»   » ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ವಿಷ್ಣು ಪುತ್ರಿ-ಅನಿರುದ್ಧ್‌ ಮದುವೆ

ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ವಿಷ್ಣು ಪುತ್ರಿ-ಅನಿರುದ್ಧ್‌ ಮದುವೆ

Subscribe to Filmibeat Kannada

ಫೆಬ್ರವರಿ 17, ಭಾನುವಾರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಹೊಸ ನಾಯಕ ನಟ ಅನಿರುದ್ಧ್‌ ಹಾಗೂ ವಿಷ್ಣುವರ್ಧನ್‌ ದತ್ತು ಪುತ್ರಿ ಕೀರ್ತಿ ಮದುವೆ.

ತಾನು ಇಂಟೀರಿಯರ್‌ ಡೆಕೊರೇಟರ್‌ ಆಗಿದ್ದಾಗಲೇ ಅನಿರುದ್ಧ್‌ ಜತ್ಕರ್‌ ವಿಷ್ಣು ಅಳಿಯನಾಗಿ ಗೊತ್ತಾಗಿದ್ದರು. ಮುದ್ದು ಮುದ್ದಾಗಿರುವ ಈತ ಈಗ ಭರವಸೆ ಹುಟ್ಟಿಸಿರುವ ನಾಯಕ. ‘ಚಿತ್ರ’ದಲ್ಲಿ ನಾಯಕ ಪ್ರಸಾದ್‌ ಗೆಳೆಯನಾಗಿ ಮಿಂಚಿದ ಈತ ಚಿಟ್ಟೆ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ. ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಈತನ ಪೈಪ್‌ಲೈನ್‌ನಲ್ಲಿರುವ ಅತಿ ನಿರೀಕ್ಷೆಯ ಚಿತ್ರ ತುಂಟಾಟ.

ಅಂದಹಾಗೆ, ಕೀರ್ತಿ- ಅನಿರುದ್ಧ್‌ ಮದುವೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಬರುವ ನಿರೀಕ್ಷೆಯಿದೆ. ಈ ಪೈಕಿ ಅನಾರೋಗ್ಯದಿಂದ ಹಾಸಿಗೆ ಹಿಡಿದು, ಈಗ ಪರವಾಗಿಲ್ಲ ಎಂಬಂತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ವಿಷ್ಣು ಪ್ರೀತಿಯ ಗೆಳೆಯ ರಜನೀಕಾಂತ್‌ ಪ್ರಮುಖರು. ಚಿತ್ರರಂಗದ ದೊಡ್ಡ ದಂಡು ಅಂದು ನೆರೆಯುವುದು ಖಚಿತ. ಮದುವೆಯನ್ನು ವಿಷ್ಣು ಭಾರೀ ಅದ್ಧೂರಿಯಾಗೇ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ- ಮದುವೆಯ ಪ್ರತಿ ಕರೆಯೋಲೆಗೆ ಆಗಿರುವ ಕನಿಷ್ಠ ಖರ್ಚು 350 ರುಪಾಯಿ; ಅದೂ ರಿಸೈಕಲ್ಡ್‌ ಕಾಗದದಿಂದ ಮಾಡಿದ ಹೊರತೂ ! ಅನಿರುದ್ಧ್‌- ಕೀರ್ತಿ ಮದುವೆಗೆ ನೀವು ಹೋಗುತ್ತೀರಾ?

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...