»   » ನಟರಿಬ್ಬರಿಗೆ ಪದ್ಮಶ್ರೀ ವಾಪಸ್ ಮಾಡಲು ಕೋರ್ಟ್ ಆದೇಶ

ನಟರಿಬ್ಬರಿಗೆ ಪದ್ಮಶ್ರೀ ವಾಪಸ್ ಮಾಡಲು ಕೋರ್ಟ್ ಆದೇಶ

Posted By:
Subscribe to Filmibeat Kannada

ಹೆಸರಾಂತ ಇಬ್ಬರು ನಟರಿಗೆ ಆಂಧ್ರಪ್ರದೇಶ ಹೈಕೋರ್ಟ್ ಚಾಟಿ ಬೀಸಿದೆ. ಪದ್ಮಶ್ರೀ ಗೌರವವನ್ನು ಈ ಕೂಡಲೇ ಹಿಂದಿರಿಗಿಸುವಂತೆ ತೆಲುಗು ನಟರಾದ ಡಾ.ಮೋಹನ್ ಬಾಬು ಮತ್ತು ಡಾ. ಬ್ರಹ್ಮಾನಂದಂ ಅವರಿಗೆ ಕೋರ್ಟ್ ಸೂಚಿಸಿದೆ.

ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ ಗೌರವವನ್ನು ಸರಿಯಾಗಿ ಇಟ್ಟುಕೊಳ್ಳದ ಹಿನ್ನಲೆಯಲ್ಲಿ ಆಂಧ್ರ ಕೋರ್ಟ್ ಈ ಇಬ್ಬರು ನಟರಿಂದ ಗೌರವವನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿದೆ.

ಈ ಇಬ್ಬರೂ ನಟರು ಚಲನಚಿತ್ರಗಳಲ್ಲಿ ತಮ್ಮ ಹೆಸರಿನ ಮುಂದೆ ಪದ್ಮಶ್ರೀ ಹಾಕಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. (ಪುನೀತ್ 'ನಿನ್ನಿಂದಲೇ' ಚಿತ್ರದಲ್ಲಿ ಗಿನ್ನಿಸ್ ದಾಖಲೆಯ ಹಾಸ್ಯನಟ)

Andhra court orders to return Padam award from Mohan Babu and Brahmanandam

ಭಾರತ ಸರಕಾರದ ನಿಯಮ 18 (1) ಪ್ರಕಾರ ಪದ್ಮಶ್ರೀ ಗೌರವವನ್ನು ಪುಸ್ತಕ, ಬ್ಯಾನರ್, ಪೋಸ್ಟರ್ ಮುಂತಾದ ಕಡೆ ತಮ್ಮ ಹೆಸರಿನ ಮುಂದೆ ಹಾಕುವಂತಿಲ್ಲ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಮೋಹನ್ ಬಾಬು ಮತ್ತು ಬ್ರಹ್ಮಾನಂದಂ ಅವರಿಗೆ ಪದ್ಮಶ್ರೀ ಹಿಂದಿರುಗಿಸುವಂತೆ ಕೋರ್ಟ್ ಈ ಆದೇಶ ನೀಡಿದೆ.

ಸರಕಾರದ ನಿಯಮವನ್ನು ಇಬ್ಬರು ನಟರೂ ಉಲ್ಲಂಘಿಸುತ್ತಿದ್ದಾರೆ. ಹಾಗಾಗಿ, ಮೋಹನ್ ಬಾಬು ಅವರಿಗೆ 2007ರಲ್ಲಿ ಮತ್ತು ಬ್ರಹ್ಮಾನಂದಂ ಅವರಿಗೆ 2009ರಲ್ಲಿ ನೀಡಿದ ಪದ್ಮಶ್ರೀ ಗೌರವವನ್ನು ಹಿಂದಕ್ಕೆ ಪಡೆಯ ಬೇಕೆಂದು ಬಿಜೆಪಿ ಮುಖಂಡ ಇಂದ್ರಸೇನ ರೆಡ್ಡಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

English summary
Andhra Pradesh court orders to return Padam award from Telugu actor Mohan Babu and Brahmanandam.
Please Wait while comments are loading...