For Quick Alerts
  ALLOW NOTIFICATIONS  
  For Daily Alerts

  94 ವರ್ಷದ ನಿವೃತ್ತ ಯೋಧನ ಕಷ್ಟಕ್ಕೆ ಮಿಡಿದ ಅನಿರುದ್ಧ್: ಪ್ರಧಾನಿಗೆ ಪತ್ರ

  |

  ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿರುವ ನಟ ಅನಿರುದ್ಧ್. ನಟನೆಯ ಜೊತೆಗೆ ಅನಿರುದ್ಧ ಉತ್ತಮ ಬರಹಗಾರ ಮತ್ತು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಆರ್ಯವರ್ಧನ್ ಆಗಿ ಎಲ್ಲರ ಮನ ಗೆದ್ದಿರುವ ಅನಿರುದ್ಧ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.

  ಯೋಧನ ಬೆಂಬಲಕ್ಕೆ ನಿಂತ ಆರ್ಯವರ್ಧನ್ ಮಾಡಿದ್ದೇನು ಗೊತ್ತಾ..?

  ಹೌದು, 94 ವರ್ಷ ನಿವೃತ್ತ ಯೋಧನಿಗೆ ಮನೆ ಇಲ್ಲ ಎನ್ನುವ ವಿಚಾರ ತಿಳಿದುಕೊಂಡ ಅನುರುದ್ಧ್, ಈ ಬಗ್ಗೆ ಒಂದು ಲೇಖನ ಬರೆದಿದ್ದರು. ಅಷ್ಟೆಯಲ್ಲ ಈಗ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಅಂದರೆ ಈ ಲೇಖನವನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಲಯಕ್ಕೆ ಇ-ಮೇಲ್ ಮಾಡಿದ್ದಾರೆ. ಮುಂದೆ ಓದಿ..

  ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?

  ಪ್ರಧಾನಿಗೆ ಅನಿರುದ್ಧ್ ಪತ್ರ

  ಪ್ರಧಾನಿಗೆ ಅನಿರುದ್ಧ್ ಪತ್ರ

  94 ವರ್ಷದ ನಿವೃತ್ತ ಯೋಧನ ಕಷ್ಟಕ್ಕೆ ಮಿಡಿದ ಅನಿರುದ್ಧ್ ಲೇಖನ ಬರೆದು ಸುಮ್ಮನಿರದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ ಮೇಲ್ ಮಾಡಿದ್ದಾರೆ. ಪ್ರಧಾನಿಗೆ ಮೇಲ್ ಮಾಡಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಅನಿರುದ್ಧ್ ಬರ್ತಡೇ ಪಾರ್ಟಿ ವಿಡಿಯೋ: ಅಳಿಯನೊಂದಿಗೆ ನಟಿ ಭಾರತಿ ಸೂಪರ್ ಡ್ಯಾನ್ಸ್ಅನಿರುದ್ಧ್ ಬರ್ತಡೇ ಪಾರ್ಟಿ ವಿಡಿಯೋ: ಅಳಿಯನೊಂದಿಗೆ ನಟಿ ಭಾರತಿ ಸೂಪರ್ ಡ್ಯಾನ್ಸ್

  ಅನಿರುದ್ಧ್ ಹೇಳಿದ್ದೇನು?

  ಈ ಬಗ್ಗೆ ನಟ ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಪ್ರಧಾನಿ ಅವರಿಗೆ ಮೇಲ್ ಮಾಡಿದ್ದೀನಿ. ಕಾರ್ಯನಿರ್ವಹಣೆಯ ಆಗುತ್ತೆ ಎನ್ನುವ ಆಶಯ" ಎನ್ನುವ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅನಿರುದ್ಧ್ ಈ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾಮೆಂಟ್ ಮಾಡಿ ಧನ್ಯವಾದ ತಿಳಿಸುತ್ತಿದ್ದಾರೆ.

  ಯಾರು ಆ ಯೋಧ?

  ಯಾರು ಆ ಯೋಧ?

  ಅನಿರುದ್ಧ್ ಯಾವ ಹಿರಿಯ ಯೋಧನ ಬಗ್ಗೆ ಮತನಾಡಿದ್ದಾರೆ ಅಂತ ಗೊತ್ತಾದರೆ ಅಚ್ಚರಿ ಪಡುತ್ತೀರಿ. 1943ರಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಷ್ ಸ್ಥಾಪಿಸಿದ ಆಝಾದ್ ಹಿಂದ್ ಪೌಜ್ ನಲ್ಲಿ ಸೇವೆ ಸಲ್ಲಿಸಿದ 94 ವರ್ಷದ ನಿವೃತ್ತ ಸೈನಿಕ ಸಿ.ಎಂ ಪಾಂಡಿಯಾರಾಜ್ ಅವರ ಬಗ್ಗೆ. ಪಾಂಡಿಯರಾಜ್ ಸದ್ಯ ತಮಿಳು ನಾಡಿನ ರಾಮನಾಥಪುರಮ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅನಿರುದ್ಧ್ ಪತ್ರಕ್ಕೆ ರಿಪ್ಲೈ ಬರುತ್ತಾ?ಪ್ರಧಾನಿ ಸ್ಪಂದಿಸುತ್ತಾರಾ?ಎನ್ನುವುದನ್ನು ಕಾದುನೋಡಬೇಕು.

  ಮೆಟ್ರೋ ರೈಲಿನಲ್ಲಿ ಅನಿರುದ್ಧ್ - ಮೇಘ ಶೆಟ್ಟಿ 'ಜೊತೆ ಜೊತೆಯಲಿ'ಮೆಟ್ರೋ ರೈಲಿನಲ್ಲಿ ಅನಿರುದ್ಧ್ - ಮೇಘ ಶೆಟ್ಟಿ 'ಜೊತೆ ಜೊತೆಯಲಿ'

  ಕಿರುತೆಯಲ್ಲಿ ಬ್ಯುಸಿ ಇರುವ ಅನಿರುದ್ಧ್

  ಕಿರುತೆಯಲ್ಲಿ ಬ್ಯುಸಿ ಇರುವ ಅನಿರುದ್ಧ್

  ಅನಿರುದ್ಧ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಆರ್ಯವರ್ದನ್ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಹೃದಯಗೆದ್ದಿದ್ದಾರೆ. ಸಿನಿಮಾದಲ್ಲಿ ಸಿಗದ ಖ್ಯಾತಿಯನ್ನು ಅನಿರುದ್ಧ್ ಕಿರುತೆರೆಯಲ್ಲಿ ಗಳಿಸಿದ್ದಾರೆ. ಅನಿರುದ್ಧ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  English summary
  Kannada Actor Anirudh request to Narendra Modi to built house for retired soldier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X