»   » ಈಗ ಅನಂತ್‌ ನಟಿಸುತ್ತಿರುವ ಚಿತ್ರಗಳ ಪಟ್ಟಿ ನೋಡೋಣ. ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರಲ್ಲಿ ಇವರು ಅತಿಥಿ ನಟ. ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿ , ಚಿತ್ರವೂ ಹೆಚ್ಚು ಕಡಿಮೆ ರೆಡಿಯಾಗಿದೆ. ಆಂಧ್ರ ಹೆಂಡ್ತಿ, ಚಿತ್ರದಲ್ಲಿ ಇವರು ಸಂಗೀತ ಮೇಷ್ಟ್ರು. ಜೊತೆಗೆ ಟೀವಿ ಸೀರಿಯಲ್‌ ಆದರೂ ಓಕೆ ಅನ್ನುವ ಸ್ಥಿತಿಗೆ ಅನಂತ್‌ ತಲುಪಿದ್ದಾರೆ. ಸುಪ್ರಭಾತ ಚಾನೆಲ್‌ಗಾಗಿ ಮನಸ್ಸು ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಕಾವೇರಿ ಚಾನೆಲ್‌ಗೆ ಅನಂತ ಚಿಂತನೆ ಎಂಬ ಟಾಕ್‌ ಶೋ ಕೊಡುವುದಕ್ಕೂ ಅನಂತ್‌ ಒಪ್ಪಿಕೊಂಡಿದ್ದಾರೆ. ಅಂಬರೀಷ್‌, ಶಶಿ ಕುಮಾರ್‌ ಮೊದಲಾದ ನಟರು ರಾಜಕೀಯ ಮತ್ತು ಸಿನಿಮಾಗಳೆರಡನ್ನೂ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಅನಂತ್‌ ರಾಜಕೀಯದ ಕರೆ ಬಂದಾಕ್ಷಣ ಸಿನಿಮಾ ನಂಟು ಕಡಿದುಕೊಂಡರು, ರಾಜಕೀಯ ಕೈ ಕ-ಚ್ಚಿ-ದ ಕ್ಷಣ ಸಿನಿಮಾದೆಡೆಗೆ ಕೈ ಚಾಚಿದ್ದಾರೆ. ಇದರ ಪರಿಣಾಮವಾಗಿ ಅವರೀಗ ಎರಡೂ ಕಡೆ ಸಲ್ಲದಂತಾಗಿದ್ದಾರೆ. ಮೊನ್ನೆ ರಾಜ್‌ ಕುಮಾರ್‌ ಅಪಹರಣವಾದಾಗ ಅನಂತ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಯಾವುದೇ ಪ್ರತಿಭಟನಾ ಸಭೆಗಳಿಗೂ ಹಾಜರಾಗಲಿಲ್ಲ. ಸ್ಟಾರ್‌ ಟೀವಿಯೇ ಈ ಬಗ್ಗೆ ಅವರನ್ನು ಸಂದರ್ಶಿಸುವ ಉತ್ಸಾಹ ತೋರಿತ್ತು. ಅಲ್ಲೂ ಅನಂತ್‌ ಪ್ರಶ್ನೆಗೆ ತಕ್ಕ ಉತ್ತರ ನೀಡಲಿಲ್ಲ. ಉದಾಹರಣೆಗೆ ಈ ಪ್ರಶ್ನೆಯನ್ನೇ ನೋಡಿ. ದಕ್ಷಿಣ ಭಾರತದಲ್ಲಷ್ಟೇ ನಾಯಕ ನಟರನ್ನು ದೇವರಂತೆ ಆರಾಧಿಸುವ ಪ್ರವೃತ್ತಿ ಯಾಕೆ ಕಾಣಿಸುತ್ತದೆ ?ರಾಜ್‌ಕುಮಾರ್‌ ಕೇವಲ ನಟರಷ್ಟೇ ಅಲ್ಲ, ಅವರು ಈ ನಾಡು , ನುಡಿ, ಸಂಸ್ಕೃತಿಯ ವಕ್ತಾರರಂತೆ ಜನರಿಗೆ ಕಾಣಿಸುತ್ತಾರೆ. ಹಾಗಾಗಿ ಈ ಆರಾಧನೆ. ಅಂದರು ಅನಂತ್‌.