ಎಲ್ಲ ನನ್ನ ಹಣೆಬರಹ ಅದಕ್ಕೆ ಡಿವೋರ್ಸ್ ಆಯ್ತು- ಭಾವುಕಗೊಂಡ ಗಿಚ್ಚಿ ಗಿಲಿ ಗಿಲಿ ಜಾಹ್ನವಿ..!

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇಕ್‌ ಅಪ್‌ನ ನೋವು ಸಹಿಸಿಕೊಳ್ಳುವುದಕ್ಕೆ ಅನೇಕರಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ದೇಹಕ್ಕೆ ಆದ ಗಾಯವಾದರೂ ಹೇಗೊ ಮರೆತು ಬಿಡಬಹುದು. ಆದರೆ ಮನಸಿಗೆ ಆದ ಗಾಯ ಮರೆಯಲು ಸಾಧ್ಯವಾಗಲ್ಲ.

ಆದರೂ ಕೆಲವರು ಮರೆಯುವ ಪ್ರಯತ್ನ ಮಾಡುತ್ತಾರೆ. ಬದುಕನ್ನು ಮತ್ತೊಮ್ಮೆ ಹೊಸದಾಗಿ ಶುರು ಮಾಡಲು ಮುಂದಾಗುತ್ತಾರೆ. ಆದರೂ ಕೂಡ ಆ ಭಯಾನಕ ನೆನಪುಗಳು ಕಾಡುತ್ತಲೇ ಇರುತ್ತವೆ. ಇದಕ್ಕೆ ಜಾಹ್ನವಿ ಅವರ ಬದುಕು ಸದ್ಯದ ಉದಾಹರಣೆ.

Anchor-turned-actress Jhanvi R reveals the reason behind her divorce

ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಅಧಿಪತ್ರ ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.

ಇಂಥಾ ಜಾಹ್ನವಿ ತಮ್ಮ ವ್ಯೆಯಕ್ತಿಕ ಬದುಕಿನಲ್ಲಿ ಹಲವು ನೋವು ಉಂಡಿದ್ದಾರೆ. ಅನೇಕ ಸಲ ತಮ್ಮ ಜೀವನದ ಮುಳ್ಳಿನ ಹಾದಿಯನ್ನು ನೆನೆದು ಕಣ್ಣೀರನ್ನು ಹಾಕಿದ್ದಾರೆ. ಆದರೂ ಕೂಡ ಇವರ ವ್ಯೆಯಕ್ತಿಕ ಬದುಕಿನ ಕುರಿತು ಇನ್ನು ಹಲವರಲ್ಲಿ ಕುತೂಹಲ ಇದ್ದೇ ಇದೆ. ಹೀಗಾಗಿಯೇ ಈಗಲೂ ಕೂಡ ಜಾಹ್ನವಿಗೆ ಅವರ ಮದುವೆ ಮತ್ತು ವಿಚ್ಛೇದನದ ಕುರಿತು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ ಜಾಹ್ನವಿ ಸದ್ಯ ಮತ್ತೊಮ್ಮೆ ತಮ್ಮ ಜೀವನದ ಏರಿಳಿತಗಳ ಕುರಿತು ರಾಜೇಶ್ ಗೌಡ ಅವರ ಜೊತೆ ಮಾತನಾಡಿದ್ದಾರೆ. ಗಂಡನ ಜೊತೆ ಸಂಬಂಧ ಕಡಿದುಕೊಂಡಿದ್ದೇಕೆ ಎನ್ನುವುದನ್ನು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಜಾಹ್ನವಿ ವೃತ್ತಿ ಜೀವನದಲ್ಲಿ ಹಲವು ಸಮಸ್ಯೆಗಳಿದ್ದರು ಕೂಡ ನಾನು ವ್ಯೆಯಕ್ತಿಕ ಜೀವನವನ್ನು ಕೂಡ ನಿಭಾಯಿಸಿಕೊಂಡು ಹೋಗುತ್ತಿದ್ದೇ ಎಂದಿರುವ ಜಾಹ್ನವಿ ನನಗೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಲು ಇಷ್ಟ ಇಲ್ಲ ಹೀಗಾಗಿ ನಾನು ಎಲ್ಲವನ್ನು ಬ್ಯಾಲೆನ್ಸ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಇನ್ನು, ಸಂಸಾರ ಅಂದ ಮೇಲೆ ಚಿಕ್ಕ ಪುಟ್ಟ ವಿರಸಗಳು ಇದ್ದಿದ್ದೇ ಎಂದು ಹೇಳಿರುವ ಜಾಹ್ನವಿ ಬೆಂಗಳೂರಿನ ಹುಡುಗನ ಜೊತೆ ನಾನು ಮದ್ವೆಯಾಗಿದ್ದೇ ಬೆಂಗಳೂರಿನಲ್ಲಿ ನಾನೇನಾದರೂ ಕೆಲಸ ಮಾಡಬಹುದು ಎನ್ನುವ ಉದ್ದೇಶದಿಂದ, ಅಣ್ಣ ಮೈಸೂರಿನಲ್ಲಿ ಸಂಬಂಧ ನೋಡಿದ್ದರು ಕೂಡ ನಾನು ಬೆಂಗಳೂರು ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾರೆ. ಎಷ್ಟೇ ಕಷ್ಟ ಆದರೂ ನಾನು ಬಿಡಲಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ನಾನೊಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಜನ ನನ್ನ ಮತ್ತು ನನ್ನ ಮಗನನ್ನು ಗುರುತಿಸಲು ಶುರು ಮಾಡಿದರು ಎಂದು ಹೇಳಿರುವ ಜಾಹ್ನವಿ, ಆ ಕಾರ್ಯಕ್ರಮದ ನಂತರ ನಮ್ಮ ದಾಂಪತ್ಯ ಮುರಿದು ಬಿದ್ದಿಲ್ಲ ಅದಕ್ಕೂ ಮೊದಲೇ ಭಿನ್ನಾಭಿಪ್ರಾಯಗಳಿದ್ದವು ಎಂದು ಹೇಳಿದ್ದಾರೆ.

