ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಕಣ್ಣೀರಿಟ್ಟ ನಿರೂಪಕಿ ಅನುಶ್ರೀ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ-ನಿರೂಪಕಿ ಅನುಶ್ರೀಗೆ ಮಂಗಳೂರು ಪೊಲೀಸರು ನೋಟಿಸ್ ನೀಡಿದ್ದರು. ಡ್ರಗ್ ಪೆಡ್ಲರ್ ಜೊತೆ ಪರಿಚಯ ಹೊಂದಿದ್ದರು ಎಂಬ ಅನುಮಾನದ ಹಿನ್ನೆಲೆ ವಿಚಾರಣೆಗೆ ಕರೆದು, ಸ್ಪಷ್ಟನೆ ಕೇಳಿದ್ದರು. ಅನುಶ್ರೀ ಸಹ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಬಂದಿದ್ದರು.
Recommended Video
ಡ್ರಗ್ಸ್ ಕೇಸ್‌ನಲ್ಲಿ ಅನುಶ್ರೀಗೆ ನೋಟಿಸ್ ನೀಡುತ್ತಿದ್ದಂತೆ ಕೆಲವು ಊಹಾಪೋಹಗಳು ನಿರೂಪಕಿಯ ಸುತ್ತ ಸುತ್ತಿಕೊಳ್ತು. ವೈಯಕ್ತಿಕವಾಗಿ ಹಲವು ಟೀಕೆಗಳು ಎದುರಾದವು. ಡ್ರಗ್ಸ್ ಜಾಲದಲ್ಲಿ ಅನುಶ್ರೀ ಭಾಗಿಯಾಗಿದ್ದಾರಾ ಎಂದು ಚರ್ಚೆಗಳು ಸಹ ನಡೆದವು. ಈ ಎಲ್ಲ ಬೆಳವಣಿಗೆಯ ಕುರಿತು ಬೇಸರ ವ್ಯಕ್ತಪಡಿಸಿರುವ ಅನುಶ್ರೀ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಕಣ್ಣೀರು ಹಾಕಿದ್ದಾರೆ. ಮುಂದೆ ಓದಿ....

ನನ್ನ ಜೀವನದ ಕರಾಳ ದಿನ
''ಸೆಪ್ಟೆಂಬರ್ 24, 2020....ನನ್ನ ಜೀವನದಲ್ಲಿ ಮತ್ತೆ ಎಂದಿಗೂ ನೆನಪಿಸಿಕೊಳ್ಳಲು ಇಷ್ಟ ಪಡದ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದಾಗ ಅಂದುಕೊಂಡಿರಲಿಲ್ಲ. ಮತ್ತೆ ಅದೇ ದಿನ ನನಗೆ ಜೀವನದಲ್ಲಿ ಮುಳ್ಳಾಗಿ ಬರುತ್ತೆ ಅಂತ. ಈ ವಿಡಿಯೋವನ್ನು ನನ್ನನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಕ್ಕೋ ಅಥವಾ ಕರುಣೆಗಾಗಿ ಮಾಡ್ತಿಲ್ಲ. ನನ್ನ ಸುತ್ತ ಹಲವು ಚರ್ಚೆಗಳು ಆಗ್ತಿರುವ ಕಾರಣ ಈ ವಿಡಿಯೋ ಮಾಡ್ತಿದ್ದೀನಿ'' ಎಂದು ನೋವು ಹಂಚಿಕೊಂಡಿದ್ದಾರೆ ಅನುಶ್ರೀ.

ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಲ್ಲ
''ಸಿಸಿಬಿ ನೋಟಿಸ್ ಬಂದಿದ್ದು ಬೇಜಾರಾಗಿಲ್ಲ. ವಿಚಾರಣೆಗಾಗಿ ನಾನು ಹೋದ ಮಾತ್ರಕ್ಕೆ ಅಪರಾಧಿ ಅಥವಾ ಆರೋಪಿಯಾಗಲ್ಲ. ಈ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ತುಂಬಾ ನೋವು ಉಂಟು ಮಾಡಿದೆ. ನೋವು ಎನ್ನುವುದು ತುಂಬ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದೆ'' ಎಂದು ಕಣ್ಣೀರಿಟ್ಟಿದ್ದಾರೆ.

ಕನ್ನಡಿಗರಿಗೆ ಧನ್ಯವಾದ
''ಈ ಕಷ್ಟ ಕಾಲದಲ್ಲಿ ಏನೂ ಕೇಳದೆ, ಅನುಶ್ರೀ ನೀವು ಏನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ಅಪಾರವಾದ ನಂಬಿಕೆ ಇದೆ ಅಂತ ಧೈರ್ಯ ತುಂಬಿದ ಎಲ್ಲ ಕನ್ನಡಿಗರಿಗೆ ತುಂಬ ಹೃದಯ ಧನ್ಯವಾದಗಳು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನೆಮ್ಮದಿ ಹಾಳು ಮಾಡುತ್ತಿದೆ
''ಈ ರೀತಿ ವಿಷಯಗಳನ್ನು ಪ್ರಚಾರ ಮಾಡಬೇಕಾದರೆ ಯೋಚನೆ ಮಾಡಿ. ಅಭಿಪ್ರಾಯಗಳು, ಅಂತೆ-ಕಂತೆಗಳು ನಮ್ಮ ನೆಮ್ಮದಿಗಳನ್ನು ಹಾಳ ಮಾಡುತ್ತದೆ. ದಯವಿಟ್ಟು ನಮ್ಮ ಮನಸ್ಥಿತಿ ಬಗ್ಗೆ ಯೋಚನೆ ಮಾಡಿ. ಈ ಹೆಸರು ಕನ್ನಡಿಗರು ನೀವು ಕೊಟ್ಟಿದ್ದು, ಇದಕ್ಕೆ ಧಕ್ಕೆ ತರುವಂತಹ ಕೆಲಸ ನಾನು ಮಾಡಿಲ್ಲ, ಮುಂದೆಯೂ ನಾನು ಮಾಡಲ್ಲ. ಈ ಕಷ್ಟದ ದಿನಗಳಲ್ಲಿ ನಮ್ಮ ಜೊತೆಗಿದ್ದ ಸ್ನೇಹಿತರು, ಕುಟುಂಬ, ನನ್ನ ಸಂಸ್ಥೆ, ಜನರಿಗೆ ಧನ್ಯವಾದಗಳು'' ಎಂದು ನಟಿ ಅನುಶ್ರೀ ಅಳಲು ತೋಡಿಕೊಂಡಿದ್ದಾರೆ.


Click it and Unblock the Notifications