ಥಿಯೇಟರ್‌ ಮಂದಿಯನ್ನು ಯಾಕೆ ಯಾರೂ ಅಪಹರಿಸುವುದಿಲ್ಲ ಎಂನ್ನುವ ತಮಾಷೆಯ ಪ್ರಶ್ನೆಗೆ ಅನಂತ್‌ ತುಂಬಾ ಸೀರಿಯಸ್ಸಾಗಿ ಈಗ ಯಾರೂ ನಾಟಕಗಳನ್ನು ನೋಡೋದಿಲ್ಲ. ಕಲಾಕ್ಷೇತ್ರಕ್ಕೆ ಹೋಗಬೇಕಾದರೆ ಬಸ್‌ ವ್ಯವಸ್ಥೆ ಸರಿಯಿರುವುದಿಲ್ಲ ಎಂದೆಲ್ಲಾ ಮಾತನಾಡತೊಡಗಿದರು. ಕೊನೆಯ ಪ್ರಶ್ನೆ ನೀವು ಕಾಡಿನ ಪಕ್ಕದಲ್ಲೇನಾದರೂ ಫಾರ್ಮ್‌ ಹೌಸ್‌ ಖರೀದಿಸಿದ್ದೀರಾ ? ಈ ಪ್ರಶ್ನೆಗೆ ವಿನಾ ಕಾರಣ ಗೊಂದಲಕ್ಕೀಡಾದ ಅನಂತ್‌, ಇಂಥಾ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಎಂದರು. ವಾಸ್ತವದಲ್ಲಿ ಅನಂತ್‌ ಈಗ ಯಾವ ಪ್ರಶ್ನೆಗೂ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಕಳೆದ ಒಂದು ವರ್ಷದಲ್ಲಿ ಅವರು ಉತ್ತರಿಸಿದ್ದು ಒಂದೇ ಬಾರಿ. ಅದು ಸಂಕೇತ್‌ ಸ್ಟುಡಿಯೋ ಮಾರಾಟವಾದ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸಿದಾಗ. ಸಂಕೇತನ್ನು ಅನಂತ್‌ ನಾಲ್ಕಾಣೆಗೆ ಮಾರಿದರು ಎಂದು ಅವರ ಹಳೇ ಸ್ನೇಹಿತರೇ ದಾಖಲೆ ಸಹಿತ ಆರೋಪಿಸಿದಾಗ ಅನಂತ್‌ ಅವರೆಲ್ಲರನ್ನೂ ಒಂದೇ ಮಾತಲ್ಲಿ ಡಿಸ್‌ಮಿಸ್‌ ಮಾಡಿದರು. ಸಂಕೇತ್‌ ಬಗ್ಗೆ ತನ್ನ ಹೊರತಾಗಿ ಯಾರಿಗೂ ಮಾತಾಡೋದಿಕ್ಕೆ ಅಧಿಕಾರವಿಲ್ಲ ಅನ್ನೋದು ಅವರ ವಾದವಾಗಿತ್ತು. ಕೊನೆಗೆ ಅನಂತ್‌ ಮಾರಿದ್ದ ಸಂಕೇತ್‌ ಉಪಕರಣಗಳನ್ನು ಅವರ ಹಳೇ ‘ನೌಕರ ’ ಜಗದೀಶ್‌ ಮಲ್ನಾಡ್‌ ಖರೀದಿಸಿದರು.ಸಂಕೇತ್‌ ಇಲ್ಲ. ರಾಜಕೀಯ ಇಲ್ಲ. ಸಿನಿಮಾ ಇದ್ದೂ ಇಲ್ಲ. ಅನಂತ್‌ ಏನು ಮಾಡುತ್ತಿದ್ದಾರೆ ? ಮುಂಜಾನೆ ಎದ್ದು ಪೇಪರ್‌ ಓದುತ್ತಾರೆ, ಫೋನ್‌ ಮಾಡುತ್ತಾರೆ, ರಾತ್ರಿ ತಮ್ಮಷ್ಟಕ್ಕೆ ತಾವೇ ಮಾತಾಡಬಹುದು. ಯಾಕೆಂದರೆ ಅವರೀಗ ಒಂಟಿ. ಜನರಿಂದ ನಾನು ಮೇಲೆ ಬಂದೆ ಅಂತ ರಾಜ್‌ ಹಾಡಿದರೆ , ಅನಂತ್‌ ಹಾಡು ಹೀಗಿರಬಹುದು. ಜನರಿಂದ ನಾನು ದೂರವಾದೆ.  1     2  

