For Quick Alerts
  ALLOW NOTIFICATIONS  
  For Daily Alerts

  ಹೊಸಬರ ವಿನೂತನ ಪ್ರಯೋಗದ 'ಆನೆಬಲ' ಚಿತ್ರದ ಟ್ರೈಲರ್ ಬಿಡುಗಡೆ

  |

  ಹೊಸಬರ ವಿನೂತನ ಪ್ರಯೋಗದ 'ಆನೆಬಲ' ಚಿತ್ರದ ಟ್ರೈಲ್ಲರ್ ಬಿಡುಗಡೆಯಾಗಿದೆ. ಇಡೀ ಟ್ರೈಲ್ಲರ್ ಹೊಚ್ಚ ಹೊಸತನದಿಂದ ಕೂಡಿದ್ದು, ಆನೆಬಲ ಸಿನಿಮಾ ನೋಡಬೇಕು ಅನ್ನುವ ಕುತೂಹಲವನ್ನ ಹುಟ್ಟು ಹಾಕಿದೆ. ಜನಪದ, ಪ್ರಾಕೃತಿಕ ಸೊಬಗು ಹಾಗೂ ಗ್ರಾಮ ಸಂಸ್ಕೃತಿಯನ್ನ ಹೊತ್ತು ತರುತ್ತಿರುವ ಆನೆಬಲ ಎಲ್ಲರಿಗೂ ಇಷ್ಟ ಆಗುವ ಸೂಚನೆಗಳನ್ನ ಬಿಟ್ಟಿಕೊಟ್ಟಿದೆ.

  ಈಗಾಗಲೇ ಸಿನಿಮಾದ ಎರಡು ಹಾಡುಗಳು ಹಿಟ್ ಹಾಗಿದ್ದು ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ಕೊಟ್ಟಿದೆ. ಸತತ ಎರಡು ವರ್ಷಗಳ ಚಿತ್ರತಂಡ ಪರಿಶ್ರಮ ಹಾಕಿ, ನೂತನ ಫೀಲ್ ಕಟ್ಟಿಕೊಡುತ್ತಿದೆ. ಚಿತ್ರದ ಸಾಹಿತ್ಯ ಮತ್ತು ಸಂಗೀತ ಹಾಗೂ ಚಿತ್ರೀಕರಣವೇ ಫ್ರೆಶ್ ಅನಿಸುತ್ತಿದೆ.

  ಈ ತಿಂಗಳ ಕೊನೆಯಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಆನೆಬಲ ಈ ದಶಕದಲ್ಲಿ ಪ್ರಥಮ ಬಾರಿಗೆ ಯಾರು ಈವರೆಗೆ ಹೇಳಿರದ ಕತೆ ಚಿತ್ರಕತೆಯನ್ನ ಹೊಂದಿದೆ. ಜನತಾ ಟಾಕೀಸ್ ಸಂಸ್ಥೆ ಮೂಲಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ನಿರ್ಮಿಸಿರುವ ಚಿತ್ರವೂ ಒಟ್ಟು ನಾಲ್ಕು ಹಾಡುಗಳನ್ನ ಹೊಂದಿದೆ.

  ಸಿದ್ದಸೂತ್ರಗಳನ್ನ ಬದಿಗೊತ್ತಿ ನೈಜತೆ ಹೊತ್ತುಕೊಟ್ಟು ರಿಯಾಲ್ ಆಗಿ ಜಾತ್ರೆಲಿ ಶೂಟ್ ಮಾಡಿದ್ದಾರೆ. ಹಾಗೇ ನೈಜತೆಯನ್ನು ಕಾಪಾಡಿಕೊಳ್ಳಲು ಮುದ್ದೆ ನುಂಗುವ ಸ್ಪರ್ಧೆಯನ್ನ ಆಯೋಜಿಸಿ ಶೂಟ್ ಮಾಡಿರುವುದು ಒಂದು ವಿಶೇಷ ಆದರೆ ಮತ್ತೊಂದು ಎಲ್ಲ ಪಾತ್ರಗಳು ತರಬೇತಿ ಪಡೆದು ಅಭಿನಯಿಸುವಂತೆ ಅಭಿನಯಿಸಿದ್ದಾರೆ. ಆದರೆ ಅವರಾರು ತರಬೇತಿ ಪಡೆಯದೇ ನಿಜಜೀವನದಲ್ಲಿ ಅವರು ಯಾವ ರೀತಿ ಇರುತ್ತಾರೆ ಅಂತವರನ್ನೇ ಆಯಾಯ ಪಾತ್ರಗಳಿಗೆ ಹುಡುಕಿ ಚಿತ್ರತಂಡ ಕುಸುರಿ ಕೆಲಸವನ್ನ ಮಾಡಿ ಕನ್ನಡಕ್ಕೆ ಒಂದು ಒಳ್ಳೆ ಸಿನೆಮಾ ಕೊಡಲು ಶ್ರಮಪಟ್ಟಿದೆ.

  Ane Bala Kannada Movie Trailer Released

  ಇನ್ನೂ ಕತೆ ಚಿತ್ರಕತೆ ಸಂಭಾಷಣೆ ಬರೆದು ಪ್ರಥಮಬಾರಿಗೆ ನಿರ್ದೇಶನ ಮಾಡಿರುವ ಸೂನಗಹಳ್ಳಿ ರಾಜು ಅವರು ಸಿನೆಮಾವನ್ನ ಪ್ರೇಕ್ಷಕರು ಹೇಗೆ ರಿಸೀವ್ ಮಾಡುತ್ತಾರೆ ಅನ್ನುವ ಕುತೂಹಲ ಇಟ್ಟುಕೊಂಡು ಕಾಯುತ್ತಿದ್ದಾರೆ. ಯೋಗರಾಜ್ ಭಟ್ ಮತ್ತು ಡಾ.ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತವಿದೆ. ಸಾಗರ್, ರಕ್ಷಿತ , ಮಲ್ಲರಾಜು, ಉದಯ್ ಶ್ವೇತಾ, ಹರೀಶ್ ಶೆಟ್ಟಿ, ಚಿರಂಜೀವಿ, ಮುತ್ತುರಾಜು, ಗೌತಮ್ ಸೇರಿದಂತೆ ಅನೇಕ ಕಲಾವಿದರು ಅಭಿಯಿಸಿದ್ದಾರೆ.

  English summary
  Kannada movie Ane Bala movie trailer has released. the movie starring sagar, rakshitha, mallaraju in lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X