ರಾಜ್ ಬಿ ಶೆಟ್ಟಿ ಬರ್ಲಿಲ್ಲ ಅಂತ ಅವ್ರ ಲುಂಗಿ ಉಟ್ಕೊಂಡು ಬಂದ ಅನುಶ್ರೀ!
ನಟ, ನಿರ್ದೇಶಕ ರಾಜ್ ಬಿ, ಶೆಟ್ಟಿ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಕಥೆ, ಚಿತ್ರಕಥೆ ನಿರ್ದೇಶನದ ಜೊತೆ ಜೊತೆಗೆ ನಟನೆಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಅನುಶ್ರೀ ಹಾಗೂ ರಾಜ್.ಬಿ ಶೆಟ್ಟಿ ಒಳ್ಳೆ ಸ್ನೇಹಿತರು. ಸದ್ಯ '45' ಚಿತ್ರದಲ್ಲಿ ರಾಜ್ ಒಂದೊಳ್ಳೆ ಪಾತ್ರದಲ್ಲಿ ನಟಿಸಿದ್ದಾರೆ.
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶಿವಣ್ಣ ಹಾಗೂ ಉಪೇಂದ್ರ ಮೂರನೇ ಬಾರಿ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಇಬ್ಬರ ನಡುವೆ ರಾಜ್ ಬಿ. ಶೆಟ್ಟಿ ಮತ್ತೊಂದು ಮುಖ್ಯವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ಪಾತ್ರದ ಸುತ್ತಾ ಇಡೀ ಸಿನಿಮಾ ಕಥೆ ಸುತ್ತುತ್ತದೆ.

ಇತ್ತೀಚೆಗೆ '45' ಚಿತ್ರದ ಟೀಸರ್ ಬಿಡುಗಡೆ ಆಗಿ ಸದ್ದು ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದ್ದು 5 ಭಾಷೆಗಳಲ್ಲಿ ಟೀಸರ್ ಬಂದಿದೆ. ಪರಭಾಷಿಕರಿಂದಲೂ ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಟೀಸರ್ ರಿಲೀಸ್ ಬೆನ್ನಲ್ಲೇ ಚಿತ್ರತಂಡ ಪ್ಯಾನ್ ಇಂಡಿಯಾ ಟೂರ್ ಮಾಡಿ ಚಿತ್ರದ ಪ್ರಚಾರ ಮಾಡಿ ಬಂದಿತ್ತು. ಪ್ರೈವೇಟ್ ಜೆಟ್ ಏರಿ ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಕೊಚ್ಚಿನ್‌ಗೆ ತೆರಳಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾತನಾಡಿ ಬಂದಿತ್ತು.
ಇನ್ನು ಪ್ರೈವೇಟ್ ಜೆಟ್ ಏರಿ ಪ್ಯಾನ್ ಇಂಡಿಯಾ ಪ್ರವಾಸ ಮಾಡುವ ವೇಳೆ ಅನುಶ್ರೀ ಚಿತ್ರತಂಡದ ಸಂದರ್ಶನ ಮಾಡಿದ್ದಾರೆ. ಪುಟ್ಟ ವಿಮಾನದ ಒಳಗೆ ಮಾತನಾಡುತ್ತಾ ಚಿತ್ರತಂಡ ಪ್ರಯಾಣಿಸಿದೆ. ನಿರ್ದೇಶಕ ಅರ್ಜುನ್ ಜನ್ಯಾ, ನಟರಾದ ಶಿವಣ್ಣ, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯಾ, ನಿರ್ಮಾಪಕ ರಮೇಶ್ ರೆಡ್ಡಿ ಕೂಡ ಭಾಗಿ ಆಗಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಸಹ ಸಾಥ್ ಕೊಟ್ಟಿದ್ದಾರೆ.
ಚಿತ್ರತಂಡದ ಎಲ್ಲರೂ ಇದ್ದರೂ ನಟ ರಾಜ್ ಬಿ. ಶೆಟ್ಟಿ ಮಾತ್ರ ಮಿಸ್ ಆಗಿದ್ದಾರೆ. ಈ ಬಗ್ಗೆ ತಮಾಷೆಯಾಗಿ ಉಪೇಂದ್ರ, ಅನುಶ್ರೀ ಅವರ ಕಾಲು ಎಳೆದಿದ್ದಾರೆ. ರಾಜ್ ಬರಲಿಲ್ಲ ಅಂತ ಅವರ ಲುಂಗಿ ಹಾಕ್ಕೊಂಡು ಬಂದುಬಿಟ್ಟಿದ್ದೀರಾ ಎಂದಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿ "ನಾನು ಬಹಳ ಒತ್ತಾಯ ಮಾಡಿ ಕರೆದೆ. ರಾಜ್ ಬನ್ನಿ ಅಂತ. ಇಲ್ಲ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಅಂದ್ರು. ಅದಕ್ಕೆ ನಿಮ್ ಲುಂಗಿ ಕೊಡಿ ಎಂದು ತಗೊಂಡು ಸ್ಟೈಲ್ ಆಗಿ ಸುತ್ಕೊಂಡು ಬಂದೇ" ಎಂದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದೆ.
ಲುಂಗಿ ರಾಜ್ ಸಿಗ್ನೇಚರ್ ಎನ್ನುವಂತಾಗಿಬಿಟ್ಟಿದೆ. ಕೆಲ ವರ್ಷಗಳಿಂದ ಅವರು ಹೆಚ್ಚು ಲುಂಗಿಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ಕಾರ್ಯಕ್ರಮಗಳಲ್ಲಿ ಕೂಡ ಇದೇ ಗೆಟಪ್. ನಿರ್ದೇಶಕ ರಾಜ್. ಬಿ ಶೆಟ್ಟಿ ಹಾಗೂ ಆಂಕರ್ ಅನುಶ್ರೀ ನಡುವೆ ಉತ್ತಮ ಒಡನಾಟವಿದೆ. ಸ್ನೇಹಿತರ ಜೊತೆ ಸೇರಿ ಕೆಲ ದಿನಗಳ ಹಿಂದೆ ರಾಜ್ ಪ್ರಯಾಗ್ ಕುಂಭಮೇಳದಲ್ಲಿ ಭಾಗಿ ಆಗಿದ್ದರು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬಂದಿದ್ದರು. ಅನುಶ್ರೀ ಸದ್ಯ ಜೀ ಕನ್ನಡ ಸರಿಗಮಪ ಶೋ ನಿರೂಪಕಿಯಾಗಿ ಮಿಂಚುತ್ತಿದ್ದಾರೆ.