ಈಗ ಅನಂತ್‌ ನಟಿಸುತ್ತಿರುವ ಚಿತ್ರಗಳ ಪಟ್ಟಿ ನೋಡೋಣ. ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರಲ್ಲಿ ಇವರು ಅತಿಥಿ ನಟ. ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿ , ಚಿತ್ರವೂ ಹೆಚ್ಚು ಕಡಿಮೆ ರೆಡಿಯಾಗಿದೆ. ಆಂಧ್ರ ಹೆಂಡ್ತಿ, ಚಿತ್ರದಲ್ಲಿ ಇವರು ಸಂಗೀತ ಮೇಷ್ಟ್ರು. ಜೊತೆಗೆ ಟೀವಿ ಸೀರಿಯಲ್‌ ಆದರೂ ಓಕೆ ಅನ್ನುವ ಸ್ಥಿತಿಗೆ ಅನಂತ್‌ ತಲುಪಿದ್ದಾರೆ. ಸುಪ್ರಭಾತ ಚಾನೆಲ್‌ಗಾಗಿ ಮನಸ್ಸು ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಕಾವೇರಿ ಚಾನೆಲ್‌ಗೆ ಅನಂತ ಚಿಂತನೆ ಎಂಬ ಟಾಕ್‌ ಶೋ ಕೊಡುವುದಕ್ಕೂ ಅನಂತ್‌ ಒಪ್ಪಿಕೊಂಡಿದ್ದಾರೆ. ಅಂಬರೀಷ್‌, ಶಶಿ ಕುಮಾರ್‌ ಮೊದಲಾದ ನಟರು ರಾಜಕೀಯ ಮತ್ತು ಸಿನಿಮಾಗಳೆರಡನ್ನೂ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಅನಂತ್‌ ರಾಜಕೀಯದ ಕರೆ ಬಂದಾಕ್ಷಣ ಸಿನಿಮಾ ನಂಟು ಕಡಿದುಕೊಂಡರು, ರಾಜಕೀಯ ಕೈ ಕ-ಚ್ಚಿ-ದ ಕ್ಷಣ ಸಿನಿಮಾದೆಡೆಗೆ ಕೈ ಚಾಚಿದ್ದಾರೆ. ಇದರ ಪರಿಣಾಮವಾಗಿ ಅವರೀಗ ಎರಡೂ ಕಡೆ ಸಲ್ಲದಂತಾಗಿದ್ದಾರೆ. ಮೊನ್ನೆ ರಾಜ್‌ ಕುಮಾರ್‌ ಅಪಹರಣವಾದಾಗ ಅನಂತ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಯಾವುದೇ ಪ್ರತಿಭಟನಾ ಸಭೆಗಳಿಗೂ ಹಾಜರಾಗಲಿಲ್ಲ. ಸ್ಟಾರ್‌ ಟೀವಿಯೇ ಈ ಬಗ್ಗೆ ಅವರನ್ನು ಸಂದರ್ಶಿಸುವ ಉತ್ಸಾಹ ತೋರಿತ್ತು. ಅಲ್ಲೂ ಅನಂತ್‌ ಪ್ರಶ್ನೆಗೆ ತಕ್ಕ ಉತ್ತರ ನೀಡಲಿಲ್ಲ. ಉದಾಹರಣೆಗೆ ಈ ಪ್ರಶ್ನೆಯನ್ನೇ ನೋಡಿ. ದಕ್ಷಿಣ ಭಾರತದಲ್ಲಷ್ಟೇ ನಾಯಕ ನಟರನ್ನು ದೇವರಂತೆ ಆರಾಧಿಸುವ ಪ್ರವೃತ್ತಿ ಯಾಕೆ ಕಾಣಿಸುತ್ತದೆ ?ರಾಜ್‌ಕುಮಾರ್‌ ಕೇವಲ ನಟರಷ್ಟೇ ಅಲ್ಲ, ಅವರು ಈ ನಾಡು , ನುಡಿ, ಸಂಸ್ಕೃತಿಯ ವಕ್ತಾರರಂತೆ ಜನರಿಗೆ ಕಾಣಿಸುತ್ತಾರೆ. ಹಾಗಾಗಿ ಈ ಆರಾಧನೆ. ಅಂದರು ಅನಂತ್‌.