Anchor Jhanvi Debut Movie: 'ಗಿಚ್ಚಿ ಗಿಲಿಗಿಲಿ' ಜಾಹ್ನವಿ ಹೊಸ ಪಯಣ ಶುರು.. ಬಿಗ್‌ಬಾಸ್ ರೂಪೇಶ್ ಶೆಟ್ಟಿಗೆ ಜೋಡಿ!
ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಜಾಹ್ನವಿ ಹಂತ ಹಂತವಾಗಿ ಹೊಸ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ನಿರೂಪಕಿಯಾಗಿದ್ದವರು ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋದಲ್ಲಿ ಗುರುತಿಸಿಕೊಂಡಿದ್ದರು. 'ಗಿಚ್ಚಿ ಗಿಲಿಗಿಲಿ' ಸೀಸನ್ 2ನಲ್ಲಿ ಜಾಹ್ನವಿ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದರು.
'ಗಿಚ್ಚಿ ಗಿಲಿಗಿಲಿ' ಬಳಿಕ ಜಾಹ್ನವಿ ಏನು ಮಾಡುತ್ತಿದ್ದಾರೆ? ಅನ್ನೋ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ಮಾಡರ್ನ್ ಲುಕ್‌ನಲ್ಲಿ ಜಾಹ್ನವಿ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಜಾಹ್ನವಿ ಮೊದಲ ಸಿನಿಮಾ ಒಪ್ಪಿಕೊಂಡಿದ್ದು, ಇಂಟ್ರೆಸ್ಟಿಂಗ್ ಮ್ಯಾಟರ್ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಬಿಗ್‌ಬಾಸ್ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಆ ಸಿನಿಮಾ 'ಅಧಿಪತ್ರ' ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಅದೇ ಸಿನಿಮಾದಲ್ಲಿ ಜಾಹ್ನವಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಹಾಗೂ ಸಿನಿಮಾರಂಗಕ್ಕೆ ಜಾಹ್ನವಿ ಎಂಟ್ರಿ ಕೊಟ್ಟಿದ್ದರ ಬಗ್ಗೆ ಮಾಹಿತಿ ಇಲ್ಲಿದೆ.
ರೂಪೇಶ್ ಶೆಟ್ಟಿ ಹೊಸ ಸಿನಿಮಾ 'ಅಧಿಪತಿ'
ರೂಪೇಶ್ ಶೆಟ್ಟಿ ಹುಟ್ಟಿದ ಹಬ್ಬದಂದು ಹೊಸ ಸಿನಿಮಾ 'ಅಧಿಪತಿ' ಟೈಟಲ್ ರಿವೀಲ್ ಆಗಿತ್ತು. ಅಲ್ಲಿಂದ ಈ ಸಿನಿಮಾ ಕುತೂಹಲವನ್ನು ಮೂಡಿಸುತ್ತಲೇ ಬಂದಿದೆ. ಈ ಹಿಂದೆ ರೂಪೇಶ್ ಶೆಟ್ಟಿ ನಟಿಸಿದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ ರೂಪೇಶ್ ಶೆಟ್ಟಿಯ ಮತ್ತೊಂದು ಸಿನಿಮಾ ಸೆಟ್ಟೇರಿತ್ತು. ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಗಿಚ್ಚಿ ಗಿಲಿಗಿಲಿಯ ಜಾಹ್ನವಿ ಇದೇ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.
ರೂಪೇಶ್ ಶೆಟ್ಟಿಗೆ ನಾಯಕಿ ಜಾಹ್ನವಿ
'ಅಧಿಪತಿ' ಸಿನಿಮಾ ಮೂಲಕ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿಗೆ ಜೋಡಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ಸುದ್ದಿ ನಿರೂಪಕಿಯಾಗಿ ಗೆದ್ದಿದ್ದು ಆಯ್ತು. ಕಿರುತೆರೆ ಎಂಟ್ರಿಕೊಟ್ಟು ಗೆದ್ದಿದ್ದೂ ಆಯ್ತು. ಈಗ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಹೊಸ ಜರ್ನಿ ಆರಂಭ ಮಾಡಿದ್ದಾರೆ. ಸಿನಿಮಾದಲ್ಲಿ ಜಾಹ್ನವಿಗೆ ಗೆದ್ದು ಬೀಗುತ್ತಾರಾ? ಅನ್ನೋ ಪ್ರಶ್ನೆ ಇದೆ.
ತುಳು ಬಾಕ್ಸಾಫೀಸ್ ಕಿಂಗ್
ರೂಪೇಶ್ ಶೆಟ್ಟಿ ನಟನೆಯ ತುಳು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿವೆ. ಭರ್ಜರಿ ಸಕ್ಸಸ್ ಕಾಣುತ್ತಿವೆ. ಇದೀಗ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಚಯನ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ನೈಜ ಘಟನೆಯನ್ನು ಆಧರಿಸಿದ್ದು, ಮಂಗಳೂರು ಹಾಗೂ ಉಡುಪಿ ಸುತ್ತಮುತ್ತ ಸಿನಿಮಾವನ್ನು ಚಿತ್ರೀಕರಣ ಮಾಡಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇದೇ ಆಗಸ್ಟ್ 23ಕ್ಕೆ 'ಅಧಿಪತ್ರ' ಮುಹೂರ್ತ ನಡೆಯಲಿದೆ.


Click it and Unblock the Notifications











