For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್; ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ನಟ ಅನಿರುದ್ಧ

  |

  ಸ್ಯಾಂಡಲ್ ವುಡ್ ನಟ ಅನಿರುದ್ಧ್ ಸದ್ಯ ಚಿತ್ರೀಕರಣದಿಂದ ಕೊಂಚ ಬ್ರೇಕ್ ಪಡೆದು ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಅನಿರುದ್ಧ ಜೊತೆ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಹ ಮಾಲ್ಡೀವ್ ಪ್ರವಾಸಕ್ಕೆ ತೆರಳಿದ್ದಾರೆ.

  ಸುಮಾರು ಒಂದು ವಾರದಿಂದ ಅನಿರುದ್ಧ ಕುಟುಂಬ ಮಾಲ್ಡೀವ್ಸ್ ಪ್ರವಾಸ ನಲ್ಲಿ ಬೀಡುಬಿಟ್ಟಿದ್ದಾರೆ. ಅಂದಹಾಗೆ ಇತ್ತೀಚಿಗೆ ಸಾಕಷ್ಟು ಸೆಲೆಬ್ರಿಟಿಗಳು ಮಾಲ್ಡೀವ್ಸ್ ಕಡೆ ಪಯಣ ಬೆಳೆಸಿದ್ದಾರೆ. ಕನ್ನಡದ ನಟಿಯರಾದ ಶರ್ಮಿಳಾ ಮಾಂಡ್ರೆ, ಪ್ರಣಿತಾ ಸೇರಿದಂತೆ ಬಾಲಿವುಡ್ ಮತ್ತು ಬೇರೆ ಬೇರೆ ಭಾಷೆಯ ಅನೇಕ ನಟಿಮಣಿಯರು ಮಾಲ್ಡೀವ್ಸ್ ಪ್ರವಾಸ ಹೋಗಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಇದೀಗ ಅನಿರುದ್ಧ ಕುಟುಂಬದ ಸರದಿ..

  ಸಮಾಜಮುಖಿ ಕೆಲಸ ಮಾಡುತ್ತಿರುವ ನಟ ಅನಿರುದ್ಧ; ಸ್ವಚ್ಛತೆಗಾಗಿ ಅವರ ಮುಂದಿರುವ 11 ಯೋಜನೆಗಳಿವುಸಮಾಜಮುಖಿ ಕೆಲಸ ಮಾಡುತ್ತಿರುವ ನಟ ಅನಿರುದ್ಧ; ಸ್ವಚ್ಛತೆಗಾಗಿ ಅವರ ಮುಂದಿರುವ 11 ಯೋಜನೆಗಳಿವು

  ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ಅನಿರುದ್ಧ

  ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ಅನಿರುದ್ಧ

  ಲಾಕ್ ಡೌನ್ ನಿಂದ ಸುಮಾರು ಏಳೆಂಟು ತಿಂಗಳು ಮನೆಯಲ್ಲೇ ಕುಳಿತಿದ್ದ ಸೆಲೆಬ್ರಿಟಿಗಳು ಇದೀಗ ವಿದೇಶ ಪ್ರವಾಸ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಪ್ರಸಿದ್ಧಿ ಗಳಿಸಿರುವ ಅನಿರುದ್ಧ ಕುಟುಂಬದ ಜೊತೆ ಮಾಲ್ಡೀವ್ ಪ್ರವಾಸದ ಜಾಲಿ ಮೂಡ್ ನಲ್ಲಿದ್ದಾರೆ.

  ಪ್ರವಾಸದ ಫೋಟೋವೈರಲ್

  ಪ್ರವಾಸದ ಫೋಟೋವೈರಲ್

  ಮಾಲ್ಡೀವ್ಸ್ ಪ್ರವಾಸದ ಫೋಟೋಗಳನ್ನು ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಕೂಬಾ ಡೈವಿಂಗ್ ಸೇರಿದಂತೆ ಪತ್ನಿ ಮಕ್ಕಳ ಜೊತೆ ಅನೇಕ ಗೇಮ್ ಗಳಲ್ಲಿ ಭಾಗಿಯಾಗಿದ್ದಾರೆ. ಅನಿರುದ್ಧ ಕುಟುಂಬದ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ.

