ಶಿವಣ್ಣ ಭೇಟಿ ಮಾಡಿ ಸರ್ಪ್ರೈಸ್ ನೀಡಿದ ಕ್ರಿಕೆಟಿಗ ಅನಿಲ್ ಕುಂಬ್ಳೆ
Recommended Video
ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿರುವ ನಟ ಶಿವರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನ (July 12) ಅಲ್ಲೇ ಆಚರಿಸಿಕೊಂಡಿದ್ದಾರೆ. ಫ್ಯಾಮಿಲಿ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಸೆಂಚುರಿ ಸ್ಟಾರ್, ಪ್ರತಿ ವರ್ಷವೂ ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದರು. ಆದರೆ ಈ ಸಲ ಅಭಿಮಾನಿಗಳನ್ನ ಮಿಸ್ ಮಾಡಿಕೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವಣ್ಣ ಬೆಂಗಳೂರಿನಲ್ಲಿ ಇಲ್ಲವಾದರೂ ಅವರ ಅಭಿಮಾನಿಗಳು ಮಾತ್ರ ಹ್ಯಾಟ್ರಿಕ್ ಹೀರೋ ಹೆಸರಲ್ಲಿ ರಾಜ್ಯಾದ್ಯಂತ ಬರ್ತಡೇ ಆಚರಿಸಿದ್ದಾರೆ. ಇನ್ನು ವಿಶೇಷ ಅಂದ್ರೆ ಲಂಡನ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶಿವಣ್ಣ ಅವರಿಗೆ, ಕ್ರಿಕೆಟಿಗ ಅನಿಲ್ ಕುಂಬ್ಳೆ ಸರ್ಪ್ರೈಸ್ ನೀಡಿದ್ದಾರೆ.

ಹುಟ್ಟುಹಬ್ಬದ ದಿನವೇ ಶಿವರಾಜ್ ಕುಮಾರ್ ದಂಪತಿಯನ್ನ ಭೇಟಿ ಮಾಡಿ ಅವರ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನ ಸ್ವತಃ ಶಿವಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿಗಷ್ಟೆ ಶಿವರಾಜ್ ಕುಮಾರ್ ಅಧಿಕೃತವಾಗಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಎಂಟ್ರಿಯಾಗಿದ್ದರು. ತಮ್ಮ ಶಸ್ತ್ರ ಚಿಕಿತ್ಸೆಯನ್ನ ಯಶಸ್ವಿಯಾಗಿ ಮುಗಿಸಿದ ಬಳಿಕ ಮೊದಲ ಫೋಟೋ ಶೇರ್ ಮಾಡಿದ್ದ ಸೆಂಚುರಿ ಸ್ಟಾರ್ ಸ್ನೇಹಿತ ಅನಿಲ್ ಕುಂಬ್ಳೆ ಭೇಟಿ ಮಾಡಿದ್ದ ಸಂದರ್ಭವನ್ನ ಹಂಚಿಕೊಂಡಿದ್ದಾರೆ.
ಸದ್ಯ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಹೀಗಾಗಿ, ಅನಿಲ್ ಕುಂಬ್ಳೆ ಅಲ್ಲಿಗೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಶಿವಣ್ಣ ಅವರನ್ನ ಭೇಟಿ ಮಾಡಿ, ಬರ್ತಡೇ ವಿಶ್ ಮಾಡಿರುವುದು ವಿಶೇಷ.


Click it and Unblock the Notifications











