For Quick Alerts
  ALLOW NOTIFICATIONS  
  For Daily Alerts

  ಡಾರ್ಲಿಂಗ್ ದರ್ಶನ್ ಭೇಟಿ ಮಾಡಿ ಬಂದ ಮೇಲೆ ಹೆಂಗೆಂಗೋ ಆಡ್ತಿದ್ದಾರೆ ನಿರೂಪಕಿ ಹೇಮಲತಾ!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ. ದಿನೇ ದಿನೇ ಆ ಅಭಿಮಾನಿ ಬಳಗ ಬೆಳೆಯುತ್ತಲೇ ಇದೆ. ಸೆಲೆಬ್ರೆಟಿಗಳು ಕೂಡ ದಾಸನಿಗೆ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಇತ್ತೀಚೆಗೆ ನಿರೂಪಕಿ ಹೇಮಲತಾ ನೆಚ್ಚಿನ ನಟನನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ. ದರ್ಶನ್ ಜೊತೆ ಮಾತನಾಡಿ ಬಂದಮೇಲೂ ಅದೇ ಗುಂಗಿನಲ್ಲಿ ತೇಲಾಡುತ್ತಿದ್ದಾರೆ.

  ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿದೆ. 'D56' ಚಿತ್ರದಲ್ಲಿ ಸದ್ಯ ದರ್ಶನ್ ಬಣ್ಣ ಹಚ್ಚಿದ್ದಾರೆ. ರಾಜ್ಯೋತ್ಸವದ ಸಂಭ್ರಮದಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಕ್ರಾಂತಿ' ಕಿಚ್ಚು ಬಹಳ ಜೋರಾಗಿದೆ. ಇದೆಲ್ಲದರ ನಡುವೆ ನಿರೂಪಕಿ ಹೇಮಲತಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿ ಥ್ರಿಲ್ಲಾಗಿದ್ದಾರೆ. ದರ್ಶನ್ ನಟನೆಯ ಸಿನಿಮಾ ಸಾಂಗ್ಸ್‌ನ ಎಂಜಾಯ್‌ ಮಾಡುತ್ತಾ ಹಾಡಿ ಕುಣಿಯುತ್ತಿರುವ ವಿಡಿಯೋಗಳು ವೈರಲ್ ಆಗಿದೆ.

  ತಮ್ಮ ಸಂಭಾವನೆ ಬಹಿರಂಗಪಡಿಸಿದ ಜಗ್ಗೇಶ್: ಟಿವಿಗೆ ಎಷ್ಟು? ಸಿನಿಮಾಕ್ಕೆ ಎಷ್ಟು?ತಮ್ಮ ಸಂಭಾವನೆ ಬಹಿರಂಗಪಡಿಸಿದ ಜಗ್ಗೇಶ್: ಟಿವಿಗೆ ಎಷ್ಟು? ಸಿನಿಮಾಕ್ಕೆ ಎಷ್ಟು?

  ಇತ್ತೀಚೆಗೆ ಕಿರುತೆರೆ ನಿರೂಪಕಿ ಹೇಮಲತಾ ನೆಚ್ಚಿನ ನಟ ದರ್ಶನ್ ಭೇಟಿ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. 'ಡಾರ್ಲಿಂಗ್‌ ದರ್ಶನ್' ಎಂದು ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ದರ್ಶನ್ ಭೇಟಿ ಮಾಡಿ ಬಂದ ಮೇಲೆ ಹೆಂಗೆಂಗೋ ಹಾಡುತ್ತಿದ್ದಾರೆ. ಆ ಫೋಟೊವನ್ನು ನೋಡುತ್ತಾ ದರ್ಶನ್ ಸೂಪರ್ ಹಿಟ್‌ ಸಾಂಗ್ ಕೇಳ್ತಾ ಕುಣಿದಾಡುತ್ತಿದ್ದಾರೆ. ದರ್ಶನ್‌ ಭೇಟಿ ಮಾಡಿ ಬಂದಮೇಲೆ ಹುಚ್ಚು ಹಿಡಿದುಬಿಟ್ಟಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  ಬಗೆ ಬಗೆ ವೇಷ.. ಆವೇಶ: 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ!ಬಗೆ ಬಗೆ ವೇಷ.. ಆವೇಶ: 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ!

  ಕಾರಿನಲ್ಲಿ ಮನೆ ಹೊರಟ ಹೇಮಲತಾ 'ಮಿಸ್ಟರ್ ಐರಾವತ' ಚಿತ್ರದ ಹಾಡುಗಳನ್ನು ಕೇಳುತ್ತಾ, ಕುಣಿಯುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಟೈಟಲ್‌ ಸಾಂಗ್‌ನಲ್ಲಿರೋ 'ಹೆಣ್ಣುಮಕ್ಕಳಿಗೆ ಅಣ್ಣಾ ಸಾರ್' ಅನ್ನುವ ಸಾಲನ್ನು ಹಾಡೋದಕ್ಕೂ ಹೇಮಲತಾ ಸಿದ್ಧರಿಲ್ಲ. ಅದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಹೇಮಲತಾ ಕಿರುತೆರೆ ನಿರೂಪಕಿಯಾಗಿ ಮಾತ್ರವಲ್ಲದೇ ಸಿನಿಮಾ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 'ಅಟೆಂಪ್ಟ್ ಟು ಮರ್ಡರ್' ಅನ್ನುವ ಚಿತ್ರದಲ್ಲೂ ನಟಿಸಿದ್ದರು. ಸದ್ಯ ಈಕೆ ದರ್ಶನ್ ಸಾಂಗ್ಸ್‌ಗೆ ಕುಣಿದು ಸಂಭ್ರಮಿಸುತ್ತಿರುವ ವಿಡಿಯೋಗಳು ದರ್ಶನ್ ಫ್ಯಾನ್ಸ್ ಪೇಜ್‌ಗಳಲ್ಲಿ ಹರಿದಾಡ್ತಿದೆ.

  'ಲಕ್ಕಿಮ್ಯಾನ್' ಅಡ್ವಾನ್ಸ್ ಬುಕ್ಕಿಂಗ್ ಚಿಂದಿ: ಶುಕ್ರವಾರ ಎಲ್ಲೆಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಹೇಗಿರುತ್ತೆ ಗೊತ್ತಾ?'ಲಕ್ಕಿಮ್ಯಾನ್' ಅಡ್ವಾನ್ಸ್ ಬುಕ್ಕಿಂಗ್ ಚಿಂದಿ: ಶುಕ್ರವಾರ ಎಲ್ಲೆಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಹೇಗಿರುತ್ತೆ ಗೊತ್ತಾ?

  English summary
  Anchor Hemalatha go Crazy After Meet Favorite actor Darshan. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X