ಥಿಯೇಟರ್‌ ಮಂದಿಯನ್ನು ಯಾಕೆ ಯಾರೂ ಅಪಹರಿಸುವುದಿಲ್ಲ ಎಂನ್ನುವ ತಮಾಷೆಯ ಪ್ರಶ್ನೆಗೆ ಅನಂತ್‌ ತುಂಬಾ ಸೀರಿಯಸ್ಸಾಗಿ ಈಗ ಯಾರೂ ನಾಟಕಗಳನ್ನು ನೋಡೋದಿಲ್ಲ. ಕಲಾಕ್ಷೇತ್ರಕ್ಕೆ ಹೋಗಬೇಕಾದರೆ ಬಸ್‌ ವ್ಯವಸ್ಥೆ ಸರಿಯಿರುವುದಿಲ್ಲ ಎಂದೆಲ್ಲಾ ಮಾತನಾಡತೊಡಗಿದರು. ಕೊನೆಯ ಪ್ರಶ್ನೆ ನೀವು ಕಾಡಿನ ಪಕ್ಕದಲ್ಲೇನಾದರೂ ಫಾರ್ಮ್‌ ಹೌಸ್‌ ಖರೀದಿಸಿದ್ದೀರಾ ? ಈ ಪ್ರಶ್ನೆಗೆ ವಿನಾ ಕಾರಣ ಗೊಂದಲಕ್ಕೀಡಾದ ಅನಂತ್‌, ಇಂಥಾ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಎಂದರು. ವಾಸ್ತವದಲ್ಲಿ ಅನಂತ್‌ ಈಗ ಯಾವ ಪ್ರಶ್ನೆಗೂ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಕಳೆದ ಒಂದು ವರ್ಷದಲ್ಲಿ ಅವರು ಉತ್ತರಿಸಿದ್ದು ಒಂದೇ ಬಾರಿ. ಅದು ಸಂಕೇತ್‌ ಸ್ಟುಡಿಯೋ ಮಾರಾಟವಾದ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸಿದಾಗ. ಸಂಕೇತನ್ನು ಅನಂತ್‌ ನಾಲ್ಕಾಣೆಗೆ ಮಾರಿದರು ಎಂದು ಅವರ ಹಳೇ ಸ್ನೇಹಿತರೇ ದಾಖಲೆ ಸಹಿತ ಆರೋಪಿಸಿದಾಗ ಅನಂತ್‌ ಅವರೆಲ್ಲರನ್ನೂ ಒಂದೇ ಮಾತಲ್ಲಿ ಡಿಸ್‌ಮಿಸ್‌ ಮಾಡಿದರು. ಸಂಕೇತ್‌ ಬಗ್ಗೆ ತನ್ನ ಹೊರತಾಗಿ ಯಾರಿಗೂ ಮಾತಾಡೋದಿಕ್ಕೆ ಅಧಿಕಾರವಿಲ್ಲ ಅನ್ನೋದು ಅವರ ವಾದವಾಗಿತ್ತು. ಕೊನೆಗೆ ಅನಂತ್‌ ಮಾರಿದ್ದ ಸಂಕೇತ್‌ ಉಪಕರಣಗಳನ್ನು ಅವರ ಹಳೇ ‘ನೌಕರ ’ ಜಗದೀಶ್‌ ಮಲ್ನಾಡ್‌ ಖರೀದಿಸಿದರು.ಸಂಕೇತ್‌ ಇಲ್ಲ. ರಾಜಕೀಯ ಇಲ್ಲ. ಸಿನಿಮಾ ಇದ್ದೂ ಇಲ್ಲ. ಅನಂತ್‌ ಏನು ಮಾಡುತ್ತಿದ್ದಾರೆ ? ಮುಂಜಾನೆ ಎದ್ದು ಪೇಪರ್‌ ಓದುತ್ತಾರೆ, ಫೋನ್‌ ಮಾಡುತ್ತಾರೆ, ರಾತ್ರಿ ತಮ್ಮಷ್ಟಕ್ಕೆ ತಾವೇ ಮಾತಾಡಬಹುದು. ಯಾಕೆಂದರೆ ಅವರೀಗ ಒಂಟಿ. ಜನರಿಂದ ನಾನು ಮೇಲೆ ಬಂದೆ ಅಂತ ರಾಜ್‌ ಹಾಡಿದರೆ , ಅನಂತ್‌ ಹಾಡು ಹೀಗಿರಬಹುದು. ಜನರಿಂದ ನಾನು ದೂರವಾದೆ.  1     2  

Subscribe to Filmibeat Kannada