  ನೀವಿಲ್ಲಿ ದಯವಿಟ್ಟು ಬರ್ಬೇಡಿ, ಅಭಿಮಾನಿಗಳು ಏನ್ ಮಾಡ್ತಾರೋ ಗೊತ್ತಿಲ್ಲ; ನಟ ಅನಿರುದ್ಧ ಆಕ್ರೋಶ

  ಹಬ್ಬಿದ್ದ ವದಂತಿಗೆ ತೆರೆ ಎಳೆದ ಅನಿರುದ್ಧ

  ಹಬ್ಬಿದ್ದ ವದಂತಿಗೆ ತೆರೆ ಎಳೆದ ಅನಿರುದ್ಧ

  ಇತ್ತೀಚಿಗೆ ಅನಿರುದ್ಧ್ ಬಗ್ಗೆ ವದಂತಿಯೊಂದು ವೈರಲ್ ಆಗಿತ್ತು. ಜೊತೆ ಜೊತೆಯಲಿ ನಟ ಧಾರಾವಾಹಿಯಿಂದ ಹೊರಹೋಗುತ್ತಿದ್ದಾರೆ, ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಅನಿರುದ್ಧ ಸ್ಪಷ್ಟನೆ ನೀಡುವ ಮೂಲಕ ಧಾರಾವಾಹಿ ಬಿಡುತ್ತಿಲ್ಲ, ಬಿಗ್ ಬಾಸ್ ಗೂ ಗೊತ್ತಿಲ್ಲ, ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಹೀಗೆ ಮುಂದುವರೆಯಲಿ ಎಂದು ಹೇಳಿ ವದಂತಿಗೆ ಬ್ರೇಕ್ ಹಾಕಿದ್ದಾರೆ.

  December 31 Rajinikanth ಜೀವನದಲ್ಲಿ ಮಹತ್ವದ ದಿನ | Filmibeat Kannada
  ಸಮಾಜಮುಖಿ ಕೆಲಸ ಮಾಡುತ್ತಿರುವ ಅನಿರುದ್ಧ

  ಸಮಾಜಮುಖಿ ಕೆಲಸ ಮಾಡುತ್ತಿರುವ ಅನಿರುದ್ಧ

  ನಟನೆ ಜೊತೆಗೆ ಅನಿರುದ್ಧ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅನಿರುದ್ಧ ಅವರಿಗೆ ಬಿಬಿಎಂಪಿ ಅಧಿಕಾರಿಗಳು ಸಹ ಸಾಥ್ ನೀಡುತ್ತಿದ್ದಾರೆ. ಎಲ್ಲರೂ ಪ್ರಯತ್ನ ಪಟ್ಟರೆ, ತಮ್ಮ ತಮ್ಮ ಬಡಾವಣೆಗಳನ್ನು ಸ್ವಚ್ಛ ಮಾಡಿಸೋದಕ್ಕೆ ಸ್ಥಳೀಯ ಅಧಿಕಾರಿಗಳ ಜೊತೆ ಪ್ರಯತ್ನಪಡಿ, ಅದಕ್ಕೆ ಯಶಸ್ಸು ಸಿಕ್ಕಿದ್ರೆ, ಫೇಸ್ ಬುಕ್ ಪೇಜ್ ನಲ್ಲಿ ಫೋಟೋ ಫೋಸ್ಟ್ ಮಾಡಿ' ಎಂದಿದ್ದಾರೆ.

  English summary
  Sandalwood Actor Anirudh enjoys a Vacation with Family at Maldivies photo goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X