ಇದು ಬಯಸದೆ ಬಂದ ಭಾಗ್ಯ: ಶೀತಲ್ ಸಂದರ್ಶನ

By ರಾಜೇಂದ್ರ ಚಿಂತಾಮಣಿ
<ul id="pagination-digg"><li class="next"><a href="/news/anchoring-is-quite-easy-to-do-sheethal-interview-078743.html">Next »</a></li></ul>

ಟಿವಿನೇ ನನ್ನ ಪಾಲಿನ ದೇವರು, ಟಿವಿ9 ವಾಹಿನಿಯೇ ನನ್ನ ಪಾಲಿಗೆ ದೇವಸ್ಥಾನ ಎಂದುಕೊಂಡಿರುವ ಜನಪ್ರಿಯ ನಿರೂಪಕಿ ಶೀತಲ್ ಶೆಟ್ಟಿ ಈಗ ಬಣ್ಣದ ಪ್ರಪಂಚಕ್ಕೆ ಅಡಿಯಿಟ್ಟಿದ್ದಾರೆ. ಈ ಬದಲಾವಣೆಯನ್ನು ಸ್ವತಃ ಶೀತಲ್ ಬಯಸಿದ್ದರೇ? ಅವರ ಮುಂದಿನ ಹೆಜ್ಜೆ ಎತ್ತ? ಮತ್ತೆ ನಿರೂಪಣೆಗೆ ಬರುತ್ತಾರಾ? ಮುಂದೇನು ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಅವರನ್ನು ಮಾತಿಗೆ ಎಳೆದಾಗ, ನಗುನಗುತ್ತಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು.

ಇಲ್ಲಿ ಅವರ ಎಂದಿನ ನಿರೂಪಕಿಯ ಗತ್ತು, ಗಮ್ಮತ್ತಾದ ಮಾತುಗಾರಿಕೆಯಾಗಲಿ ಕಾಣಬರಲಿಲ್ಲ. ಎಲ್ಲವೂ ಸರಳ, ಸ್ಪಷ್ಟ, ನೇರಾನೇರ. ಸೌಜನ್ಯಯುತವಾದ ಅವರ ಮಾತುಗಳಲ್ಲಿ ಸಂಯಮ, ಜಾಣ್ಮೆ ಎದ್ದುಕಾಣುತ್ತಿತ್ತು. 'ಉಳಿದವರು ಕಂಡಂತೆ' ಚಿತ್ರದಲ್ಲಿ ಶೀತಲ್ ಅವರದು ಗಮನಾರ್ಹ ಪಾತ್ರ. ಈ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದರು. ಅವರ ಮನದಾಳದ ಮಾತುಗಳಿಗೆ ಅಕ್ಷರ ರೂಪ ಇಲ್ಲಿದೆ.

[ಉಳಿದವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವವರು ನಟ ರಕ್ಷಿತ್ ಶೆಟ್ಟಿ. ಕರಮ್ ಚಾವ್ಲಾ ಛಾಯಾಗ್ರಹಣ, ಅಜಿನೀಷ್ ಸಂಗೀತ, ಸಚಿನ್ ಸಂಕಲನ ಈ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ ಅಚ್ಯುತ್ ಕುಮಾರ್, ತಾರಾ, ಚಿತ್ರಾ, ರಿಷಬ್ ಶೆಟ್ಟಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿ ಇದ್ದಾರೆ.]

Anchor actress Sheethal Shetty interview
1. ಬಣ್ಣದ ಜಗತ್ತಿಗೆ ಬರ್ತೀನಿ, ನಟಿಯಾಗುತ್ತೇನೆ ಎಂದು ಕನಸು ಕಂಡಿದ್ರಾ? ಇದೆಲ್ಲಾ ಹೇಗಾಯ್ತು?
ಆ ರೀತಿಯ ಯಾವುದೇ ಕನಸು ಕಂಡಿರಲಿಲ್ಲ. ಇದು ಬಯಸದೆ ಬಂದಂತಹ ಭಾಗ್ಯ. ಇದೆಲ್ಲಾ ಆಕಸ್ಮಿಕ, ಅನಿರೀಕ್ಷಿತ ಎಂದು ಹೇಳಬಹುದು.

2. ಹೇಗಿದೆ ಬಣ್ಣದ ಜಗತ್ತಿನ ಚೊಚ್ಚಲ ಅನುಭವ?
ಇದು ತುಂಬಾ ಡೆಡಿಕೇಟೆಡ್ ಹಾಗೂ ಹಾರ್ಡ್ ವರ್ಕಿಂಗ್ ಟೀಂ. ಇಂತಹವರ ಜೊತೆ ಕೆಲಸ ಮಾಡುತ್ತಿರುವುದು ನಿಜಕ್ಕೂ ಖುಷಿ ಕೊಡುತ್ತಿದೆ. ಚಿತ್ರವನ್ನು ತುಂಬಾ ನೀಟಾಗಿ ತೆರೆಗೆ ತರುತ್ತಿದ್ದಾರೆ. ಇಂಥಹ ತಂಡದ ಜೊತೆಗೆ ಕೆಲಸ ಮಾಡುತ್ತಿರುವುದು ನಿಜಕ್ಕೂ ಒಂಥರಾ ಒಳ್ಳೆಯ ಅನುಭವವನ್ನೇ ಕೊಟ್ಟಿದೆ. ನನಗೆ ಇದು ಚೊಚ್ಚಲ ಚಿತ್ರವಾದ ಕಾರಣ ಎಲ್ಲವೂ ಹೊಸದಾಗಿದೆ.

<ul id="pagination-digg"><li class="next"><a href="/news/anchoring-is-quite-easy-to-do-sheethal-interview-078743.html">Next »</a></li></ul>

More from Filmibeat

English summary
Tv9 Kannada popular anchor Sheethal Shetty now debuts as actress in the Kannada movie 'Ulidavaru Kandante'. Sheethal shares her thoughts, experience, past, present, future with Oneindia. Here are some highlights of the interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X