ಈಗ ಅನಂತ್‌ ನಟಿಸುತ್ತಿರುವ ಚಿತ್ರಗಳ ಪಟ್ಟಿ ನೋಡೋಣ. ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರಲ್ಲಿ ಇವರು ಅತಿಥಿ ನಟ. ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿ , ಚಿತ್ರವೂ ಹೆಚ್ಚು ಕಡಿಮೆ ರೆಡಿಯಾಗಿದೆ. ಆಂಧ್ರ ಹೆಂಡ್ತಿ, ಚಿತ್ರದಲ್ಲಿ ಇವರು ಸಂಗೀತ ಮೇಷ್ಟ್ರು. ಜೊತೆಗೆ ಟೀವಿ ಸೀರಿಯಲ್‌ ಆದರೂ ಓಕೆ ಅನ್ನುವ ಸ್ಥಿತಿಗೆ ಅನಂತ್‌ ತಲುಪಿದ್ದಾರೆ. ಸುಪ್ರಭಾತ ಚಾನೆಲ್‌ಗಾಗಿ ಮನಸ್ಸು ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಕಾವೇರಿ ಚಾನೆಲ್‌ಗೆ ಅನಂತ ಚಿಂತನೆ ಎಂಬ ಟಾಕ್‌ ಶೋ ಕೊಡುವುದಕ್ಕೂ ಅನಂತ್‌ ಒಪ್ಪಿಕೊಂಡಿದ್ದಾರೆ.

ಅಂಬರೀಷ್‌, ಶಶಿ ಕುಮಾರ್‌ ಮೊದಲಾದ ನಟರು ರಾಜಕೀಯ ಮತ್ತು ಸಿನಿಮಾಗಳೆರಡನ್ನೂ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಅನಂತ್‌ ರಾಜಕೀಯದ ಕರೆ ಬಂದಾಕ್ಷಣ ಸಿನಿಮಾ ನಂಟು ಕಡಿದುಕೊಂಡರು, ರಾಜಕೀಯ ಕೈ ಕ-ಚ್ಚಿ-ದ ಕ್ಷಣ ಸಿನಿಮಾದೆಡೆಗೆ ಕೈ ಚಾಚಿದ್ದಾರೆ. ಇದರ ಪರಿಣಾಮವಾಗಿ ಅವರೀಗ ಎರಡೂ ಕಡೆ ಸಲ್ಲದಂತಾಗಿದ್ದಾರೆ. ಮೊನ್ನೆ ರಾಜ್‌ ಕುಮಾರ್‌ ಅಪಹರಣವಾದಾಗ ಅನಂತ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಯಾವುದೇ ಪ್ರತಿಭಟನಾ ಸಭೆಗಳಿಗೂ ಹಾಜರಾಗಲಿಲ್ಲ. ಸ್ಟಾರ್‌ ಟೀವಿಯೇ ಈ ಬಗ್ಗೆ ಅವರನ್ನು ಸಂದರ್ಶಿಸುವ ಉತ್ಸಾಹ ತೋರಿತ್ತು. ಅಲ್ಲೂ ಅನಂತ್‌ ಪ್ರಶ್ನೆಗೆ ತಕ್ಕ ಉತ್ತರ ನೀಡಲಿಲ್ಲ. ಉದಾಹರಣೆಗೆ ಈ ಪ್ರಶ್ನೆಯನ್ನೇ ನೋಡಿ.

ದಕ್ಷಿಣ ಭಾರತದಲ್ಲಷ್ಟೇ ನಾಯಕ ನಟರನ್ನು ದೇವರಂತೆ ಆರಾಧಿಸುವ ಪ್ರವೃತ್ತಿ ಯಾಕೆ ಕಾಣಿಸುತ್ತದೆ ?

ರಾಜ್‌ಕುಮಾರ್‌ ಕೇವಲ ನಟರಷ್ಟೇ ಅಲ್ಲ, ಅವರು ಈ ನಾಡು , ನುಡಿ, ಸಂಸ್ಕೃತಿಯ ವಕ್ತಾರರಂತೆ ಜನರಿಗೆ ಕಾಣಿಸುತ್ತಾರೆ. ಹಾಗಾಗಿ ಈ ಆರಾಧನೆ. ಅಂದರು ಅನಂತ್‌.

