ಸುದೀಪ್, ಪುನೀತ್ ಗೆ ಚಾಲೆಂಜ್ ಹಾಕಿದ ಅನಿಲ್ ಕುಂಬ್ಳೆ

Recommended Video

ಸುದೀಪ್, ಪುನೀತ್ ಗೆ ಚಾಲೆಂಜ್ ಹಾಕಿದ ಅನಿಲ್ ಕುಂಬ್ಳೆ | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ ಈ ಬಾರಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕವನ ಓದುವ ಮೂಲಕ ಕನ್ನಡ ಸೆಲಿಬ್ರಿಟಿಗಳು ರಾಜ್ಯೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ.

ಕವನ ಓದುವ ಚಾಲೆಂಜ್ ಈಗ ಖ್ಯಾತ ಕ್ರಿಕೆಟ್ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಹತ್ತಿರ ಬಂದಿದೆ. ನಟ ಗಣೇಶ್, ಅನಿಲ್ ಕುಂಬ್ಳೆಗೆ ಈ ಸವಾಲು ಹಾಕಿದ್ದರು. ಇದನ್ನು ಯಶಸ್ಸಿಯಾಗಿ ಪೂರೈಸಿದ ಕುಂಬ್ಳೆ ನಂತರ, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಗಾಯಕ ವಿಜಯ್ ಪ್ರಕಾಶ್ ರಿಗೆ ಚಾಲೆಂಜ್ ನೀಡಿದ್ದಾರೆ.

ಅನಿಲ್ ಕುಂಬ್ಳೆ, ರಾಷ್ಟ್ರಕವಿ ಕುವೆಂಪುರವರ ಕವನ ಓದಿದ್ದಾರೆ. ''ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ'' ಎಂದು ಹಾಡಿದ್ದಾರೆ. ಈ ಮೂಲಕ ತಮ್ಮ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಟದ ತಮ್ಮ ಸಾಧನೆಯಿಂದ ಕರುನಾಡಿಗೆ ಹೆಮ್ಮೆ ತಂದಿರುವ ಕುಂಬ್ಳೆ ಇದೀಗ ಕವನ ಓದಿದ್ದಾರೆ.

Anil Kumble Gave Kavana Challenge To Sudeep, Puneeth Rajkumar And Vijay Prakash

''ಈ ಸವಾಲನ್ನು ಮುಂದುವರೆಸಬೇಕು ಎಂದು ನನ್ನ ಸ್ನೇಹಿತರಾದ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ವಿಜಯ ಪ್ರಕಾಶ್ ರಿಗೆ ಕೇಳಿಕೊಳ್ಳುತ್ತೇನೆ.'' ಎಂದ ಕುಂಬ್ಳೆ, ವಿಜಯ ಪ್ರಕಾಶ್ ಹಾಡಿನ ಮೂಲಕವೇ ಈ ಚಾಲೆಂಜ್ ಪೂರ್ಣಗೊಳಿಸಬೇಕು ಎಂದಿದ್ದಾರೆ.

ಅಂದಹಾಗೆ, ಕವನ ಚಾಲೆಂಜ್ ನಟ ಯಶ್ ಮೂಲಕ ಪ್ರಾರಂಭ ಆಗಿತ್ತು. ಹಿರಿಯ ಪತ್ರಕರ್ತರೊಬ್ಬರು ನೀಡಿದ ಸವಾಲನ್ನು ಯಶ್ ಸ್ವೀಕರ ಮಾಡಿದ್ದರು. ನಂತರ ಅದನ್ನು ನಿರ್ದೇಶಕ ನಾಗಾಭರಣ, ಗೀತಾ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್, ಗೌಸ್ ಪೀಸ್, ಹಾಸ್ಯ ನಟ ಚಿಕ್ಕಣ್ಣ, ರವಿಶಂಕರ್ ಗೌಡ ಹಾಗೂ ರವಿಶಂಕರ್ ರಿಗೆ ನೀಡಿದ್ದರು.

More from Filmibeat

English summary
Anil Kumble gave kavana challenge to Sudeep, Puneeth Rajkumar and Vijay Prakash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X