ನಮ್ಮ ನಡುವೆ ಯಾವತ್ತು ಹೊಂದಾಣಿಕೆಯಾಗಲೇ ಇಲ್ಲ ಎಂದು ಹೇಳಿರುವ ಜಾಹ್ನವಿ ಅನೇಕ ಸಂದರ್ಶನಗಳಲ್ಲಿ ನಾನು ಈ ಕುರಿತು ತುಂಬಾ ಮುಕ್ತವಾಗಿ ಮಾತನಾಡಿದ್ದೇನೆ, ಯಾಕೆಂದರೆ.. ಆ ಕೋಪ ನನ್ನಲ್ಲಿತ್ತು ಎಂದು ಹೇಳಿದ್ದಾರೆ. ಇವತ್ತು ತಿರುಗಿ ನೋಡಿದರೆ ಎಲ್ಲ ನನ್ನ ಹಣೆ ಬರಹ ಅನ್ಸುತ್ತೆ ಎಂದು ಹೇಳಿದ್ದಾರೆ.

ನಮ್ಮ ನಡುವೆ ಹೊಂದಾಣಿಕೆ ಇರ್ತಾ ಇರಲಿಲ್ಲ, ನಾನೇ ಬೇರೆ ತರ, ಅವನೇ ಬೇರೆ ತರ, ನನ್ನ ಆಲೋಚನಾ ಶೈಲಿಯೇ ಬೇರೆ ಅವನ ಆಲೋಚನಾ ಕ್ರಮವೇ ಬೇರೆ ಎಂದಿರುವ ಜಾಹ್ನವಿ, ನಮ್ಮ ಬದುಕಿನಲ್ಲಿ ನಾನು ನಿರೀಕ್ಷೆ ಮಾಡದ ಒಂದು ಘಟನೆ ನಡೆಯಿತು ಅದರಿಂದ ನಾನು ಆಘಾತಕ್ಕೊಳಗಾದೆ ಎಂದು ಹೇಳಿದ್ದಾರೆ.

ನಮ್ಮ ಮನೆಯವರೆಲ್ಲ ಸಂಪ್ರದಾಯಸ್ಥರು ಅವರೇ ಇಷ್ಟೆಲ್ಲ ಆದ ಮೇಲೆ ಮುಂದುವರೆಯುವುದು ಬೇಡ ಎಂದು ಹೇಳಲು ಶುರು ಮಾಡಿದರು ಆದರೂ ಕೂಡ ನಾನು ತಕ್ಷಣ ನಿರ್ಧಾರ ತೆಗೆದುಕೊಳ್ಳಲಿಲ್ಲ ಬದಲಿಗೆ ಎರಡು ವರ್ಷ ಕಾದೇ ಎಂದು ಹೇಳಿರುವ ಜಾಹ್ನವಿ ಏನಾದರೂ ಬದಲಾವಣೆಯಾಗಬಹುದೆಂದು ಕಾದೇ ಆದರೆ ಹಣೆಬರಹಕ್ಕೆ ಹೊಣೆ ಯಾರು ಎಂದು ಹೇಳಿದ್ದಾರೆ.