ಥಿಯೇಟರ್‌ ಮಂದಿಯನ್ನು ಯಾಕೆ ಯಾರೂ ಅಪಹರಿಸುವುದಿಲ್ಲ ಎಂನ್ನುವ ತಮಾಷೆಯ ಪ್ರಶ್ನೆಗೆ ಅನಂತ್‌ ತುಂಬಾ ಸೀರಿಯಸ್ಸಾಗಿ ಈಗ ಯಾರೂ ನಾಟಕಗಳನ್ನು ನೋಡೋದಿಲ್ಲ. ಕಲಾಕ್ಷೇತ್ರಕ್ಕೆ ಹೋಗಬೇಕಾದರೆ ಬಸ್‌ ವ್ಯವಸ್ಥೆ ಸರಿಯಿರುವುದಿಲ್ಲ ಎಂದೆಲ್ಲಾ ಮಾತನಾಡತೊಡಗಿದರು. ಕೊನೆಯ ಪ್ರಶ್ನೆ ನೀವು ಕಾಡಿನ ಪಕ್ಕದಲ್ಲೇನಾದರೂ ಫಾರ್ಮ್‌ ಹೌಸ್‌ ಖರೀದಿಸಿದ್ದೀರಾ ? ಈ ಪ್ರಶ್ನೆಗೆ ವಿನಾ ಕಾರಣ ಗೊಂದಲಕ್ಕೀಡಾದ ಅನಂತ್‌, ಇಂಥಾ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಎಂದರು. ವಾಸ್ತವದಲ್ಲಿ ಅನಂತ್‌ ಈಗ ಯಾವ ಪ್ರಶ್ನೆಗೂ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಕಳೆದ ಒಂದು ವರ್ಷದಲ್ಲಿ ಅವರು ಉತ್ತರಿಸಿದ್ದು ಒಂದೇ ಬಾರಿ. ಅದು ಸಂಕೇತ್‌ ಸ್ಟುಡಿಯೋ ಮಾರಾಟವಾದ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸಿದಾಗ. ಸಂಕೇತನ್ನು ಅನಂತ್‌ ನಾಲ್ಕಾಣೆಗೆ ಮಾರಿದರು ಎಂದು ಅವರ ಹಳೇ ಸ್ನೇಹಿತರೇ ದಾಖಲೆ ಸಹಿತ ಆರೋಪಿಸಿದಾಗ ಅನಂತ್‌ ಅವರೆಲ್ಲರನ್ನೂ ಒಂದೇ ಮಾತಲ್ಲಿ ಡಿಸ್‌ಮಿಸ್‌ ಮಾಡಿದರು. ಸಂಕೇತ್‌ ಬಗ್ಗೆ ತನ್ನ ಹೊರತಾಗಿ ಯಾರಿಗೂ ಮಾತಾಡೋದಿಕ್ಕೆ ಅಧಿಕಾರವಿಲ್ಲ ಅನ್ನೋದು ಅವರ ವಾದವಾಗಿತ್ತು. ಕೊನೆಗೆ ಅನಂತ್‌ ಮಾರಿದ್ದ ಸಂಕೇತ್‌ ಉಪಕರಣಗಳನ್ನು ಅವರ ಹಳೇ ‘ನೌಕರ ’ ಜಗದೀಶ್‌ ಮಲ್ನಾಡ್‌ ಖರೀದಿಸಿದರು.

ಸಂಕೇತ್‌ ಇಲ್ಲ. ರಾಜಕೀಯ ಇಲ್ಲ. ಸಿನಿಮಾ ಇದ್ದೂ ಇಲ್ಲ. ಅನಂತ್‌ ಏನು ಮಾಡುತ್ತಿದ್ದಾರೆ ? ಮುಂಜಾನೆ ಎದ್ದು ಪೇಪರ್‌ ಓದುತ್ತಾರೆ, ಫೋನ್‌ ಮಾಡುತ್ತಾರೆ, ರಾತ್ರಿ ತಮ್ಮಷ್ಟಕ್ಕೆ ತಾವೇ ಮಾತಾಡಬಹುದು. ಯಾಕೆಂದರೆ ಅವರೀಗ ಒಂಟಿ.

ಜನರಿಂದ ನಾನು ಮೇಲೆ ಬಂದೆ ಅಂತ ರಾಜ್‌ ಹಾಡಿದರೆ , ಅನಂತ್‌ ಹಾಡು ಹೀಗಿರಬಹುದು. ಜನರಿಂದ ನಾನು ದೂರವಾದೆ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada