟು ಮಾಡಿದ್ದಾರೆ.

More from Filmibeat

English summary
Kannada actor Ananth Nag will be playing important character in 'Rishab shetty's 'Rudraprayaag' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X