'ಆನೆಬಲ' ಸಿನಿಮಾ ಇದೇ ತಿಂಗಳ 28ಕ್ಕೆ ಬಿಡುಗಡೆ
'ಆನೆಬಲ' ಸಿನಿಮಾದ ಬಿಡುಗಡೆದ ದಿನಾಂಕ ನಿಗದಿಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ರಾಗಿ ಮುದ್ದೆಯ ಮೂಲಕ ಸುದ್ದಿ ಮಾಡಿದ್ದ ಸಿನಿಮಾ 'ಆನೆಬಲ'. ಸಿನಿಮಾದ ಪ್ರಮುಖ ಕಥಾವಸ್ತು ರಾಗಿ ಮುದ್ದೆಯಾಗಿದ್ದು, ಅದಕ್ಕೆ ತಕ್ಕ ಹಾಗೆ ಒಂದು ದೊಡ್ಡ ಗಾತ್ರದ ಮುದ್ದೆಯ ಮೂಲಕ ಚಿತ್ರತಂಡ ಗಮನ ಸೆಳೆದಿತ್ತು.
Recommended Video
ಟ್ರೇಲರ್ ಮತ್ತು ಹಾಡುಗಳ ನಂತರ ಸಿನಿಮಾವನ್ನು ಜನರ ಮುಂದೆ ತರಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಫೆಬ್ರವರಿ 28 ರಂದು 'ಆನೆಬಲ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ತಿಂಗಳು ಕನ್ನಡದಲ್ಲಿ ದಾಖಲೆಯ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಅದಕ್ಕೆ 'ಆನೆಬಲ' ಕೂಡ ಸೇರಿಕೊಂಡಿದೆ.
'ಆನೆಬಲ' ಸಿನಿಮಾವನ್ನು ಮಂಡ್ಯ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಳ್ಳಿ ಪರಿಸರದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಮುತ್ತುರಾಜ್, ಗೌತಮ್ ಕ್ವತತ್ತಿ, ಚಿರಂಜೀವಿ, ಮಂಜುಳಾ ಸಿನಿಮಾದಲ್ಲಿ ನಟಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಡುಗಳಲ್ಲಿ ಇದೆ. ಜನತಾ ಟಾಕೀಸ್ ಸಂಸ್ಥೆ ಮೂಲಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಸಿನಿಮಾದ ನಿರ್ಮಾಣ ಮಾಡಿದ್ದಾರೆ.
ಸೂನಗಹಳ್ಳಿ ರಾಜು ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕತೆ ಕೂಡ ಅವರದ್ದೇ ಆಗಿದೆ. ನೈಜತೆಗೆ ಒತ್ತು ನೀಡಿರುವ ನಿರ್ದೇಶಕರು ಆದಷ್ಟು ರಿಯಲಿಸ್ಟಿಕ್ ಆಗಿ ಶೂಟಿಂಗ್ ಮಾಡಿದ್ದಾರಂತೆ.


Click it and Unblock the Notifications











