For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಪುತ್ಥಳಿ ಧ್ವಂಸ ಮಾಡಿದ ವೃತ್ತದಲ್ಲೇ ಮತ್ತೆ ನಿರ್ಮಾಣ: ಗುದ್ದಲಿ ಪೂಜೆ ನೆರವೇರಿಸಿದ ಅನಿರುದ್ಧ್

  |

  ಮಾಗಡಿ ರಸ್ತೆಯ ಟೋಲ್ ಗೇಟ್‌ ಬಳಿಯಿರುವ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ಸ್ಥಾಪನೆ ಮಾಡಿದ್ದ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಇದೀಗ, ಅದೇ ವೃತ್ತದಲ್ಲಿ ವಿಷ್ಣುದಾದಾನ ಪ್ರತಿಮೆ ಮತ್ತೆ ನಿರ್ಮಾಣವಾಗುತ್ತಿದೆ.

  ವಿಷ್ಣುವರ್ಧನ್ ಸ್ಮಾರಕ ಧ್ವಂಸ ಮಾಡಿದ ಕಿಡಿಗೇಡಿಗಳು | Vishnuvardhan Statue | Filmibeat Kannada

  ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಸೋಮವಾರ ಬೆಳಗ್ಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲೇ ವಿಷ್ಣು ಸ್ಮಾರಕ ನಿರ್ಮಿಸಬೇಕು ಎಂದು ಬೇಡಿಕೆಯಿಟ್ಟಿದ್ದ ಅಭಿಮಾನಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಂದ ಸಮ್ಮತಿ ಸಹ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆ ಅದೇ ವೃತ್ತದಲ್ಲಿ ವಿಷ್ಣು ಪ್ರತಿಮೆಯನ್ನು ಪುನರ್‌ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಓದಿ....

  ಅದೇ ವೃತ್ತ, ಬೇರೆ ಸ್ಥಳದಲ್ಲಿ ವಿಷ್ಣು ಪ್ರತಿಮೆ

  ಅದೇ ವೃತ್ತ, ಬೇರೆ ಸ್ಥಳದಲ್ಲಿ ವಿಷ್ಣು ಪ್ರತಿಮೆ

  ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಆಗಿರುವ ಸ್ಥಳದಿಂದ 50 ಮೀಟರ್ ದೂರದಲ್ಲಿ ಮತ್ತೊಂದು ಸ್ಥಳವನ್ನು ಗುರುತಿಸಿ, ಅಲ್ಲಿ ವಿಷ್ಣು ಪುತ್ಥಳಿ ನಿರ್ಮಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಪುತ್ಥಳಿ ನಿರ್ಮಾಣ ಕಾರ್ಯ ಸಹ ಆರಂಭವಾಗಿದೆ. ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರು ಸೋಮವಾರ ಬೆಳಗ್ಗೆ ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ.

  ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ಕಿಡಿಗೇಡಿಗಳನ್ನು ಶಿಕ್ಷಿಸಿ ಎಂದ ಅನಿರುದ್ಧವಿಷ್ಣುವರ್ಧನ್ ಪ್ರತಿಮೆ ಧ್ವಂಸ: ಕಿಡಿಗೇಡಿಗಳನ್ನು ಶಿಕ್ಷಿಸಿ ಎಂದ ಅನಿರುದ್ಧ

  ಡಿಸೆಂಬರ್ 30ಕ್ಕೆ ಪ್ರತಿಮೆ ಅನಾವರಣ

  ಡಿಸೆಂಬರ್ 30ಕ್ಕೆ ಪ್ರತಿಮೆ ಅನಾವರಣ

  ಡಿಸೆಂಬರ್ 28 ರಂದು ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಿರ್ಮಾಣವಾಗಿದ್ದು, ಡಿಸೆಂಬರ್ 30 ರಂದು ಈ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇನ್ನೊಂದೇ ದಿನದಲ್ಲಿ ಮಾಗಡಿ ರಸ್ತೆಯ ಟೋಲ್ ಗೇಟ್‌ ಬಳಿಯಿರುವ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ಮತ್ತೆ ವಿಷ್ಣು ಪ್ರತಿಮೆ ತಲೆ ಎತ್ತಲಿದೆ.

  ಸಚಿವರ ಒಪ್ಪಿಗೆ ಸಿಕ್ಕಿದೆ

  ಸಚಿವರ ಒಪ್ಪಿಗೆ ಸಿಕ್ಕಿದೆ

  ಸುಮಾರು ಆರು ಅಡಿ ಎತ್ತರದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಸ್ಥಾಪಿಸಲಾಗುತ್ತದೆ ಎಂದು ವಿಷ್ಣು ಅಭಿಮಾನಿಗಳು ಮಾಹಿತಿ ನೀಡಿದ್ದಾರೆ. ಅದೇ ವೃತ್ತದಲ್ಲಿ ಪ್ರತಿಮೆ ನಿರ್ಮಿಸಲು ಸಚಿವ ವಿ ಸೋಮಣ್ಣ ಅವರು ಸಹ ಒಪ್ಪಿಗೆ ನೀಡಿದ್ದು, ಪುತ್ಥಳಿ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

  ವಿಷ್ಣು ಸತ್ತ ಮೇಲೂ ನಿಲ್ಲದ ಅಪಮಾನ: ಮಾಗಡಿ ರಸ್ತೆಯಲ್ಲಿ ದಾದಾ ಪುತ್ಥಳಿ ಧ್ವಂಸವಿಷ್ಣು ಸತ್ತ ಮೇಲೂ ನಿಲ್ಲದ ಅಪಮಾನ: ಮಾಗಡಿ ರಸ್ತೆಯಲ್ಲಿ ದಾದಾ ಪುತ್ಥಳಿ ಧ್ವಂಸ

  ಆರೋಪಿಗಳನ್ನು ಬಂಧಿಸಿ

  ಆರೋಪಿಗಳನ್ನು ಬಂಧಿಸಿ

  ಈ ಹಿಂದೆ ವಿಷ್ಣು ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿ ವಿಷ್ಣು ಸೇನೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ನಟ ಸುದೀಪ್, ಜಗ್ಗೇಶ್, ದರ್ಶನ್ ಸೇರಿದಂತೆ ಹಲವು ಸ್ಟಾರ್ ನಟರು ಸಹ ಈ ಘಟನೆಯನ್ನು ಖಂಡಿಸಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿ ಎಂದು ಆಗ್ರಹಿಸಿದ್ದಾರೆ.

  English summary
  Kannada actor Aniruddh Lays Foundation Stone for Rebuilding Dr Vishnuvardhan Statue at Magadi Road.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X