For Quick Alerts
  ALLOW NOTIFICATIONS  
  For Daily Alerts

  ನಟಿ ನೇಹಾ ಧೂಪಿಯಾ ಪತಿ ಅಂಗದ್ ಬೇಡಿ ಸಿಟ್ಟಾಗಿದ್ದು ಯಾಕೆ.?

  By Harshitha
  |

  ಮಾಜಿ ಮಿಸ್ ಇಂಡಿಯಾ, ಬಾಲಿವುಡ್ ನಟಿ ನೇಹಾ ಧೂಪಿಯಾ ನಿನ್ನೆಯಷ್ಟೇ ತಮ್ಮ 38ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಪತಿ ಅಂಗದ್ ಸಿಂಗ್ ಬೇಡಿ ಜೊತೆಗೆ ನಿನ್ನೆ ಸರಳವಾಗಿ ತಮ್ಮ ಜನ್ಮದಿನವನ್ನ ನೇಹಾ ಧೂಪಿಯಾ ಆಚರಿಸಿಕೊಂಡರು.

  ಪತಿ ಅಂಗದ್ ಬೇಡಿ ಹಾಗೂ ಇಬ್ಬರು ಫ್ರೆಂಡ್ಸ್ ಜೊತೆಗೆ ನಟಿ ನೇಹಾ ಧೂಪಿಯಾ ನಿನ್ನೆ ಮಧ್ಯಾಹ್ನ ಮುಂಬೈನ ಹೋಟೆಲ್ ವೊಂದಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿ ಊಟ ಮುಗಿಸಿ ಹೊರಗೆ ಬರುವಾಗ ನೇಹಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕೆಲವರು ಮುಂದಾದರು.

  ಸದ್ದು ಮಾಡದೆ, ಸುದ್ದಿ ಆಗದೆ, ಸೈಲೆಂಟ್ ಆಗಿ ಮದುವೆ ಆದ ನೇಹಾ ಧೂಪಿಯಾ.!ಸದ್ದು ಮಾಡದೆ, ಸುದ್ದಿ ಆಗದೆ, ಸೈಲೆಂಟ್ ಆಗಿ ಮದುವೆ ಆದ ನೇಹಾ ಧೂಪಿಯಾ.!

  ಹೇಳಿ ಕೇಳಿ, ನಟಿ ನೇಹಾ ಧೂಪಿಯಾ ಈಗ ಗರ್ಭಿಣಿ. ಹೀಗಾಗಿ, ಪತ್ನಿ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಪತಿ ಅಂಗದ್ ಬೇಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವವರ ಮೇಲೆ ಸಿಡಿಮಿಡಿಗೊಂಡು ನೇಹಾ ಧೂಪಿಯಾರನ್ನ ಕರೆದುಕೊಂಡು ಹೋದರು.

  ಹೋಟೆಲ್ ಮುಂಭಾಗದಲ್ಲಿ ಅಂಗದ್ ಸಿಂಗ್ ಬೇಡಿ ಕಿರಿಕಿರಿಗೊಂಡ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  #angadbedi with mama to.be #nehadhupia @viralbhayani

  A post shared by Viral Bhayani (@viralbhayani) on

  ಮೂರು ತಿಂಗಳ ಹಿಂದೆ, ಅಂದ್ರೆ ಮೇ 10 ರಂದು ನಟ ಅಂಗದ್ ಸಿಂಗ್ ಬೇಡಿ ರವರೊಂದಿಗೆ ನೇಹಾ ಧೂಪಿಯಾ ವಿವಾಹ ಮಹೋತ್ಸವ ನೆರವೇರಿತ್ತು. ಸಿಖ್ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿರುವ ನೇಹಾ ಧೂಪಿಯಾ-ಅಂಗದ್ ಸಿಂಗ್ ಬೇಡಿ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  English summary
  Bollywood Actor Angad Bedi got irritated with fans who took selfies with his pregnant wife Neha Dhupia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X