'45' ಚಿತ್ರದ ವಿಚಾರಕ್ಕೆ ಬಂದರೆ ಇದು ಅರ್ಜುನ್ ನಿರ್ದೇಶನದ ಚೊಚ್ಚಲ ಸಿನಿಮಾ. ಇನ್ನು ನಿರ್ದೇಶನದ ಜೊತೆಗೆ ತಾವೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾ ಹೇಗಿರುತ್ತದೆ ಎಂದು ಮೊದಲೇ ಒಂದು ಗ್ರಾಫಿಕ್ಸ್ ಶೋರೀಲ್ ಮಾಡಿ. ಅದನ್ನು ತೋರಿಸಿ ಇಡೀ ಸಿನಿಮಾ ಮಾಡಿದ್ದಾರೆ. ಸಿನಿಮಾ ಬಗ್ಗೆ ಬಹಳ ಭರವಸೆಯಲ್ಲಿದೆ ಚಿತ್ರತಂಡ. ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಕೂಡ ಆಗಸ್ಟ್ 15ಕ್ಕೆ ತೆರೆಗೆ ಬರ್ತಿದೆ. ಆ ಚಿತ್ರದಲ್ಲಿ ಕೂಡ ಉಪೇಂದ್ರ ನಟಿಸಿದ್ದಾರೆ. ಹಾಗಾಗಿ ಅನಿವಾರ್ಯವಾಗಿ '45' ಸಿನಿಮಾ ರಿಲೀಸ್ ಡೇಟ್ ಬದಲಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನು ಪ್ರತಿಕ್ರಿಯಿಸಿಲ್ಲ.


Click it and Unblock the Notifications











