"ದಯವಿಟ್ಟು ರೇಣುಕಾಸ್ವಾಮಿಯನ್ನು ಹೀರೊ ಮಾಡಬೇಡಿ"; ದರ್ಶನ್ ಪರ ಹೇಮಲತಾ ಪೋಸ್ಟ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುವಂತಾಗಿದೆ. ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪ್ರಕರಣದಲ್ಲಿ ದರ್ಶನ್ ಸೇರಿ 14 ಜನರನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ದರ್ಶನ್ ಪರ ಮಾತನಾಡಲು ಕೆಲ ನಟ-ನಟಿಯರು ಹಿಂದೇಟು ಹಾಕಿದ್ದಾರೆ.
ಆಪ್ತರಲ್ಲಿ ಕೆಲವರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ನಟಿ ಭಾವನಾ ರಾಮಣ್ಣ ಹಾಗೂ ನಿರೂಪಕಿ ಹೇಮಲತಾ ಕೂಡ ದರ್ಶನ್ ಪಕ ಬ್ಯಾಟ್ ಬೀಸಿದ್ದಾರೆ. ನಿರೂಪಕಿ ಹೇಮಾಲತಾ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿಯನ್ನು ಹೀರೊ ಮಾಡುವುದು ಬಿಡಿ ಎಂದು ಹೇಮಲತಾ ಆಗ್ರಹಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಇನ್ನು ಮಾತನಾಡದೇ ಇರಲು ನನ್ನಂದ ಸಾಧ್ಯವಿಲ್ಲ, ಸಾವಿರ ಜನ ಸಾವಿರ ಮಾತನಾಡಲಿ ಒಮ್ಮೆ ಬೆಳೆದ ಸ್ನೇಹಕ್ಕೆ ಕಡಲಿನಸ್ಟಿರುವ ಪ್ರೀತಿಗೆ ನಾವೆಲ್ಲರೂ ಋಣಿಗಳೇ.. ಸ್ನೇಹವೆಂಬ ಸಂಕೋಲೆಯಲಿ ಒಮ್ಮೆ ಸಿಕ್ಕಿಕೊಂಡರೆ ಕೊಂಡಿ ಕಳಚುವುದಿಲ್ಲ... ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯುವುದಿಲ್ಲ, ಬಿಡುವುದಿಲ್ಲ, ಬಿಟ್ಟುಕೊಡುವುದಿಲ್ಲ" ಎಂದು ಹೇಮಲತಾ ಬರೆದುಕೊಂಡಿದ್ದಾರೆ.

"ಈ ಘಟನೆಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ, ಕಾನೂನಿನ ಮುಖಾಂತರ ಅಂತ್ಯವನ್ನಾಡಿ ಎಲ್ಲಾ ಕಳಂಕವನ್ನು ತೊಳೆದುಕೊಂಡು ಹೊರಗೆ ಬನ್ನಿ. ನಿಮ್ಮ ಮೇಲಿರುವ ಪ್ರೀತಿ ಗೌರವ ಎಂದಿಗೂ ಕಮ್ಮಿ ಆಗುವುದಿಲ್ಲ. ದಯವಿಟ್ಟು ರೇಣುಕಾಸ್ವಾಮಿಯನ್ನು ಹೀರೊ ಮಾಡುವುದು ನಿಲ್ಲಿಸಿ. ಇದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಹೇಮಲತಾ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











