ಅನಾರೋಗ್ಯದ ಬಗ್ಗೆ ಸುಳ್ಳು ಸುದ್ದಿ; ಸ್ಪಷ್ಟನೆ ನೀಡಿದ ನಟ ಅನಿರುದ್ಧ್

ಸದ್ಯ ಕನ್ನಡ ಕಿರುತೆರೆಯಲ್ಲಿ ಆರ್ಯವರ್ಧನ್ ಆಗಿ ಮಿಂಚುತ್ತಿರುವ ನಟ ಅನಿರುದ್ಧ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ಅವರೇ ಸ್ಪಷ್ಟನೆ ನೀಡಿದ್ದಾರೆ.

Recommended Video

ಸುಳ್ಳು ಸುದ್ದಿಯನ್ನು ನಂಬಬೇಡಿ ನನಗೇನೂ ಆಗಿಲ್ಲ ಎಂದ ನಟ ಅನಿರುದ್ಧ್ | Filmibeat Kannada

ನನಗೆ ಏನು ಆಗಿಲ್ಲ. ಆರೋಗ್ಯವಾಗಿದ್ದೀನಿ ಎಂದು ವಿಡಿಯೋ ಮೂಲಕ ಅನಿರುದ್ಧ್ ಮಾಹಿತಿ ಹಂಚಿಕೊಂಡಿದ್ದಾರೆ. ಅನಿರುದ್ಧ್ ಅವರಿಗೆ ಕೊರೊನಾ ಬಂದಿದೆ ಎನ್ನುವ ಸುದ್ದಿ ನೋಡಿ ಅನೇಕರು ಫೋನ್ ಮಾಡಿ ವಿಚಾರಿಸುತ್ತಿದ್ದಾರೆ, ತನಗೆ ಏನು ಆಗಿಲ್ಲ ಎಂದಿದ್ದಾರೆ.

'ನನಗೆ ಕೊರೊನಾ ಬಂದಿದೆ ಅಂತ ಅನೇಕರು ಫೋನ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನಗೆ ಕೊರೊನಾ ಬಂದಿದೆ ಅಂತ ಸುಳ್ಳು ಸುದ್ದಿ ಹಬ್ಬುತ್ತಿದೆ. ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಏನು ಆಗಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರುವಾಗ ನನಗೆ ಏನು ಆಗಲು ಸಾಧ್ಯವಿಲ್ಲ. ಜೊತೆಗೆ ಆ ಭಗವಂತ ಎಲ್ಲರನ್ನು ಕಾಪಾಡಲಿ, ಎಲ್ಲರಿಗೂ ಆರೋಗ್ಯ ಕೊಡಲಿ ಅಂತ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

'ನನಗೆ ಪರಿಚಯ ಇರುವವರು ಬೆಡ್, ಆಕ್ಸಿಜನ್, ಐಸಿಯು ಬೇಕು ಅಂತ ಕೇಳುತ್ತಿದ್ದಾರೆ. ನಾನು ಒಂದಿಷ್ಟು ಕರೆ ಮಾಡುತ್ತಿದ್ದೇನೆ. ತುಂಬಾ ಜನ ಪ್ರಯತ್ನ ಪಡುತ್ತಿದ್ದೇವೆ. ಬಹುಷ ಇದು ಅನಿರುದ್ಧ್ ಅವರಿಗೆಯೇ ಆಗಿದೆ ಎಂದು ಅಂದುಕೊಂಡಿರಬಹುದು. ದಯವಿಟ್ಟು ಯಾರು ಆತಂಕ ಪಡಬೇಡಿ' ಎಂದು ಹೇಳಿದ್ದಾರೆ.

Anirudh Jatkar clarifies about his health. He says im fine im not tested corona positive

'ಇಂಥ ಸಂದರ್ಭದಲ್ಲಿ ಒಟ್ಟಿಗೆ ಇರೋಣ, ಸಾಕಷ್ಟು ಜನರಿಗೆ ಅನೇಕರ ಪರಿಚಯ ಇರುತ್ತೆ. ಇಂದು ಆ ಪರಿಚಯದ ಅವಶ್ಯತೆ ಇದೆ. ವಸುಧೈವ ಕುಟುಂಬದ ಬಗ್ಗೆ ಹೇಳುತ್ತಿರುತ್ತೇನೆ, ನಾವೆಲ್ಲರೂ ಒಂದೇ ಕುಟುಂಬದವರು. ಇದನ್ನ ನಾವು ಈ ಸಮಯದಲ್ಲಿ ಅರ್ಥ ಮಾಡಿಕೊಂಡು, ಪರಸ್ಪರ ಸಹಾಯ ಮಾಡೋಣ. ನಿಮ್ಮಲ್ಲರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಹೇಳಿದ್ದಾರೆ' ವಿಡಿಯೋ ಮೂಲಕ ಹೇಳಿದ್ದಾರೆ.

More from Filmibeat

English summary
Actor Anirudh Jatkar clarifies about his health. He says i'm fine i'm not tested corona positive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X