ನನ್ನ ಮಟ್ಟಿಗೆ ನಿರೂಪಣೆ ಸುಲಭ: ಶೀತಲ್ ಶೆಟ್ಟಿ

By ರಾಜೇಂದ್ರ ಚಿಂತಾಮಣಿ

Next »

« Previous

3. ಈಗಾಗಲೆ 24/7 ಕ್ಯಾಮೆರಾ ಎದುರಿಸಿದ್ದೀರಿ? ಈಗ ಕ್ಯಾಮೆರಾ ಮುಂದೆ ನಟಿಸಬೇಕೆಂದರೆ ಏನನ್ನಿಸುತ್ತಿದೆ?
ಅಲ್ಲಿ ನಮಗೆ ಎಲ್ಲವೂ ಲೈವ್ ಇರುತ್ತಿತ್ತು. ಬುಲೆಟಿನ್ಸ್, ಬ್ರೇಕಿಂಗ್ ನ್ಯೂಸ್ ನಿರ್ವಹಿಸುವುದು, ಸುದ್ದಿಗಳನ್ನು ಓದಬೇಕಾಗುತ್ತಿತ್ತು. ಇಲ್ಲಿ ನಿರ್ದೇಶಕರು ಹೇಳಿದಂತೆ ಮಾಡಬೇಕಾಗುತ್ತದೆ. ಪಾತ್ರಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕಾಗುತ್ತದೆ. ನನಗೆ ತೀರ ಕಷ್ಟವೇನು ಆಗಲಿಲ್ಲ. ಏಕೆಂದರೆ ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ಇಲ್ಲಿವರೆಗೂ ಲೈವ್ ನಲ್ಲಿ ಹೇಗಿರುತ್ತಿದ್ದೆನೋ ಅದೇ ರೀತಿ ನನ್ನ ಪಾತ್ರವಿರುತ್ತದೆ. ತುಂಬಾ ವ್ಯತ್ಯಾಸವಿಲ್ಲದಿದ್ದರೂ, ಇಲ್ಲಿ ಕಥೆಗೆ ತಕ್ಕಂತೆ ಪಾತ್ರ ಸಾಗುತ್ತದೆ.

4. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಇದೆಯಾ?
ನನಗೆ ರಂಗಭೂಮಿ ಹಿನ್ನೆಲೆ ಇಲ್ಲದಿದ್ದರೂ ಕಾಲೇಜು ದಿನಗಳಲ್ಲಿ ನಾಟಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ಗೆಳೆಯರ ಜೊತೆ ಸ್ಕಿಟ್ ಗಳನ್ನು ಮಾಡುತ್ತಿದ್ದೆವು. ಈಗ ಬಣ್ಣಹಚ್ಚಿದ ಮೇಲೆ ರಂಗಭೂಮಿ ಬಗ್ಗೆ ಗೊತ್ತಾಗುತ್ತಿದೆ. ಏಕೆಂದರೆ ಚಿತ್ರತಂಡದಲ್ಲಿರುವ ಬಹುತೇಕ ಕಲಾವಿದರು ರಂಗಭೂಮಿ ಹಿನ್ನೆಲೆಯುಳ್ಳವರು.

Anchor actress Sheethal Shetty interview

5. ಬಣ್ಣದ ಜಗತ್ತಿನಲ್ಲಿ ನಿಮ್ಮ ಕುಟುಂಬ ಹಿನ್ನೆಲೆ ಏನಾದರೂ ಉಂಟೆ?
ನಮ್ಮ ಕುಟುಂಬದವರು ಯಾರೂ ಸಿನಿಮಾ ಜಗತ್ತಿನೊಂದಿಗಾಗಲಿ, ಮಾಧ್ಯಮದೊಂದಿಗಾಗಲಿ ಇಲ್ಲ. ಯಾವುದೇ ಸಾರ್ವಜನಿಕ ಕ್ಷೇತ್ರದಲ್ಲೂ ಇಲ್ಲ ಎಂದು ಹೇಳಬಹುದು.