ಒಂದಾದ ಮೇಲೊಂದು ವಿಚಾರ ಹೊರ ಬರಲು ಶುರುವಾಯ್ತು ಕೊನೆಗೆ ಬೇಡ ಎಂದು ನಿರ್ಧಾರ ಮಾಡಿ ಎರಡು ವರ್ಷದ ನಂತರ ಸಂಬಂಧದಿಂದ ಹೊರ ಬಂದೆ ಎಂದು ಹೇಳಿರುವ ಜಾಹ್ನವಿ, ಒಳ್ಳೆಯದಿರಲಿ, ಕೆಟ್ಟದಿರಲಿ ಇಬ್ಬರು ಸರಿಮಾಡಿಕೊಂಡು ಹೋಗಬೇಕಿತ್ತು ಆದರೆ ಅದು ಆಗಲೇ ಇಲ್ಲ ಎಂದು ಹೇಳಿದ್ದಾರೆ.ನನ್ನ ಬದುಕಿನಲ್ಲಾದ ಈ ಎಲ್ಲ ಘಟನೆಗಳಿಂದ ನಾನು ಮಾನಸಿಕವಾಗಿ ಈಗ ಹೆಚ್ಚು ಶಕ್ತಿಶಾಲಿಯಾಗಿದ್ದೇನೆ ಎಂದು ಹೇಳಿರುವ ಜಾಹ್ನವಿ ನನಗೆ ಈಗ ಯಾವ ವಿಚಾರ ಕೂಡ ಬೇಗ ನೋವುಂಟು ಮಾಡುವುದಿಲ್ಲ, ಕಣ್ಣೀರು ಕೂಡ ಸುಲಭಕ್ಕೆ ಬರುವುದಿಲ್ಲ ಮೊದಲೆಲ್ಲ ನಾನು ತುಂಬಾ ಕಣ್ಣೀರು ಹಾಕುತ್ತಿದ್ದೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಮುರಿದು ಬಿದ್ದ ತಮ್ಮ ದಾಂಪತ್ಯ ಜೀವನದ ಕುರಿತು ಕೆಲ ತಿಂಗಳ ಹಿಂದೆ ಫಿಲ್ಮಿಬೀಟ್ ಕನ್ನಡಗೆ ಜಾಹ್ನವಿ ಸಂದರ್ಶನ ನೀಡಿದ್ದರು. ಈ ಸಮಯದಲ್ಲಿ ಮಾತನಾಡಿದ್ದ ಜಾಹ್ನವಿ ನಾನು ಆಂಕರಿಂಗ್ ಬಿಟ್ಟು ಸಿನಿಮಾ ಮಾಡುವುದಕ್ಕೆ ಬಂದಾಗ ಎಲ್ಲರೂ ಖುಷಿ ಪಟ್ಟರು. ಯಾಕಂದ್ರೆ, ನಾನು ಅಂತಹ ಸರ್ಕಲ್ ಅನ್ನೇ ಇಟ್ಟುಕೊಳ್ಳುವುದು. ಇನ್ನು ಹೊರಗಡೆಯವರು ಏನೇ ಮಾತಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹೊರಗಡೆಯವರಿಂದ ಏನು ಮಾತು ಬಂದಿದೆ ಅನ್ನೋದು ಕೂಡ ನನಗೆ ಗೊತ್ತಿಲ್ಲ. ನನ್ನ ಸುತ್ತಮುತ್ತ, ನಮ್ಮ ಅಮ್ಮ ಅವರಿಗೆಲ್ಲ ತುಂಬಾನೇ ಖುಷಿಯಿದೆ. ಮೊದಲು ಅವರಿಗೆ ಸ್ವಲ್ಪ ಭಯವಿತ್ತು. ಯಾರೂ ನೆಗೆಟಿವ್ ಆಗಿ ಮಾತಾಡಿಲ್ಲ. ಎಲ್ಲರೂ ಪಾಸಿಟಿವ್ ಆಗಿಯೇ ಮಾತಾಡಿದ್ದಾರೆ ಎಂದು ಹೇಳಿದ್ದರು.

