ಫುಲ್ ಆ್ಯಕ್ಷನ್ ಮೂಡಲ್ಲಿ ಅಗ್ನಿ ಸಾಕ್ಷಿ ವೈಷ್ಣವಿ!
ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಸಿನಿಮಾರಂಗದಲ್ಲೂ ಸಕ್ರಿಯ ಆಗಿದ್ದಾರೆ. ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ವೈಷ್ಣವಿ ಅವರು ಸದ್ಯ ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗಿಳಿದ್ದಾರೆ. 'ಬಹುಕೃತ ವೇಷಂ' ಎನ್ನುವ ಸಿನಿಮಾದಲ್ಲಿ ಪ್ರಸ್ತುತ ಅಭಿನಯಿಸುತ್ತಿದ್ದಾರೆ.
ಈ ಚಿತ್ರದಲ್ಲಿ ವೈಷ್ಣವಿಗೆ ನಾಯಕನಾಗಿ ಶಶಿಕಾಂತ್ ಅಭಿನಯಿಸುತ್ತಿದ್ದಾರೆ. ಚಿತ್ರದ ಟೈಟಲ್ ಹೇಳುವ ಹಾಗೆ ಸಿನಿಮಾದಲ್ಲಿ ವೈಷ್ಣವಿ ಅವರ ಪಾತ್ರದಲ್ಲಿ ಹಲವು ಟ್ವಿಸ್ಟ್‌ಗಳು ಇವೆ ಅಂತೆ. ಪ್ರಶಾಂತ್ ಎಳ್ಳಂಪಳ್ಳಿ ಈ ಚಿತ್ರದ ನಿರ್ದೇಶಕರು. ಇವರು ಈ ಹಿಂದೆ 'ಗೌಡ್ರು ಸೈಕಲ್' ಚಿತ್ರ ನಿರ್ದೇಶನ ಮಾಡಿದ್ದರು.
ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಮುಖ್ಯ ಅಂಶವಾಗಿ ಇರಲಿದೆ. ಊಹಿಸಲಾಗದ ರೀತಿಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಮಾಡಲಾಗಿದೆಯಂತೆ. ಕ್ಲೈಮ್ಯಾಕ್ಸ್‌ನಲ್ಲಿ ನಾಲ್ಕುವರೆ ನಿಮಿಷದ ಒಂದೇ ಸಂಭಾಷಣೆ ಇದೆಯಂತೆ. ಶಶಿಕಾಂತ್ ಹಾಗೂ ವೈಷ್ಣವಿ ಗೌಡ ಪೈಪೋಟಿ ಮೇಲೆ ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ವಿಜಯ ಪ್ರಕಾಶ್ ರವರು ಹಾಡಿರುವ 'ಮಾತುಕತೆ ನಿಂತ ಕಥೆ' ಹಾಡು ಹಾಗೂ ನಿರ್ದೇಶಕ ಚೇತನ್ ಕುಮಾರ್ ಬರೆದ 'ಮಾಮಾ ಹುಷಾರು' ಹಾಡುಗಳು ಈಗಾಗಲೇ ಬಿಡುಗಡೆ ಆಗಿದೆ. ವೈಶಾಖ್ ವಿ ಭಾರ್ಗವ್, ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿರಣ್ ಕೃಷ್ಣ ಮೂರ್ತಿಯವರು ಇಡೀ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ವನ್ನು ನೀಡಿದ್ದಾರೆ. ಛಾಯಾಗ್ರಾಹಕ ಹರ್ಷಕುಮಾರ್ ಗೌಡ ಚಿತ್ರತಂಡದಲ್ಲಿ ಇದ್ದಾರೆ.



Click it and Unblock the Notifications