6. ನಟನೆ ಹಾಗೂ ನಿರೂಪಣೆ ಇವೆರಡರಲ್ಲಿ ಯಾವುದು ಸುಲಭ ಯಾವುದು ಕಷ್ಟ?
ನನ್ನ ಮಟ್ಟಿಗೆ ನಿರೂಪಣೆ ಸುಲಭ. ಈ ಕ್ಷೇತ್ರದಲ್ಲಿ ಸಾಕಷ್ಟು ಕಾಲದಿಂದ ಅನುಭವ ಇರುವುದರಿಂದ ಈ ಕ್ಷೇತ್ರ ನನಗೆ ಕಷ್ಟ ಅನ್ನಿಸುವುದಿಲ್ಲ. ಎಷ್ಟೆಲ್ಲಾ ಆರಾಮವಾಗಿ ನಿರೂಪಿಸುತ್ತಿದ್ದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅಲ್ಲಿ ನಿರರ್ಗಳವಾಗಿ ಮಾತನಾಡುತ್ತಿದೆ. ನಟನೆ ವಿಚಾರಕ್ಕೆ ಬಂದರೆ ಸ್ವಲ್ಪ ಕಷ್ಟ ಎಂದೇ ಹೇಳಬೇಕೆ. ಅವರಿಗೆ ಬೇಕಾದಂತಹ ಭಾವನೆಗಳನ್ನು ಇಲ್ಲಿ ಅಭಿವ್ಯಕ್ತಪಡಿಸಬೇಕಾಗುತ್ತದೆ. ಸ್ವಲ್ಪ ನರ್ವಸ್ ಸಹ ಆಗುತ್ತೇನೆ. ಆರಂಭದ ಎರಡು ಮೂರು ದಿನ ಬಹಳ ಕಷ್ಟವಾಯಿತು. ಹೊಂದಿಕೊಳ್ಳುವಂತಹ ಸಾಮರ್ಥ್ಯ ನನಗೆ ಮೊದಲಿನಿಂದಲೂ ಇರುವುದಕ್ಕೋ ಏನೋ ಬರುಬರುತ್ತಾ ಸರಿಹೋಯಿತು. ಈಗ ಪರ್ವಾಗಿಲ್ಲ ಅನ್ನಿಸುತ್ತಿದೆ.

7. ಈ ಪಾತ್ರಕ್ಕಾಗಿ ಏನಾದರೂ ಸಿದ್ಧತೆ ಮಾಡಿಕೊಂಡಿದ್ರಾ?
ಬಹುಶಃ ಚಿತ್ರತಂಡ ನನಗೆ ಆ ರೀತಿ ಏನಾದರೂ ಹೇಳಿದ್ದರೆ ಸಿದ್ಧತೆ ಮಾಡಿಕೊಳ್ಳುತ್ತಿದ್ದನೇನೋ. ಆದರೆ ಅವರು ನೀವು ಹೇಗಿದ್ದೀರೋ ಅದೇ ರೀತಿ ಪಾತ್ರ ಎಂದು ಹೇಳಿದ ಕಾರಣ ಆ ರೀತಿಯ ವಿಶೇಷ ಸಿದ್ಧತೆಗಳನ್ನೇನು ಮಾಡಿಕೊಳ್ಳಲಿಲ್ಲ. ನನ್ನದು ನಗುಮುಖವಾದ ಕಾರಣ ಇಲ್ಲಿ ಅದನ್ನು ಆದಷ್ಟು ತಡೆಹಿಡಿದುಕೊಳ್ಳಬೇಕಾಗಿದೆ. ನಗುವನ್ನು ಆದಷ್ಟು ಕಂಟ್ರೋಲ್ ಮಾಡಿಕೊಳ್ಳುವುದೇ ನನ್ನ ಸಿದ್ಧತೆ ಎಂದು ಹೇಳಬಹುದು. ಕಾರಣ ಚಿತ್ರದಲ್ಲಿ ನನ್ನದು ಗಂಭೀರ ಪಾತ್ರ. ಡೈಲಾಗ್ ಭಾಗ ಇದ್ದಾಗ ಅದರ ಹಿಂದಿನ ದಿನ ಕುಳಿತು ಸ್ವಲ್ಪ ಪ್ರಾಕ್ಟೀಸ್ ಮಾಡುತ್ತಿದ್ದೇನೆ.

Next »

« Previous

More from Filmibeat

English summary
Tv9 Kannada popular anchor Sheethal Shetty now debuts as actress in the Kannada movie 'Ulidavaru Kandante'. Sheethal shares her thoughts, experience, past, present, future with Oneindia. Here are some highlights of the interview.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X