'ಬೆಂಕಿಪಟ್ಣ'ಕ್ಕೆ ಬಂದ ರಿಯಾಲಿಟಿ ಬೆಡಗಿ ಅನುಶ್ರೀ
ಈಟಿವಿ ಕನ್ನಡದ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ತುಂಬಾ ಆಕ್ಟೀವ್ ಆಗಿ ಚಿಟಪಟ ಎಂದು ಚಿನಕುರುಳಿ ಪಟಾಕಿಯಂತೆ ಸಿಡಿಯುತ್ತಿದ್ದ ಸ್ಪರ್ಧಿ ಅನುಶ್ರೀ. 'ಬಿಗ್ ಬಾಸ್' ವಿನ್ನರ್ ಇವರೇ ಆಗುತ್ತಾರೆ ಎಂಬ ಭರವಸೆಯನ್ನು ಮೂಡಿಸಿದ್ದರು.
ಈಗವರು ರಜತಪರದೆಗೆ ಅಡಿಯಿಡುತ್ತಿದ್ದಾರೆ. ನಿರೂಪಕಿಯಾಗಿ, ಸಣ್ಣಪುಟ್ಟ ಪಾತ್ರಗಳನ್ನು ಮಾಡಿರುವ ಅವರು ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರ 'ಭೂಮಿ ತಾಯಿ' ಚಿತ್ರದಲ್ಲಿ ಅತಿಥಿ ಪಾತ್ರ, 'ಬೆಳ್ಳಿಕಿರಣ' ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ್ದರು. 'ಮುರಳಿ ಮೀಟ್ಸ್ ಮೀರಾ' ಚಿತ್ರದಲ್ಲಿ ಡಬ್ಬಿಂಗ್ ಹೇಳಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಈಗ 'ಬೆಂಕಿಪಟ್ಣ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಟಿ.ಕೆ.ದಯಾನಂದ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ.

ಬೆಂಕಿ ಪಟ್ಲ ಚಿತ್ರದಲ್ಲಿ ಅನುಶ್ರೀ ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದ ಕಥೆ ಮಂಡ್ಯದ ಸುತ್ತಮುತ್ತ ನಡೆಯುತ್ತದೆ. ಇದಕ್ಕಾಗಿ ಅನುಶ್ರೀ ಮಂಡ್ಯ ಆಡುಭಾಷೆಯನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಮೂವತ್ತೈದು ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಚಿತ್ರತಂಡ ನಿರ್ಧರಿಸಿದೆ.
ಈ ಚಿತ್ರದ ಮೂಲಕ ಬಹಳಷ್ಟು ನಿರೀಕ್ಷೆಗಳನ್ನು ಅನುಶ್ರೀ ಇಟ್ಟುಕೊಂಡಿದ್ದಾರೆ. ಕಥೆ ಕೇಳಬೇಕಾದರೆ ಅವರ ತಾಯಿಯೂ ಜೊತೆಗಿದ್ದರಂತೆ. ಈ ಪಾತ್ರಕ್ಕೆ ನಿನಗೆ ನ್ಯಾಯ ಸಲ್ಲಿಸಲು ಸಾಧ್ಯವೇ ಎಂದರಂತೆ. ಒಂದಷ್ಟು ರಿಹರ್ಸಲ್ ಮಾಡಿ ಕಡೆಗೆ ಓಕೆ ಎಂದರಂತೆ. (ಏಜೆನ್ಸೀಸ್)


Click it and Unblock the Notifications