ಮುಂಚೆಗಿಂತಲೂ ತುಂಬಾನೇ ಫ್ರೀಯಾಗಿ ಆ ಫ್ರೀಡಂ ಅನ್ನು ಎಂಜಾಯ್ ಮಾಡುತ್ತಿದ್ದೇನೆ. ಅಂದರೆ, ಮನಸ್ಸಿಗೆ ನೆಮ್ಮದಿ ಇದೆ. ಇವತ್ತು ಇಂಟರ್‌ವ್ಯೂ ಇದ್ದರೆ, ನಾಳೆ ನನ್ನದು ಯೂಟ್ಯೂಬ್ ಕೆಲಸ ಮಾಡುತ್ತೇನೆ. ಸವಿರುಚಿ ಶುರುವಾದರೆ ಅಲ್ಲಿ ಕೆಲಸ ಮಾಡುತ್ತೇನೆ. ವೇದಿಕೆ ಮೇಲೆ ನಿರೂಪಣೆ ಮಾಡುವುದಕ್ಕೆ ಸಿಕ್ಕರೆ ಅಲ್ಲಿ ನಿರೂಪಣೆ ಮಾಡುತ್ತೇನೆ. ಎಲ್ಲಾದರೂ ಫಾರಿನ್‌ಗೆ ನಿರೂಪಣೆ ಮಾಡುವುದಕ್ಕೆ ಅವಕಾಶ ಸಿಕ್ಕರೆ ಅಲ್ಲಿಗೆ ಹೋಗುತ್ತೇನೆ. ನನಗೆ ತುಂಬಾ ಕೆಲಸ ಮಾಡಬೇಕು. ಹೆಸರು ಮಾಡಬೇಕು ಅಂತ ಮೊದಲಿನಿಂದಲೂ ಆಸೆ. ಈಗ ಯಾವುದೇ ರಿಸ್ಟ್ರಿಕನ್ ಇಲ್ಲದೆ. ನನ್ನ ಲೈಫ್‌ನ ನಿರ್ಧಾರವನ್ನು ನಾನೇ ತೆಗೆದುಕೊಂಡು ನನ್ನ ಲೈಫ್ ಅನ್ನು ನಾನೇ ರೂಲ್ ಮಾಡುತ್ತಿದ್ದೇನೆ. ಮುಂಚೆ ಬೇರೆಯವರು ಮಾಡುತ್ತಿದ್ದರು ಎಂದು ಕೂಡ ಜಾಹ್ನವಿ ನಿಮ್ಮ ಫಿಲ್ಮಿಬೀಟ್‌ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು.

ವಿಚ್ಛೇದನಕ್ಕೂ ಮುನ್ನ ಒಂದು ಸಿನಿಮಾಗೆ ಆಫರ್ ಬಂದಾಗ ಪತಿಗೂ ಇಷ್ಟ ಆಗಬೇಕಿತ್ತು. ಒಂದು ವೇಳೆ ಅವರು ನೋ ಅಂದರೆ ಆಗುತ್ತಿರಲಿಲ್ಲ. ಇಬ್ಬರೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತಿತ್ತು. ಹಣಕಾಸುಗಳ ಲೆಕ್ಕದಲ್ಲಿ ಹಿಂದೆ ಮುಂದೆ ಆಗುತ್ತಿತ್ತು. ಊರಿಗೆ ಹೋಗಬೇಕು ಅಂದರೆ, ಇಬ್ಬರೂ ಸೇರಿಕೊಂಡೇ ನಿರ್ಧಾರ ಮಾಡಬೇಕಾಗಿತ್ತು. ಕೆಲವೊಂದು ತಪ್ಪು ತಿಳುವಳಿಕೆಗಳಿಂದ ಗಲಾಟೆಗಳು ಆಗುತ್ತಿತ್ತು. ಈಗ ಆ ವ್ಯಕ್ತಿಯಿಲ್ಲ. ಹೀಗಾಗಿ ಮಗ, ಭವಿಷ್ಯದ ಯೋಚನೆಗಳು ಇದೆ" ಎಂದು ಜಾಹ್ನವಿ ಫಿಲ್ಮಿಬೀಟ್ ಕನ್ನಡ ಹೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

More from Filmibeat

English summary
Jhanvi R breaks her silence on her divorce after 14 years of marriage. In an emotional talk with Rajesh Gowda, she blamed fate and revealed that the painful decision to separate was made after long contemplation
Read more about: divorce jhanvi filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X