'ಕೆ ಜಿ ಎಫ್'ಗೆ ಚಾಲೆಂಜ್ ಹಾಕಲು ಬಂದ ವಿನಯ್ ರಾಜ್ ಕುಮಾರ್

Recommended Video

KGF Kannada Movie : ಯಶ್ ಕೆಜಿಎಫ್ ಗೆ ಚಾಲೆಂಜ್ ಮಾಡಲು ಬರ್ತಿದ್ದಾರೆ ವಿನಯ್ ರಾಜ್ ಕುಮಾರ್ | FILMIBEAT KANNADA

ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಕೆ ಜಿ ಎಫ್' ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. 'ಕೆಜಿಎಫ್' ಸಿನಿಮಾ ಬಾಲಿವುಡ್ ನ 'ಜೀರೋ' ಸಿನಿಮಾಗೆ ಪೈಪೋಟಿ ನೀಡಲು ಅದೇ ದಿನ ರಿಲೀಸ್ ಆಗುತ್ತಿದೆ. ಎರಡು ಚಿತ್ರದ ನಡುವೆ ಸ್ಪರ್ಧೆ ಜೋರಾಗಿದೆ.

ಇತ್ತ ಕನ್ನಡದಲ್ಲಿ 'ಕೆಜಿಎಫ್'ಗೆ ಚಾಲೆಂಜ್ ಮಾಡಲು ಕೆಲವು ಸಿನಿಮಾಗಳು ಬಿಡುಗಡೆಯಾಗಡೆ ಆಗುತ್ತಿವೆ. ಪೈಪೋಟಿ ಅಲ್ಲದ್ದಿರೂ ಅದೇ ತಿಂಗಳು ಕೆಲವು ಸಿನಿಮಾಗಳು ರಿಲೀಸ್ ಆಗಲು ಸಿದ್ಧವಾಗಿದೆ. ಈಗಾಗಲೇ ಕೆಲವು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಈಗ ಮತ್ತೊಂದು ಸಿನಿಮಾ ಆ ಪಟ್ಟಿಗೆ ಸೇರಿದೆ.

ಅಂದಹಾಗೆ, ಈಗ ನಟ ವಿನಯ್ ರಾಜ್ ಕುಮಾರ್ ಈಗ 'ಕೆಜಿಎಫ್' ಚಿತ್ರಕ್ಕೆ ಚಾಲೆಂಜ್ ಹಾಕಲು ವರ್ಷಾಂತ್ಯಕ್ಕೆ ಬರುತ್ತಿದ್ದಾರೆ. ಮುಂದೆ ಓದಿ...

'ಅನಂತು v/s ನುಸ್ರತ್' ರಿಲೀಸ್

'ಅನಂತು v/s ನುಸ್ರತ್' ರಿಲೀಸ್

ವಿನಯ್ ರಾಜ್ ಕುಮಾರ್ ಅಭಿನಯದ 'ಅನಂತು v/s ನುಸ್ರತ್' ಸಿನಿಮಾದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಡಿಸೆಂಬರ್ 28ಕ್ಕೆ ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. 'ಕೆ ಜಿ ಎಫ್' ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದ್ದು, ಒಂದು ವಾರದ ಬಳಿಕ ಈ ಚಿತ್ರದ ಆಗಮನ ಆಗಲಿದೆ.

ವಿನಯ್, ಲತಾ ಜೋಡಿ

ವಿನಯ್, ಲತಾ ಜೋಡಿ

ವಿನಯ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಲಯರ್ ಪಾತ್ರ ಮಾಡುತ್ತಿದ್ದಾರೆ. ಲತಾ ಹೆಗ್ಡೆ ವಿನಯ್ ಗೆ ಜೋಡಿಯಾಗಿದ್ದಾರೆ. ಸುಧೀರ್ ಶಾನುಭೋಗ್ ನಿರ್ದೇಶನ ಮಾಡಿದ್ದು, ಮಾಣಿಕ್ಯ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಹಾಡುಗಳು ಗಮನ ಸೆಳೆದಿದ್ದು, ಸಿನಿಮಾದ ಮೇಲೆ ಸಹ ನಿರೀಕ್ಷೆ ಇದೆ.

ಡಿಸೆಂಬರ್ ಗೆ ಬರುವ ಸಿನಿಮಾಗಳು

ಡಿಸೆಂಬರ್ ಗೆ ಬರುವ ಸಿನಿಮಾಗಳು

ನಟ ಧನಂಜಯ್ ನಟನೆಯ 'ಭೈರವಗೀತ' ಹಾಗೂ ಗಣೇಶ್ ಅವರ 'ಆರೆಂಜ್' ಡಿಸೆಂಬರ್ 7 ರಂದು ರಿಲೀಸ್ ಅಗುತ್ತಿದೆ. 'ಕೆಜಿಎಫ್' ಬರುವ ಮುನ್ನವೇ ಈ ಚಿತ್ರಗಳು ತೆರೆಗೆ ಮೇಲೆ ಮೂಡಲಿವೆ. 'ಭೈರವಗೀತ' ನಾಲ್ಕು ಭಾಷೆಗಳಲ್ಲಿ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಲು ಬರುತ್ತಿದೆ. ನವೆಂಬರ್ ಗೆ ಬರಬೇಕಿದ್ದ ಈ ಚಿತ್ರ ಮುಂದಕ್ಕೆ ಹೋಗಿದೆ.

ಮುಂದಕ್ಕೆ ಹೋದ 'ಕವಚ'

ಮುಂದಕ್ಕೆ ಹೋದ 'ಕವಚ'

ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾ ಡಿಸೆಂಬರ್ 7ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಈ ಸಿನಿಮಾದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಸದ್ಯಕ್ಕೆ 'ಕವಚ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಅಲ್ಲದೆ ಈ ವರ್ಷ ಸಿನಿಮಾ ಬರುವುದು ಅನುಮಾನ ಎನ್ನಲಾಗುತ್ತಿದೆ.

19 ದಿನ ಬಾಕಿ ಇದೆ

19 ದಿನ ಬಾಕಿ ಇದೆ

ಅಂತೂ ರಾಕಿಂಗ್ ಸ್ಟಾರ್ ಸಿನಿಮಾ ನೋಡುವ ಭಾಗ್ಯ ಇನ್ನ 19 ದಿನಗಳಲ್ಲಿ ಸಿಗಲಿದೆ. ಪ್ರಶಾಂತ್ ನೀಲ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಿದೆ. ಶ್ರೀನಿಧಿ ಶೆಟ್ಟಿ ಸಿನಿಮಾದ ನಾಯಕಿ ಆಗಿದ್ದಾರೆ. ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

More from Filmibeat

English summary
Kannada Actor Vinay Rajkumar and Actress Latha Hegde's 'Ananthu vs Nusruth' will be releasing on December 28th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X